ಬೆಂಗಳೂರು : ನಾನು ದಾರಿ ತಪ್ಪಿದ್ದೆ. ನನ್ನನ್ನು ನನ್ನ ಹೆಂಡತಿ ಸರಿ ದಾರಿಗೆ ತಂದಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ. ಆ ಮೂಲಕ ಗಂಡಂದಿರು ದಾರಿ ತಪ್ಪಿದಾಗ ಹೆಂಡಂದಿರು ಅವರನ್ನು ಸರಿ ದಾರಿಗೆ ತರಬೇಕು ಎಂಬ ಸಲಹೆಯನ್ನು ಅವರು ನೀಡಿದ್ದಾರೆ.
ಆದರೆ ತಾವು ದಾರಿ ತಪ್ಪಿದ ಬಗ್ಗೆ ಹೆಚ್ಚಿನ ವಿವರ ನೀಡಿಲ್ಲ. ತಾವು ದಾರಿ ತಪ್ಪಿ ಹೋಗಿದ್ದು ಎಲ್ಲಿಗೆ ಎಂಬ ವಿವರವೂ ಅವರ ಮಾತಿನಲ್ಲಿ ಇಲ್ಲ. ಹಾಗೆ ಇವರು ದಾರಿ ತಪ್ಪಿದಾಗ ಅವರ ಹೆಂಡತಿ ಅರ್ಧ ದಾರಿಯಲ್ಲೇ ವಾಪಸ್ಸು ಕರೆದುಕೊಂಡು ಬಂದರೆ ಅಥವಾ ದಾರಿ ಕ್ರಮಿಸಿದ ಮೇಲೆ ವಾಪಸು ಕರೆದುಕೊಂಡು ಬಂದರೆ ಎಂಬ ಬಗ್ಗೆಯೂ ಕುಮಾರಸ್ವಾಮಿ ವಿವರ ನೀಡಿಲ್ಲ.
ಗ್ಯಾರೆಂಟಿ ಯೋಜನೆಯಿಂದ ಹಳ್ಳಿ ಹೆಣ್ಣುಮಕ್ಕಳು ದಾರಿ ತಪ್ಪುತ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್ಡಿ ಕುಮಾರಸ್ವಾಮಿ ಪ್ರಚಾರ ಸಭೆಯಲ್ಲಿ ಹೇಳಿದ್ದರು. ಇದು ವಿವಾದಕ್ಕೆ ಕಾರಣವಾಗಿತ್ತು,
ಬೆಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕುಮಾರಸ್ವಾಮಿ ನಾನು ಹೆಣ್ಣುಮಕ್ಕಳನ್ನು ಅವಮಾನಿಸಿಲ್ಲ. ಮಹಿಳೆಯರ ಬದುಕು ಸರಿಪಡಿಸಬೇಕು ಅಂತ ಹೇಳಿದ್ದೇನೆ. ಗ್ಯಾರಂಟಿ ಕೊಟ್ಟು ಮಹಿಳೆಯರಿಗೆ ಅನ್ಯಾಯ ಮಾಡಿದ್ದಾರೆ ಅನ್ನೋದನ್ನ ಹೇಳಿದ್ದೇನೆ. ಆದ್ರೆ ಕಾಂಗ್ರೆಸ್ ನಾಯಕರು ಅವರಿಗೆ ಬೇಕಾದಂತೆ ನನ್ನ ಹೇಳಿಕೆಯನ್ನ ಬಳಸಿಕೊಂಡಿದ್ದಾರೆ. ನನ್ನ ಹೇಳಿಕೆ ದುಖಃಕ್ಕೆ ಒಳಗಾಗುವ ಹಾಗೆ ಮಾಡಿದರೆ ವಿಷಾದ ವ್ಯಕ್ತಪಡಿಸುತ್ತೇನೆ ಎಂದರು.
ಕಾಂಗ್ರೆಸ್ ನೀಡಿರುವ 5 ಗ್ಯಾರಂಟಿ ಪಿಕ್ ಪ್ಯಾಕೇಟ್ ಗ್ಯಾರಂಟಿ ಎಂದ್ದು ಕುಮಾರಸ್ವಾಮಿ ಆರೋಪಿಸಿದರು.







