ನವದೆಹಲಿ : ನೈಜ ವಿಚಾರಗಳಿಂದ ಜನರ ಲಕ್ಷ್ಯ ಬೇರೆಡೆ ಸೆಳೆಯಲು ಪ್ರಧಾನಿ ನರೇಂದ್ರ ಮೋದಿ ಅವರು ಕುತಂತ್ರ ಅದೇ ಸಂಪತ್ತಿನ ಪುನರ್ ಹಂಚಿಕೆ- ರಾಹುಲ್ ಗಾಂಧಿ ಪ್ರಧಾನಿ ನರೇಂದ್ರ ಮೋದಿ ನೈಜ ವಿಷಯಗಳಿಂದ ಜನರ ಚಿತ್ತವನ್ನು ಬೇರೆಡೆ ಸೆಳೆಯುವ ಕೆಲಸದಲ್ಲಿ ನಿರತರಾಗಿದ್ದಾರೆ. ಅದು ಸಂಪತ್ತಿನ ಪುನರ್ ಹಂಚಿಕೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆರೋಪಿಸಿದ್ದಾರೆ.

ನಿರುದ್ಯೋಗ ಮತ್ತು ಹಣ ದುಬ್ಬರದ ಸಮಸ್ಯೆ ಎಲ್ಲರನ್ನು ಹೈರಾಣಾಗಿಸಿದೆ, ಆದರೆ ಈ ವಿಚಾರಗಳ ಬಗ್ಗೆ ಜನ ಯೋಚಿಸದಂತೆ ಮಾಡಲು ಪ್ರಧಾನಿ ಯತ್ನಿಸುತ್ತಿದ್ದಾರೆ. ಎವರಿ ಥಿಂಗ್ ಇಸ್ ಫೈನ್ ಎಂದು ಪ್ರತಿಬಿಂಬಿಸುವ ಯತ್ನ ಅವರದು ಎಂದು ರಾಹುಲ್ ಟೀಕಿಸಿದರು.

ಮೋದಿಯವರು ವಿಷದ ಭಾಷೆಯ ಬಳಕೆ ಮಾಡುತ್ತಿದ್ದಾರೆ. ಜನರು ನೈಜ ವಿಚಾರಗಳ ಬಗ್ಗೆ ಯೋಚಿಸದಂತೆ ಮಾಡಲು ಅವರ ಮನಸ್ಸನ್ನು ಬೇರೆಡೆ ತಿರುಗಿಸುವ ಕೆಲಸ ಮಾಡುತ್ತಿದ್ದಾರೆ ಎಂದೂ ಅವರು ಹೇಳಿದರು

Author

Leave a Reply

Your email address will not be published. Required fields are marked *