ನವದೆಹಲಿ : ತಿಹಾರ್ ಜೈಲಿನಲ್ಲಿರುವ ಅರವಿಂದ್ ಕೇಜ್ರಿವಾಲ್ ಅವರ ಆರೋಗ್ಯ ಕೈಕೊಟ್ಟಿದೆ. ಆಮ್ ಆದ್ಮಿ ಪಕ್ಷದ ಮೂಲಗಳ ಪ್ರಕಾರ ಕೇಜ್ರಿವಾಲ್ ಅವರ ತೂಕ ಇಳಿಯುತ್ತಿದೆ. ಈಗಾಗಲೇ ಸುಮಾರು ಐದು ಕೆಜಿಯಷ್ಟು ತೂಕ ಇಳಿದಿದೆ.
ತಮ್ಮ ಬಂಧನದ ಸಂದರ್ಭದಲ್ಲಿ 55 ಕೆ ಜಿ ತೂಕವಿದ್ದ ಕೇಜ್ರಿವಾಲ್ ಈಗ ನಾಲ್ಕುವರೆ ಕೆ ಜಿ ಕಡಿಮೆಯಾಗಿದ್ದಾರೆ.
ಆದರೆ ಜೈಲು ಅಧಿಕಾರಿಗಳ ಪ್ರಕಾರ ಕೇಜ್ರಿವಾಲ್ ಅವರ ಆರೋಗ್ಯದಲ್ಲಿ ಅಂತಹ ವ್ಯತ್ಯಾಸವಾಗಿಲ್ಲ. ಅವರ ಬಂಧನದ ಸಂದರ್ಭದಲ್ಲಿ ಸಕ್ಕರೆ ಪ್ರಮಾಣದಲ್ಲಿ ಸ್ವಲ್ಪ ವ್ಯತ್ಯಾಸವಾಗಿತ್ತು. ಆದರೆ ಈಗ ಸಕ್ಕರೆ ಪ್ರಮಾಣ ಸರಿಯಾಗಿದೆ.
ಕೇಜ್ರಿವಾಲ್ ಅವರಿಗೆ ಉಸಿರಾಟದ ಸಮಸ್ಯೆ ಕೂಡ ಇದೆ. ಈ ಬಗ್ಗೆ ಅವರು ಆಯುರ್ವೇದ ಚಿಕಿತ್ಸೆಯನ್ನು ಪಡೆದಿದ್ದರು. ಅವರ ಆರೋಗ್ಯದ ಕಾರಣದಿಂದ ಮನೆಯಿಂದ ಆಹಾರವನ್ನು ತರಿಸಿಕೊಳ್ಳಲು ಅನುಮತಿ ನೀಡಲಾಗಿದೆ. ಅವರು ಮನೆಯ ಊಟವನ್ನೇ ಮಾಡುತ್ತಿದ್ದಾರೆ ಎಂದೂ ಜೈಲು ಅಧಿಕಾರಿಗಳೂ ತಿಳಿಸಿದ್ದಾರೆ.







