ಸದ್ಯ ಪ್ರಯಾಗ್ ರಾಜ್ ನಲ್ಲಿ ಮಹಾ ಕುಂಭ ಮೇಳ ನಡೆಯುತ್ತಿದೆ. ಬಹಳ ವಿಜೃಂಭಣೆ ಮತ್ತು ಸಡಗರದಿಂದ ಸಾಗುತ್ತಿದ್ದು ಬರೋಬ್ಬರಿ 144 ವರ್ಷಗಳ ಬಳಿಕ ನಡಿತಾ ಇದೆ ಎಂದು ತುಂಬಾ ಖುಷಿಯಾಗುತ್ತೆ. ಈ ಕುಂಭಮೇಳ ಪ್ರಮುಖವಾಗಿ ನಾಲ್ಕು ಮುಖ್ಯ ಸ್ಥಳಗಳಲ್ಲಿ ನಡೆಯುತ್ತದೆ ಅವುಗಳೆಂದರೆ ಉಜ್ಜಯಿನಿ, ಪ್ರಯಾಗ್ರಾಜ್, ನಾಸಿಕ್ ಹಾಗೂ ಹರಿದ್ವಾರ ಈ ಸ್ಥಳಗಳಲ್ಲಿ ಕುಂಭ ಮೇಳವು ನಡೆಯುತ್ತದೆ.
ಕುಂಭ ಮೇಳವು ನಾಲ್ಕು ನದಿ ತೀರದ ಯಾತ್ರಾ ಸ್ಥಳಗಳಲ್ಲಿ ನಡೆಯುತ್ತದೆ. ಗಂಗಾ, ಯಮುನಾ, ಸರಸ್ವತಿ ಹಾಗೂ ಗೋದಾವರಿ ಇವುಗಳಾಗಿವೆ. ಕುಂಭ ಮೇಳವನ್ನು ನಡೆಸಲು ಒಂದು ಸೈದ್ಧಾಂತಿಕ ಪುರಾವೆ ಸಹ ಕಾಣಬಹುದು. ಹಿಂದೆ ಸಮುದ್ರ ಮಂಥನ ನಡೆದ ಸಂದರ್ಭದಲ್ಲಿ ಮಂಥನದಲ್ಲಿ ಉತ್ಪತ್ತಿಯಾದ ಕೆಲವು ಅಮೂಲ್ಯ ವಸ್ತುಗಳ ಪೈಕಿ ಅಮೃತ ಕಳಶವು ಒಂದು. ಈ ಸಂದರ್ಭದಲ್ಲಿ ದಾನವರಿಗೂ ಮತ್ತು ದೇವತೆಗಳಿಗೂ ಜಗಳ ಏರ್ಪಟ್ಟಾಗ ಕುಂಭದಿಂದ ನಾಲ್ಕು ಹನಿ ಅಮೃತ ಕೆಲವು ಯಾತ್ರಾ ಸ್ಥಳಗಳಲ್ಲಿ ಬಿದ್ದಿರುತ್ತೆ.
ಈ ಕುಂಭಮೇಳದಲ್ಲಿ ಮುಖ್ಯವಾಗಿ ನಾಲ್ಕು ವಿಧಗಳನ್ನು ಕಾಣಬಹುದಾಗಿದೆ. ಅವುಗಳೆಂದರೆ ಪ್ರತಿ ಮೂರು ವರ್ಷಗಳಿಗೊಮ್ಮೆ ಕುಂಭಮೇಳ, ಪ್ರತಿ ಆರು ವರ್ಷಗಳಿಗೊಮ್ಮೆ ಅರ್ಧ ಕುಂಭಮೇಳ, ಪ್ರತಿ 12 ವರ್ಷಗಳಿಗೊಮ್ಮೆ ಪೂರ್ಣ ಕುಂಭಮೇಳ ಹಾಗೆ ಪ್ರತಿ 144 ವರ್ಷಗಳಿಗೊಮ್ಮೆ ಮಹಾ ಕುಂಭಮೇಳವನ್ನು ನಡೆಸಲಾಗುತ್ತದೆ.
ಈ ಮಹಾ ಕುಂಭಮೇಳದ ಸಂದರ್ಭದಲ್ಲಿ ಯಶಸ್ಸು ನಿಮ್ಮ ಕೈ ಸೇರಬೇಕಾ? ಲೈಫಲ್ಲಿ ಏನಾದ್ರೂ ಸಾಧಿಸ್ಬೇಕಾ? ಲೈಫ್ ಅಲ್ಲಿ ಅನ್ಕೊಂಡಿದ್ದೆಲ್ಲ ನಿಮ್ಮ ಕೈ ಸೇರಬೇಕಾ? ಜೀವನದಲ್ಲಿ ಸಕ್ಸಸ್ ಕಾಣಬೇಕಾ? ಹಾಗಿದ್ರೆ ಈ ಕೆಲಸ ಈ ಕೆಲಸ ತಪ್ಪದೇ ಮಾಡೋದನ್ನಂತೂ ಮರಿಬೇಡಿ.
ಬೆಳಗ್ಗೆ 5 ಗಂಟೆಗೆ ಎದ್ದು ಹಲ್ಲುಜ್ಜಿ ಅರ್ಧ ಗಂಟೆ ಧ್ಯಾನ ಮಾಡಿ ನಂತರ ಭಗವದ್ಗೀತೆ ಪಠಣ ಮಾಡಿದ್ರೆ ಯಶಸ್ಸು ಖಂಡಿತ ನಿಮಗೆ ಕಟ್ಟಿಟ್ಟ ಬುತ್ತಿ. ಇದಕ್ಕೆ ಹಿಂದಿನ ದಿನ ತಣ್ಣೀರು ಅಥವಾ ಬಿಸಿ ನೀರಿನಿಂದ ಸ್ನಾನ ಮಾಡಿ ನಂತರ ಈ ಕೆಲಸಗಳನ್ನು ಕೈಗೊಂಡರೆ ಸಕ್ಸಸ್ ಅನ್ನೋದು ನಿಮ್ಮನ್ನ ಹುಡುಕೊಂಡು ಬರುತ್ತೆ ಹಿಂದಿನಿಂದಲೇ ಈ ಕೆಲಸ ಮಾಡಿ. ಈ ಕುಂಭಮೇಳ ಜನವರಿ 13 ರಿಂದ ಫೆಬ್ರವರಿ 26ರವರೆಗೆ ನಡೆಯುತ್ತದೆ.
ಈ ಕುಂಭಮೇಳದಲ್ಲಿ ಋಷಿಮುನಿಗಳು, ಸಾಧುಗಳು, ಸಂತರು, ನಾಗಸಾಧುಗಳು ಹಾಗೆ ಸಾಮಾನ್ಯ ಜನರು ಪಾಲ್ಗೊಳ್ಳಲಿದ್ದು, ಇಂತಹ ಸಂದರ್ಭದಲ್ಲಿ ಕೆಲವು ಮಹಾಸ್ನಾನಗಳು ನಡೆಯುತ್ತದೆ. ಹಾಗಾಗಿ ಈ ಸಮಯದಲ್ಲೇ ಧ್ಯಾನವನ್ನು ಕೈಗೊಂಡರೆ ಅನ್ಕೊಂಡಿದ್ದೆಲ್ಲ ಕೈ ಸೇರುತ್ತೆ ಅನ್ನೋದಂತು ನಿಜ. ಹಾಗಿದ್ರೆ ಇನ್ನು ಯಾಕ್ ತಡ ಈ ಕೆಲಸವನ್ನು ಇವತ್ತಿನಿಂದ ಆರಂಭ ಮಾಡ್ಕೊಳ್ಳಿ.
