ಬೆಂಗಳೂರು : ಬೆಂಗಳೂರು ದಕ್ಷಿಣ ಕ್ಷೇತ್ರದಿಂದ ಸ್ಪರ್ಧಿಸುತ್ತಿರುವ ತೇಜಸ್ವಿ ಸೂರ್ಯ ಅವರಿಗೆ ಗುರು ರಾಘವೇಂದ್ರ ಉರುಳಾಗಿದ್ದಾರೆ. ಗುರು ರಾಘವೇಂದ್ರ ಸಹಕಾರಿ ಬ್ಯಾಂಕ್ ಈ ಬ್ಯಾಂಕ್ ನಲ್ಲಿ ನಡೆದ ಅಕ್ರಮ ವ್ಯವಹಾರದಲ್ಲಿ ಸಾವಿರಾರು ಠೇವಣಿದಾರರು ಹಣ ಕಳೆದುಕೊಂಡು ಬೀದಿಗೆ ಬಂದಿದ್ದಾರೆ.
ಇದು ಹೇಳಿ ಕೇಳಿ ಬ್ರಾಹ್ಮಣರ ಸಹಕಾರಿ ಬ್ಯಾಂಕ್. ತೇಜಸ್ವಿ ಸೂರ್ಯ ಕೂಡ ಬ್ರಾಹ್ಮಣ. ಚುನಾವಣೆ ಸಂದರ್ಭದಲ್ಲಿ ಇಲ್ಲಿ ಸಭೆ ಕರೆಯಲಾಗಿತ್ತು. ದುಡ್ದು ಕಳೆದುಕೊಂಡವರು ಪ್ರಶ್ನೆ ಕೇಳಿದರು. ಠೇವಣಿ ಹಣ ವಾಪಸ್ಸಿನ ಬಗೆ ಮಾತನಾಡಿದರು. ದುಡ್ದು ಕಳೆದುಕೊಂಡವರಿಗೆ ಕೋಪ ಬಂದಿತ್ತು.
ತೇಜಸ್ವಿ ಸೂರ್ಯ ಈ ಸಂದರ್ಭದಲ್ಲಿ ಸಿಟ್ಟು ಮಾಡಿಕೊಳ್ಳುವಂತಿರಲಿಲ್ಲ. ಆದರೂ ಕೋಪ ಮಾಡಿಕೊಂಡರು. ಜಗಳ, ಗದ್ದಲವಾಯಿತು. ತೇಜಸ್ವಿ ಸೂರ್ಯ ಕಳಾಹೀನರಾಗಿ ಸಭಾತ್ಯಾಗ ಮಾಡಿದರು.
ಬೆಂಗಳೂರು ದಕ್ಷಿಣದ ಸಂಸದ 5 ವರ್ಷದುದ್ದಕ್ಕೂ ದೋಸೆ ತಿಂದುಕೊಂಡು, ಫುಟ್ ಬಾಲ್ ಆಡಿಕೊಂಡು, ಮೋಜು ಮಾಡಿಕೊಂಡು ಕಾಲ ಕಳೆದಿದ್ದರು, ಗುರು ರಾಘವೇಂದ್ರ ಸಹಕಾರಿ ಬ್ಯಾಂಕ್ ನಲ್ಲಿ ಹಣ ಕಳೆದುಕೊಂಡ ಸಂತ್ರಸ್ತರ ಸಮಸ್ಯೆಯನ್ನು ಒಂದು ದಿನವೂ ಆಲಿಸದ ತೇಜಸ್ವಿ ವಿರುದ್ಧ ಜನ ಆಕ್ರೋಶ ವ್ಯಕ್ತಪಡಿಸಿದ್ದಾರೆ ಎಂಬುದು ಮತದಾರರ ದೂರು.
