KKR vs RR IPL Highlights: ಪ್ರಬಲ ಕೊಲ್ಕತ್ತಾ ನೈಟ್ ರೈಡರ್ಸ್ ಮತ್ತು ರಾಜಸ್ಥಾನ ರಾಯಲ್ಸ್ ತಂಡದ ನಡುವಿನ ಪಂದ್ಯದಲ್ಲಿ ನೆನಪಿನಲ್ಲಿ ಉಳಿದಿದ್ದು ಎರಡು ಹೆಸರುಗಳು ಮಾತ್ರ.

ಕೆಕೆಆರ್ ನ ಸುನಿಲ್ ನಾರಾಯಣ್ ಮತ್ತು ರಾಜಸ್ಥಾನ್ ರಾಯಲ್ಸ್ ನ ಜೋಸ್ ಬಟ್ಲರ್.. ಈವರಿಬ್ಬರು ತಾವೆಂತಹ ಆಟಗಾರರು ಎಂಬುದನ್ನು ತೋರಿಸಿ ಕೊಟ್ಟರು. ಆರ್ ಆರ್ ಗೆಲುವಿನ ಶ್ರೇಯಸ್ಸು ಜೊಸ್ ಬಟ್ಲರ್ ಅವರದೇ.
ಪಂದ್ಯ ಮುಗಿದ ಮೇಲೆ ಬಟ್ಲರ್ ಎಂತಹ ಮಾತು ಆಡಿದರು ಗೊತ್ತಾ ? ನಾನು ಇಂತಹ ಆಟ ಆಡುವುದಕ್ಕೆ ಸ್ಪೂರ್ತಿ ಎಮ್. ಎಸ್. ದೋನಿ ಮತ್ತು ವಿರಾಟ್ ಕೊಹ್ಲಿ. ಇದಕ್ಕಿಂತ ದೊಡ್ದ ಮಾತು ಬೇಕಾ ?

ಇಲ್ಲಿನ ಈಡನ್ ಗಾರ್ಡನ್ ನಡೆದ ಪಂದ್ಯದಲ್ಲಿ ಕೆಆರ್ ವಿರುದ್ದ 2 ವಿಕೆಟ್ ಗಳಿಂದ ರಾಜಸ್ಥಾನ ರಾಯಲ್ಸ್ ಗೆಲುವು ಸಾಧಿಸಿತು. ಇದು ಒಂದೇ ಸಾಲಿನಲ್ಲಿ ಹೇಳುವ ಫಲಿತಾಂಶ. ಆದರೆ ಇಷ್ಟು ಹೇಳಿದರೆ ಎಲ್ಲವನ್ನೂ ಹೇಳಿದಂತೆ ಆಗುವುದಿಲ್ಲ.

ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಕೊಲ್ಕತ್ತಾ ನೈಟ್ ರೈಡರ್ಸ್ ನಿಗದಿತ 20 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 223 ರನ್ ಗಳಿಸಿತು. ಇದು ದೊಡ್ಡ ಮೊತ್ತವೇ.

ಸುನೀಲ್ ನರೈನ್ 6 ಸಿಕ್ಸರ್, 13 ಬೌಂಡರಿಗಳೊಂದಿಗೆ 56 ಎಸೆತಗಳಲ್ಲಿ 109 ರನ್ ಸಿಡಿಸಿದರು. ಉಳಿದಂತೆ ರಘುವಂಶಿ 30, ನಾಯಕ ಶ್ರೇಯಸ್ ಅಯ್ಯರ್, 11, ಆಂಡ್ರೆ ರಸೆಲ್ 13, ರಿಂಕು ಸಿಂಗ್ ಅಜೇಯ 20. ವೆಂಕಟೇಶ್ ಅಯ್ಯರ್ 8 ರನ್ ಗಳಿಸಿದರು. ಇದರೊಂದಿಗೆ ರಾಜಸ್ಥಾನ ರಾಯಲ್ಸ್ ಗೆ 224 ರನ್ ಗಳ ಗೆಲುವಿನ ಗುರಿ ನೀಡಲಾಯಿತು.

ಈ ಗುರಿ ಬೆನ್ನಟ್ಟಿದ್ದ ರಾಜಸ್ಥಾನ ರಾಯಲ್ಸ್ ಪರ ಯಶಸ್ವಿ ಜೈಸ್ವಾಲ್ 19, ಜೊಸ್ ಬಟ್ಲರ್ ಅಜೇಯ 107, ನಾಯಕ ಸಂಜು ಸ್ಯಾಮ್ಸನ್ 12, ರಿಯಾನ್ ಪರಾಗ್ 34, ಪೊವೆಲ್ 26 ರನ್ ಗಳಿಸಿದರು.ಇದರೊಂದಿಗೆ ರಾಜಸ್ಥಾನ ರಾಯಲ್ಸ್ 20 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 224 ಗಳಿಸುವುದರೊಂದಿಗೆ ಗೆಲುವು ಸಾಧಿಸಿತು. ಜೊಸ್ ಬಟ್ಲರ್ ಫ್ಲೇಯರ್ ಆಫ್ ದಿ ಮ್ಯಾಚ್ ಪ್ರಶಸ್ತಿಗೆ ಭಾಜನರಾದರು.

Leave a Reply

Your email address will not be published. Required fields are marked *