ಕೇಂದ್ರದ ಮಾಜಿ ಸಚಿವ ಹಿರಿಯ ರಾಜಕಾರಣಿ ಶ್ರೀನಿವಾಸ್ ಪ್ರಸಾದ್ ಇಂದು ಬೆಳಗಿನ ಜಾವ ಅಸು ನೀಗಿದರು. ಅವರು ಮೂತ್ರಕೋಶದ ಸಮಸ್ಯೆಯಿಂದ ಬಳಲುತ್ತಿದ್ದರು. ಈಗ ಎರಡು ದಿನಗಳ ಹಿಂದೆ ಮೂತ್ರಕೋಶದ ಸೋಂಕಿನಿಂದಾ ಆಸ್ಪತ್ರೆಗೆ ಸೇರಿಸಲಾಗಿತ್ತು.
ರಾಜ್ಯದ ಹಿರಿಯ ರಾಜಕಾರಣಿಗಳಲ್ಲಿಒಬ್ಬರಾಗಿದ್ದ ಶ್ರೀನಿವಾಸ್ ಪ್ರಸಾದ್ ೭೦ ರ ದಶಕದಲ್ಲಿ ರಜಕಾರಣ ಪ್ರವೇಶಿಸಿದರು. ಅವರು ೬ ಬಾರಿ ಸಂಸದರಾಗಿ ಲೋಕಸಭೆಯನ್ನು ಪ್ರವೇಶಿಸಿದ್ದರು. ಅಟಲ್ ಬಿಹಾರಿ ವಾಜಪೇಯಿ ಸರ್ಕಾರದಲ್ಲಿ ಆಹಾರ ಸಚಿವರಾಗಿ ಕೆಲಸ ಮಾಡಿದ್ದರು. ಎರಡು ಬಾರಿ ರಾಜ್ಯ ವಿಧಾನ ಸಭೆಗೆ ಆಯ್ಕೆಯಾಗಿದ್ದ ಅವರು ಸಿದ್ದರಾಮಯ್ಯ ಸರ್ಕಾರದಲ್ಲಿ ಕಂದಾಯ ಸಚಿವರಾಗಿಯೂ ಕಾರ್ಯನಿರ್ವಹಿಸಿದ್ದರು.
ಸಿದ್ದರಾಮಮಯ್ಯ ಸಚಿವ ಸಂಪುಟದಿಂದ ಕೈ ಬಿಟ್ಟಾಗ ಬೇಸರದಿಂದ ಪಕ್ಷವನ್ನು ತೊರೆದಿದ್ದರು. ಅವರಿಗೆ ರಾಜಕಾರಣ ಎಂದರೆ ಅದು ಕೇವಲ ಅಧಿಕಾರಕ್ಕಾಗಿ ನಡೆಸುವ ಆಟ ಆಗಿರಲಿಲ್ಲ. ಸಾಂಸ್ಕೃತಿಕ ಸಾಹಿತ್ಯ ವಲಯಗಳ ಜೊತೆ ನಂಟು ಹೊಂದಿದ್ದ ಪ್ರಸಾದ್ ಬದ್ಧತೆ ಇದ್ದ ರಾಜಕಾರಣಿಯಾಗಿದ್ದರು.

Leave a Reply

Your email address will not be published. Required fields are marked *