ಬೆಂಗಳೂರು : ನೋವಿನಿಂದ ತನ್ನ ಬದುಕು ಕಟ್ಟಿಕೊಂಡ ನಟಿ. ಅನುಭವಿಸಿದ ಕಷ್ಟ ಕಾರ್ಪಣ್ಯ ಕಡಿಮೆ ಏನಲ್ಲ. ಆದರೆ ಆಕೆಯ ಮನಸ್ಸು ಇಷ್ಟು ಹೊಲಸಾ ? ಇಷ್ಟು ಗಲೀಜಾ ? ಈಕೆ ಕನ್ನಡದ ಅದ್ಭುತ ನಟಿಯರಲ್ಲಿ ಒಬ್ಬರು. ಆರತಿ, ಭಾರತಿ, ಮಂಜುಳಾ, ಜಯಂತಿ ಸಾಲಿಗೆ ಸೇರುವವಳು. ಅವಳ ಬದುಕು ನೋವಿನ ನದಿ. ಆ ಬಗ್ಗೆ ನಾನು ಮಾತನಾಡುವುದಿಲ್ಲ.

ಈಗ ಮಾತನಾಡುವುದು ಈಕೆಯ ಚುನಾವಣಾ ಪ್ರಚಾರ ಭಾಷಣದ ಬಗ್ಗೆ. ಈಕೆಗೆ ಕನಿಷ್ಠ ಮಹಿಳೆಯರ ಮೇಲೂ ಗೌರವ ಇಲ್ಲವಲ್ಲ ? ಮಹಿಳೆಯರನ್ನು ಅಪ ನಂಬಿಕೆಯಿಂದ ನೋಡುವುದಾ ? ಮಹಿಳೆಯರಿಗೆ ಸ್ವಾತಂತ್ರ್ಯ ಮತ್ತು ಹಣ ಸಿಕ್ಕರೆ ಅವರು ಹಾಳಾಗುತ್ತಾರೆ ಎಂಬುದು ಇವರ ನಂಬಿಕೆಯಾ ? ಅಥವಾ ಅನುಭವವಾ ? ಇವರು ಸೇರಿದ್ದು ಕಮಲದ ಪಾರ್ಟಿಯನ್ನು. ಇದು ಅವರಿಗೆ ಬಿಟ್ಟಿದ್ದು. ಅವರು ತಮಗೆ ಇಷ್ಟವಾದ ಯಾವುದೇ ರಾಜಕೀಯ ಪಕ್ಷವನ್ನು ಸೇರಬಹುದು. ಆದರೆ ರಾಜಕೀಯ ಪಕ್ಷ ಸೇರಿದ ಹೆಚ್ಚು ಜವಾಬ್ದಾರಿಯಿಂದ ವರ್ತಿಸಬೇಕು.

ಇವರು ಕಮಲದ ಪಕ್ಷ ಸೇರಿದರು. ಪಕ್ಷವೂ ಅವರಿಗೆ ಅಲ್ಪ ಸ್ವಲ್ಪ ಅಧಿಕಾರವನ್ನು ನೀಡಿತು. ಯಾವುದೋ ಬೋರ್ಡೋ, ಬೋರ್ಡಿಗಿಲ್ಲದ ನಿಗಮವೋ ಏನನ್ನೋ ನೀಡಿತು. ಇದು ಸಾಕಾಗಿತ್ತು. ಇವರು ಕಮಲ ಪಕ್ಷಕ್ಕೇ ಹೋದ ಮೇಲೆ ಕಮಲವಾಗಲಿಲ್ಲ. ಕಮಲದ ಬುಡದ ಕೆಸರಾದರು.

ಈಗ ಮುಖ್ಯ ವಿಷಯಕ್ಕೆ ಬರೋಣ. ಇವರು ಬಿಜೆಪಿ ಪಕ್ಷದ ಸ್ಟಾರ್ ಪ್ರಚಾರಕಿ. ಪ್ರಚಾರ ಮಾಡುವುದಕ್ಕೆ ಉಡುಪಿಗೆ ಹೋಗಿದ್ದರು. ಅಲ್ಲಿ ಶಕ್ತಿ ಯೊಜನೆಯನ್ನು ಬೈಯಬೇಕು ಎಂಬ ಸೂಚನೆ ಅವರಿಗೆ ಇತ್ತೋ ಎನೋ.. ಹೋದವರೇ ಬೈಯತೊಡಗಿದರು.

ಈ ನಟಿಯ ಮಾತು ಕೇಳಿಸಿಕೊಳ್ಳಿ. ಈ ಶಕ್ತಿ ಯೋಜನೆಯಿಂದ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣದ ವ್ಯವಸ್ಥೆ ಮಾಡಲಾಗಿದೆ. ಇವರು ಉಚಿತ ಬಸ್ ಪ್ರಯಾಣದ ಅವಕಾಶ ಬಳಸಿಕೊಂಡು ದೇವಾಲಯಗಳಿಗೆ ಹೋಗ್ತಾರೋ ಇನ್ನೆಲ್ಲಿಗೆ ಹೋಗ್ತಾರೋ… ಈ ಯೋಜನೆಯಿಂದ ಮನೆಯವರಿಗೆಲ್ಲ ತೊಂದರೆಯಾಗಿದೆ. ಗಂಡಂದಿರಿಗೂ ತೊಂದರೆಯಾಗಿದೆ. ಆಟೋ ಚಾಲಕರಿಗೆ ಕೆಲಸ ಇಲ್ಲದಂತೆ ಆಗಿದೆ.

ಅವರ ಮಾತು ಇದೇ ರೀತಿ ಮುಂದುವರಿದಿತ್ತು. ಇದು ರಾಜಕೀಯ ಭಾಷಣ. ಕಮಲದ ಕೆಳಗಿನ ಕೆಸರಿನ ಭಾಷಣ. ಮನಸ್ಸಿನಲ್ಲಿ ಕೆಸರು ತುಂಬಿಕೊಂಡವರ ಭಾಷಣ. ಈಗ ಅಸಲಿ ವಿಷಯ ಎಂದರೆ ಈ ಬಗ್ಗೆ ಮಹಿಳಾ ಆಯೋಗಕ್ಕೆ ಸೂರು ಹೋಯಿತು. ಮಹಿಳಾ ಆಯೋಗ ಇವರಿಗೆ ನೋಟೀಸು ನೀಡಿದೆ. ಇಷ್ಟೇ ಕಥೆ.. ಈ ನಟಿಯ ಹೆಸರು ಶ್ರುತಿ.. ಬಿಜೆಪಿ ನಾಯಕಿ.

Leave a Reply

Your email address will not be published. Required fields are marked *