ಬೆಂಗಳೂರು : ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಅವರು ಬಿಜೆಪಿ ಸೇರುವ ನಿರ್ಧಾರವನ್ನು ಕೈಗೊಂಡಿದ್ದಾರೆ. ಶನಿವಾರ ಏಪ್ರಿಲ್ 6 ರಂದು ಅವರು ಅಧಿಕೃತವಾಗಿ ಬಿಜೆಪಿ ಸೇರಲಿದ್ದಾರೆ.
ಬಿಜೆಪಿ ಮತ್ತು ಜೆಡಿಎಸ್ ನ ಅಭ್ಯರ್ಥಿ ಹೆಚ್.ಡಿ. ಕುಮಾರಸ್ವಾಮಿ ಅವರಿಗೆ ಸುಮಲತಾ ಬೆಂಬಲಿಸಲಿದ್ದಾರೆ.
ಇದರೊಂದಿಗೆ ಮಂಡ್ಯ ರಾಜಕೀಯ ಒಂದು ಸುತ್ತು ಬಂದಂತಾಗಿದೆ.
ಪರಸ್ಪರ ಕಚ್ಚಾಡಿಕೊಂಡವರು, ದೂಷಣೆ ಮಾಡಿದವರು ಒಂದಾಗುತ್ತಿರುವ ಸೋಜಿಗ ಇದು. ಸುಮಲತಾ ಅವರನ್ನು ಕುಮಾರಣ್ಣ ಬಾಯಿಗೆ ಬಂದಂತೆ ಬೈದು ಹೆಚ್ಚು ಸಮಯವಾಗಿಲ್ಲ. ಈಗ ಅವರು ದೋಸ್ತಿಗಳಾಗಿದ್ದಾರೆ. ಸುಮಲತಾ ಅವರ ಸ್ವಾಭಿಮಾನ ಕಾವೇರಿ ನಡಿಯಲ್ಲಿ ಕೊಚ್ಚಿ ಹೋಗಿದೆ.
