ಬೆಂಗಳೂರು : ಟ್ರಾವಿಸ್ ಹೆಡ್ ಅವರ ಭರ್ಜರಿ ಶತಕ ಹಾಗೂ ನಾಯಕ ಪ್ಯಾಟ್ ಕಮ್ಮಿನ್ಸ್ ಮೂರು ವಿಕೆಟ್ ಕಬಳಿಸುವ ಮೂಲಕ ಸೋಮವಾರ ಇಲ್ಲಿ ನಡೆದ ಐಪಿಎಲ್‌ ಪಂದ್ಯದಲ್ಲಿ ಅತ್ಯಧಿಕ ಮೊತ್ತವನ್ನು ದಾಖಲಿಸಿದ ಸನ್‌ರೈಸರ್ಸ್ ಹೈದರಾಬಾದ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು 25 ರನ್‌ಗಳಿಂದ ಸೋಲಿಸಿತು.

ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಸನ್ ರೈಸರ್ಸ್ ಹೈದರಾಬಾದ್ ನಿಗದಿತ 20 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ ದಾಖಲೆಯ 262 ರನ್ ಗಳಿಸಿತು. ಇದು T20 ಕ್ರಿಕೆಟ್‌ನ ಎಲ್ಲಾ ಪ್ರಕಾರಗಳಲ್ಲಿ ಎರಡನೇ ಅತ್ಯಧಿಕ ರನ್ ಗಳ ದಾಖಲೆಯಾಗಿದೆ.

ಆರಂಭಿಕ ಆಟಗಾರರಾದ ಟ್ರಾವಿಸ್ ಹೆಡ್ 8 ಸಿಕ್ಸರ್,9 ಬೌಂಡರಿಗಳೊಂದಿಗೆ 41 ಎಸೆತಗಳಲ್ಲಿ ಭರ್ಜರಿ 102 ರನ್ ಗಳಿಸುವುದರೊಂದಿಗೆ ಕ್ರಿಕೆಟ್ ಅಭಿಮಾನಿಗಳ ಮನರಂಜಿಸಿದರು.ಇವರಿಗೆ ಉತ್ತಮ ಸಾಥ್ ನೀಡಿದ ಅಭಿಷೇಕ್ ಶರ್ಮಾ 34, ಹೆನ್ರಿಕ್ ಕ್ಲಾಸೆನ್ 67, ಐಡೆನ್ ಮಾರ್ಕ್ರಾಮ್ ಅಜೇಯ 32, ಅಬ್ದುಲ್ ಶಮದ್ ಅಜೇಯ 37 ರನ್ ಗಳಿಸುವುದರೊಂದಿಗೆ ನಿಗದಿತ 20 ಓವರ್ ಗಳಲ್ಲಿ 3 ವಿಕೆಟ್ ಗಳಲ್ಲಿ 287 ರನ್ ಗಳಿಸಿ, ಆರ್ ಸಿಬಿಗೆ 288 ರನ್ ಗಳ ಗೆಲುವಿನ ಗುರಿ ನೀಡಿತು.
 
ಸನ್ ರೈಸರ್ಸ್ ಹೈದರಾಬಾದ್ ನೀಡಿದ 288 ರನ್ ಗಳ ಗೆಲುವಿನ ಗುರಿ ಬೆನ್ನಟ್ಟಿದ್ದ ಆರ್ ಸಿಬಿ ಪರ ಆರಂಭಿಕರಾಗಿ ಕಣಕ್ಕಿಳಿದ ವಿರಾಟ್ ಕೊಹ್ಲಿ, 42, ನಾಯಕ ಫಾಪ್ ಡು ಫ್ಲೆಸಿಸ್ 62, ದಿನೇಶ್ ಕಾರ್ತಿಕ್ ಭರ್ಜರಿ 83,ಮಹಿಪಾಲ್ 19, ಅನುಜf್ ರಾವತ್ 25 ರನ್ ಗಳಿಸುವುದರೊಂದಿಗೆ 20 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 262 ರನ್ ಗಳಿಸಲಷ್ಟೇ ಶಕ್ತವಾಯಿತು. ಪರಿಣಾಮವಾಗಿ ಹೈದ್ರಾಬಾದ್ ಗೆ 25 ರನ್ ಗಳಿಂದ ಭರ್ಜರಿ ಗೆಲುವು ಸಾಧಿಸಿತು. 





Leave a Reply

Your email address will not be published. Required fields are marked *