ನವದೆಹಲಿ : ಈ ಬಾರಿಯ ಐಪಿಎಲ್ ನಲ್ಲಿ ಅನಿರೀಕ್ಷಿತ ಫಲಿತಾಂಶ ನೀಡುತ್ತಿರುವ ತಂಡ ಸನ್ ರೈಸರ್ಸ್ ಹೈದರಾಬಾದ್. ಈ ತಂಡ ನಿನ್ನೆ ದೆಹಲಿ ತಂಡವನ್ನು ಮಣಿಸಿತು. ಹೈದರಾಬಾದ್ ತಂಡದ ಸತತ ಐದನೆಯ ಗೆಲವು ಇದು.

ಸನ್‌ರೈಸರ್ಸ್ ಹೈದರಾಬಾದ್ ತಂಡ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು 67 ರನ್‌ಗಳಿಂದ ಮಣಿಸಿತು. ಮೊದಲು ಬ್ಯಾಟ್ ಮಾಡಿದ ಸನ್ ರೈಸರ್ಸ್ ಹೈದರಾಬಾದ್ 20 ಓವರ್ ಗಳಲ್ಲಿ 7 ವಿಕೆಟ್ ಕಳೆದುಕೊಂಡು 266 ರನ್ ಗಳಿಸಿತು. ಇದಕ್ಕೆ ಪ್ರತಿಯಾಗಿ ಡೆಲ್ಲಿ ಕ್ಯಾಪಿಟಲ್ಸ್ 199 ರನ್ ಗಳಿಗೆ ಆಲೌಟ್ ಆಯಿತು.

ಆರಂಭಿಕ ಓವರ್‌ಗಳಲ್ಲಿ ಡೆಲ್ಲಿ ತಂಡ ಹೈದರಾಬಾದ್‌ಗೆ ಹೋರಾಟ ನೀಡಬಹುದು ಅನ್ನಿಸಿತು. ಆದರೆ ಸತತ ವಿಕೆಟ್‌ಗಳ ಪತನದಿಂದ ಡೆಲ್ಲಿ ತಂಡವು ಗುರಿ ಮುಟ್ಟಲಾಗಲಿಲ್ಲ. ಡೆಲ್ಲಿ ಕ್ಯಾಪಿಟಲ್ಸ್ ತಂಡ 19.1 ಓವರ್‌ಗಳಲ್ಲಿ ಎಲ್ಲಾ ವಿಕೆಟ್‌ಗಳನ್ನು ಕಳೆದುಕೊಂಡು 199 ರನ್ ಗಳಿಸಲಷ್ಟೇ ಶಕ್ತವಾಯಿತು. ಸನ್ ರೈಸರ್ಸ್ ಹೈದರಾಬಾದ್ ತಂಡ ಐದನೇ ಗೆಲುವಿನೊಂದಿಗೆ ಪಾಯಿಂಟ್ಸ್ ಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೆ ತಲುಪಿದೆ. ಆದರೆ ಡೆಲ್ಲಿ ಕ್ಯಾಪಿಟಲ್ಸ್ ತಂಡ ಐದನೇ ಸೋಲಿನೊಂದಿಗೆ ಏಳನೇ ಸ್ಥಾನಕ್ಕೆ ಕುಸಿದಿದೆ.

267 ರನ್‌ಗಳ ಗುರಿ ಬೆನ್ನತ್ತಿದ ಡೆಲ್ಲಿ ಕಳಪೆ ಆರಂಭ ಪಡೆದಿತ್ತು. ಆರಂಭಿಕರಾದ ಡೇವಿಡ್ ವಾರ್ನರ್ (1) ಮತ್ತು ಪೃಥ್ವಿ ಶಾ (16) ಅವರ ವಿಕೆಟ್‌ಗಳನ್ನು ತಂಡ ಎರಡು ಓವರ್‌ಗಳೊಳಗೆ ಕಳೆದುಕೊಂಡಿತು. ಫ್ರೇಸರ್ 18 ಎಸೆತಗಳಲ್ಲಿ 65 ರನ್‌ಗಳ ಸ್ಫೋಟಕ ಇನ್ನಿಂಗ್ಸ್ ಆಡಿದರು. ಅಭಿಷೇಕ್ ಪೌರೆಲ್ 22 ಎಸೆತಗಳಲ್ಲಿ 42 ರನ್ ಗಳಿಸಿ ಔಟಾದರು. ಟ್ರಿಸ್ಟಾನ್ ಸ್ಟಬ್ಸ್ ಕೇವಲ 10 ರನ್ ಗಳಿಸಲಷ್ಟೇ ಶಕ್ತರಾದರು. ಲಲಿತ್ ಯಾದವ್ 7, ಅಕ್ಷರ್ ಪಟೇಲ್ 6, ಎನ್ರಿಕ್ ನಾರ್ಖಿಯಾ ಮತ್ತು ಕುಲದೀಪ್ ಯಾದವ್ ಖಾತೆ ತೆರೆಯದೆ ಔಟಾದರು. ನಾಯಕ ರಿಷಬ್ ಪಂತ್ 35 ಎಸೆತಗಳಲ್ಲಿ 44 ರನ್ ಗಳಿಸಿದರು. ಹೈದರಾಬಾದ್ ಪರ ನಟರಾಜನ್ ನಾಲ್ಕು ವಿಕೆಟ್ ಪಡೆದರು.

Leave a Reply

Your email address will not be published. Required fields are marked *