ನವದೆಹಲಿ : ಮಾಲ್ದೀವ್ ನ ಭಾರತ ವಿರೋಧಿ ಅಧ್ಯಕ್ಷ ಮೈಜು ಅವರ ಪಕ್ಷ ದೇಶದ ಪಾರ್ಲಿಮೆಂಟ್ ಚುನಾವಣೆಯಲ್ಲಿ ಜಯಭೇರಿ ಭಾರಿಸಿದೆ. ಮೈಜು ಅವರ ಪೀಪಲ್ಸ್ ನ್ಯಾಷನಲ್ ಕಾಂಗ್ರೆಸ್ 93 ಸ್ಥಾನಗಳ ಸಂಸತ್ತಿನ 90 ಸ್ಥಾನಗಳಿಗೆ ಸ್ಪರ್ಧಿಸಿತ್ತು. ಇದುವರೆಗೆ 86 ಸ್ಥಾನಗಳ ಫಲಿತಾಂಶ ಪ್ರಕಟವಾಗಿದ್ದು ಮೈಝು ಅವರ ಪಕ್ಷ 66 ಸ್ಥಾನಗಳನ್ನು ಗೆದ್ದುಕೊಂಡಿದೆ.

ಈಗ ಮೈಝು ಅವರ ಪಕ್ಷಕ್ಕೆ ಸಂಸತ್ತಿನಲ್ಲಿ ಮೂರರಲ್ಲಿ ಎರಡರಷ್ಟು ಬಹುಮತ ದೊರಕಿದಂತಾಗಿದೆ. ಇದರೊಂದಿಗೆ ಭಾರತ ವಿರೋಧಿ ಮತ್ತು ಚೈನಾ ಪರವಾದ ನಿರ್ಧಾರಗಳನ್ನು ಕೈಗೊಳ್ಳಲು ಅಧ್ಯಕ್ಷರಿಗೆ ಸುಲಭವಾಗಲಿದೆ. ಈ ಫಲಿತಾಂಶ ಭಾರತ ಮತು ಮಾಲ್ದೀವ್ಸ್ ನಡುವಿನ ಸಂಬಂಧದ ಮೇಲೆ ಗಂಭೀರ ಪರಿಣಾಮ ಬೀರುವ ಸಾಧ್ಯತೆ ಇದೆ.

ಜೊತೆಗೆ ಮಾಲ್ದೀವ್ಸ್ ಗೆ ಚೀನಾ ಮತ್ತು ಟರ್ಕಿಯ ಸಹಾಯ ಮತ್ತು ಆಗಮನ ಭಾರತದ ದೃಷ್ಟಿಯಿಂದ ಒಳ್ಳೆಯ ಬೆಳವಣಿಗೆ ಅಲ್ಲ. ಭಾರತದ ಪಕ್ಕದಲ್ಲೇ ಚೀನಾ ಬಂದು ಕುಳಿತರೆ ಭಾರತ ಆಕಂಕಗೊಳ್ಳುವುದು ಸಹಜ.

Leave a Reply

Your email address will not be published. Required fields are marked *