ನಾವು ಹಿಂದಿನ ಸಂಚಿಕೆಯಲ್ಲಿ ದೇಹದ ಮಾತು ಕೇಳುವ ಕುರಿತು ಪ್ರಾಥಮಿಕ ಮಾಹಿತಿ ನೀಡಿದ್ದೆವು. ಅದು ತುಂಬಾ ಸರಳ. ಮತ್ತು ಇದಕ್ಕೆ ಬೇಕಾದ್ದು ಒಂದು ದೀರ್ಘ ಮೌನ. ನೀವು ಮೌನವಾಗಿ ಇರುವುದನ್ನು ಕಲಿಯದಿದ್ದರೆ ದೇಹದ ಮಾತನ್ನು ಕೇಳಿಸಿಕೊಳ್ಳಲಾರಿರಿ. ದೇಹದ ಮಾತು ಕೇಳಿಸಿಕೊಳ್ಳದಿದ್ದರೆ ನಿಮ್ಮ ಯಾವುದೇ ರೋಗ ಗುಣವಾಗುವುದಿಲ್ಲ. ದೇಹವೇ ರೋಗದ ಕಣಜವಾಗುತ್ತದೆ.
ದೇಹದ ಮಾತು ಕೇಳುವುದಕ್ಕೆ ಮೊದಲು ಅದಕ್ಕೆ ಪೂರ್ವ ಸಿದ್ಧತೆ ಬೇಕು. ಮೊದಲು ದೇಹದ ಮಾತು ಕೇಳಲು ದೇಹ ಮತ್ತು ಮನಸ್ಸು ಎರಡೂ ಸಿದ್ದವಾಗಬೇಕು. ನಮ್ಮ ದೇಹ ಬಿಟ್ಟು ಮನಸ್ಸು ಇಲ್ಲ. ಮನಸ್ಸು ಬಿಟ್ಟು ದೇಹವಿಲ್ಲ. ಅದೊಂದು ಜೋಡಿ. ಜೋಡಿ ಎತ್ತು. ಒಂದು ಎತ್ತು ಒಂದೆಡೆ ಓಡಿದರೆ ಇನ್ನೊಂದು ಎತ್ತು ಮತ್ತೊಂದು ಕಡೆ ಓಡಿದರೆ ಬಂಡಿ ಮುಂದೆ ಸಾಗಲಾರದು. ಎರಡೂ ಜೊತೆಯಾಗಿ ಓಡಲು ತರಬೇತಿಯ ಅಗತ್ಯವಿದೆ.
ಅದು ದೇಹದ ಮಾತು ಕೇಳುವಾದ ನಿಮ್ಮ ಮನಸ್ಸು ಮತ್ತು ದೇಹ ಸಿದ್ದವಾಗುವ ಬಗೆ, ದೇಹಕ್ಕೆ ಶಿಚಿತ್ವ ಬಹಳ ಮುಖ್ಯ. ದೇಹದ ಜೊತೆ ಮನಸ್ಸಿಗೂ ಶುಚಿತ್ವ ಬೇಕು. ಶುಚಿತ್ವ ಇಲ್ಲದೇ ನೇವು ದೇಹದ ಮಾತು ಕೇಳಿಸಿಕೊಳ್ಳಲಾರಿರಿ.
ಮೊದಲನೆಯದಾಗಿ ದೆಹದ ಶುಚಿತ್ವಕ್ಕೆ ಬರೋಣ. ಸ್ನಾನ ಮಾಡುವುದು ಬಹಳ ಮುಖ್ಯ. ಅದೂ ಸಹ ತಣ್ಣೀರಿನಲ್ಲಿ ಸ್ನಾನ ಮಾಡುವುದು ಬಹಳ ಒಳ್ಳೆಯದು. ಬೆಳಿಗ್ಗೆ ಎದ್ದ ತಕ್ಷಣ ಅಂದರೆ 7 ಗಂಟೆಗೆ ಮೊದಲು, ಸೂರ್ಯ ಬರುವುದಕ್ಕೆ ಮೊದಲು ಸ್ನಾನ ಮಾಡಿ. ಸ್ನಾನ ಮಾಡುವಾಗ ಮೊದಲು 7 ಬಿಂದಿಗೆ ನೀರನ್ನು ತಲೆಗೆ ಹಾಕಿಕೊಳ್ಳಿ. ತಲೆಯಿಂದ ಹರಿದ ನೀರು ಇಡೀ ದೇಹವನ್ನು ನೆನೆಸಲಿ.
ದೇಹಕ್ಕೆ ಸೋಪು ಹಾಕಲೇ ಬೇಕು ಎಂದೇನೂ ಇಲ್ಲ. ಇವತ್ತಿನ ರಾಸಾಯನಿಕ ಸಾಬೂನುಗಳು ದೇಹವನ್ನು ಹಾಳು ಮಾಡುತ್ತವೆ. ಇದಕ್ಕಾಗಿ ಸಾಧ್ಯವಾದರೆ ಶೀಗೆ ಪುಡಿಯನ್ನು ಬಳಸುವುದು ಉತ್ತಮ. ಅದು ಅಂಗಡಿಗಳಲ್ಲಿ ಸಿಗುವ ಶಿಕೆಕಾಯಿ ಪುಡೀ ಅಲ್ಲ. ಅದನ್ನು ಮಲೆನಾಡು ಪ್ರದೇಶದಿಂದ ತಂದರೆ ಒಳ್ಳೆಯದು.
ಸುಮಾರು 15 ನಿಮಿಷಗಳ ಕಾಲ ಕನಿಷ್ಟ ಎಂದರೂ ಸ್ನಾನ ಮಾಡಬೇಕು. ಅರ್ಧ ಗಂಟೆ ಆದರೆ ಇನ್ನೂ ಉತ್ತಮ..
ಇದಾದ ಮೇಲೆ ಸ್ನಾನದ ಕೊಠಡಿಯಿಂದ ಹೊರಕ್ಕೆ ಬನ್ನಿ. ದೇವರ ಸ್ತೋತ್ರ ಹೇಳುವುದಿದ್ದರೆ ಹೇಳಿ. ಇದಾದ ಮೇಲೆ ದೆಹದ ಮಾತು ಕೇಳಿಸಿಕೊಳ್ಳಲು ಇನ್ನೂ ಕೆಲವು ಹೆಜ್ಜೆಗಳಿವೆ, ದೇಹ ಶುದ್ಧವಾದ ಮೇಲೆ ಮನಸ್ಸು ಸಿದ್ದವಾಗಬೇಕು. ಮನಸ್ಸು ದೇಹ ಎರಡೂ ಸಿದ್ಧವಾದ ಮೇಲೆ ನೀವು ದೆಹದ ಮಾತು ಕೇಳಿಸಿಕೊಳ್ಳಲು ಸಿದ್ದರಾದಂತೆ.
ಆ ವಿವರಗಳನ್ನು ಮುಂದಿನ ಸಂಚಿಕೆಯಲ್ಲಿ ನೀಡುತ್ತೇವೆ.
:
