ತಾಜಾ ಸುದ್ದಿ: ಬೆಂಗಳೂರಿಗೆ ಮಳೆ ಎಚ್ಚರಿಕೆ | GTTC ಅರ್ಜಿ ಆರಂಭ | IPL ಫೈನಲ್ ಇಂದು
ಈತ ಬಿಜೆಪಿ ಕಾರ್ಯಕರ್ತ, ರಾಮೇಶ್ವರಂ ಕೆಫೆ ಬಾಂಬ್ ಪ್ರಕರಣದ ಶಂಕಿತ..ಈತನನ್ನು ಬಂಧಿಸಿದ ಎನ್ ಐ ಎ
ಬೆಂಗಳೂರು ನಗರದಲ್ಲಿ ನಡೆದ ರಾಮೇಶ್ವರಂ ಕೆಫೆ ಬಾಂಬ್ ಪ್ರಕರಣ. ನಮ್ಮ ಮಾಧ್ಯಮಗಳಿಗೆ ಹಲವು ದಿನಗಳ ಕಾಲ ಭಾರಿ ಆಹಾರವನ್ನೇ ಒದಗಿಸಿತ್ತು. ಇದು ಅಲ್ಪಸಂಖ್ಯಾತ ಸಮುದಾಯದವರೇ ನಡೆಸಿದ ಬಾಂಬ್ ಸ್ಪೋಟ ಎಂಬ ತೀರ್ಮಾನಕ್ಕೆ ನಮ್ಮ ಮಾಧ್ಯಮಗಳು ಬಂದು ಬಿಟ್ಟಿದ್ದವು. ಇದಕ್ಕೆ ಸಂಬಂಧಿಸಿದಂತೆ ನೋರಾರು ವರದಿಗಳು ಬಂದವು. ಸಾಮಾನ್ಯ ಜನ ಕೂಡ ಇದನ್ನೆಲ್ಲ ನಂಬಿದರು.
ಇದಾದ ಮೇಲೆ ಎನ್ ಐ ಎ ಈ ಪ್ರಕರಣದ ಬೆನ್ನು ಹತ್ತಿ ಹೊರಟಿತು. ಸಿಸಿ ಟಿವಿ ದೃಶ್ಯಾವಳಿಗಳನ್ನು ನೋಡಿ ತನಿಖೆಯನ್ನು ಮುಂದುವರಿಸಲಾಯಿತು. ಬೆಂಗಳೂರಿನಲ್ಲಿ ಬಾಂಬ್ ಸ್ಪೋಟ ನಡೆಸಿದ ವ್ಯಕ್ತಿ ಎಲ್ಲಿಗೆ ಹೋದ ಎಲ್ಲಿಂದ ಬಂದ ಎಂಬ ಮಾಹಿತಿಯನ್ನು ಕಲೆ ಹಾಕಲಾಯಿತು.
ಕೊನೆಗೆ ಗೊತ್ತಾಗಿದ್ದು ಈ ಬಾಂಬ್ ಸ್ಪೋಟಕ್ಕೂ ಮಲೆನಾಡಿನ ತೀರ್ಥಹಳ್ಳಿಗೂ ಸಂಬಂಧ ಇದೆ ಎಂಬುದು. ಇಷ್ಟರಲ್ಲಿ ಈ ಪ್ರಕರಣವನ್ನು ರಾಜಕೀಯವಾಗಿ ಬಳಸಿಕೊಳ್ಳಲು ಬಿಜೆಪಿ ಸಿದ್ದವಾಗಿತ್ತು. ಅಲ್ಪಸಂಖ್ಯಾತರು ಮತ್ತು ಬಹುಸಂಖ್ಯಾತರ ನಡುವೆ ಕಂದಕ ಸೃಷ್ಟಿಸುವ ಕೆಲಸವೂ ಯಶಸ್ವಿಯಾಗಿ ನಡೆಯಿತು.
ಈಗ ತೀರ್ಥಹಳ್ಳಿಯ ಒಬ್ಬ ವ್ಯಕ್ತಿಯನ್ನು ಎನ್ ಐ ಎ ಬಂಧಿಸಿದೆ. ಈತ ಬಿಜೆಪಿ ಕಾರ್ಯಕರ್ತ. ಉನ್ನತ ಮೂಲಗಳ ಪ್ರಕಾರ ಈ ವ್ಯಕ್ತಿಗೂ ಬಾಂಬ್ ಸ್ಪೋಟಕ್ಕೂ ಸಂಬಂಧ ಇದೆ.
ಈತನ ಫೋಟೋವನ್ನು ನೋಡಿಬಿಡಿ. ಈತನ ಹೆಸರು ಸಾಯಿ ಪ್ರಸಾದ್. ಈತ ಬಿಜೆಪಿ ಸಕ್ರಿಯ ಕಾರ್ಯಕರ್ತ. ಕಳೆದ ವಾರ ಇಬ್ಬರು ಮೊಬೈಲ್ ಅಂಗಡಿಯ ಕೆಲಸ ಗಾರರನ್ನು ಪ್ರಶ್ನಿಸಿದಾಗ ಇವನ ಹೆಸರು ಹೊರ ಬಿತ್ತು. ಈಗ ಅವನನ್ನು ಬಂಧಿಸಿ ಮುಂದಿನ ವಿಚಾರಣೆ ನಡೆಸಲಾಗುತ್ತಿದೆ.
