ರಾಮನಗರ : ಚನ್ನಪಟ್ಟಣ ವಿಧಾನಸಭೆ ಕ್ಷೇತ್ರದ ಎನ್ ಡಿ ಎ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಅವರು ಕ್ಷೇತ್ರದ H.ಬ್ಯಾಡರಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಂಕುಂದ, ಹುಲುವಾಡಿ, ಆಣಿಗೆರೆ ಹೆಚ್. ಬ್ಯಾಡರಹಳ್ಳಿ, ತೌಟನಹಳ್ಳಿ, ತೆಂಕನಹಳ್ಳಿ, ಗುಡ್ಡೆಹೊಸೂರು ಗ್ರಾಮಗಳಿಗೆ ಭೇಟಿ ನೀಡಿ ಬಿರುಸಿನ ಪ್ರಚಾರ ನಡೆಸಿದರು.

ಅಣಿಗೆರೆ ಗ್ರಾಮದಲ್ಲಿ ಪ್ರಚಾರ ಸಭೆ ಬಳಿಕ ಮಾಧ್ಯಮಗಳ ಜತೆ ಮಾತನಾಡಿದ ಅವರು ಕಾಂಗ್ರೆಸ್ ನಾಯಕರಿಗೆ ತಿರುಗೇಟು ನೀಡಿದರು.

ಚನ್ನಪಟ್ಟಣ ಜನತೆ ನನ್ನ ಕೈ ಬಿಡುವುದಿಲ್ಲ :

ನಿಖಿಲ್ ಸೋಲಿಸಲು ಇಡೀ ಸರ್ಕಾರವೇ ಕ್ಷೇತ್ರಕ್ಕೆ ಬರ್ತಿರೋ ವಿಚಾರಕ್ಕೆ ಪ್ರತಿಕ್ರಿಯೆಸಿದ ಅವರು, ಅವರ ಪಕ್ಷದ ಚುನಾವಣೆ ತಂತ್ರ ಅದು. ಅವರ ಕೆಲಸ ಅವರು ಮಾಡಿಕೊಳ್ಳಲಿ, ನಮ್ಮ ಕೆಲಸ ನಾವು‌ ಮಾಡೋಣ. ನನ್ನ ವಿರುದ್ಧ ಅಭ್ಯರ್ಥಿ ಕಣಕ್ಕಿಳಿಸಿ ಚುನಾವಣೆ ಮಾಡ್ತಿದ್ದಾರೆ ಮಾಡಲಿ. ಅವರು ಏನೇ ಕುತಂತ್ರ ರಾಜಕಾರಣ ಮಾಡಿದ್ರೂ ಚನ್ನಪಟ್ಟಣ ಜನತೆ ನನ್ನ ಕೈ ಬಿಡುವುದಿಲ್ಲ. ಕ್ಷೇತ್ರದ ಜನ ಕೈ ಹಿಡಿಯುವ ವಿಶ್ವಾಸವಿದೆ ಎಂದು ತಿಳಿಸಿದರು.

ನ.13ಕ್ಕೆ ಮತದಾರರೇ ಉತ್ತರ ಕೊಡ್ತಾರೆ :

ಹೆಚ್ಡಿಕೆ ಕುಟುಂಬ ರಾಜಕಾರಣ ಬಗ್ಗೆ ಕಾಂಗ್ರೆಸ್ ನಾಯಕರ ಆರೋಪ ವಿಚಾರಕ್ಕೆ ಮಾತನಾಡಿದ ಅವರು, ಕಾಂಗ್ರೆಸ್ ನಾಯಕರ ಮಾತುಗಳನ್ನು ರಾಜ್ಯದ ಜನತೆಗೆ ಗಮನಿಸುತ್ತಿದ್ದಾರೆ. ನ.13ಕ್ಕೆ ಎಲ್ಲದಕ್ಕೂ ಉತ್ತರವನ್ನ ಅವರೇ ಕೊಡ್ತಾರೆ. ತೀರ್ಪು, ತೀರ್ಮಾನ ಕೊಡೊದು ಕ್ಷೇತ್ರದ ಮತದಾರರು. ಎಲ್ಲವನ್ನೂ ಅವರಿಗೆ ಬಿಟ್ಟಿದ್ದೇನೆ. ಮತದಾರರ ಆಶೀರ್ವಾದ ನನ್ನ ಮೇಲೆ ಇದೇ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಇಂದು ಬೇವೂರು ಜಿ.ಪಂ ವ್ಯಾಪ್ತಿಯಲ್ಲಿ ಪ್ರಚಾರ ಮಾಡ್ತಿದ್ದೇನೆ ಇನ್ನೂ ಪ್ರಚಾರಕ್ಕೆ ಒಂದುವಾರಗಳ ಕಾಲ ಮಾತ್ರ ಬಾಕಿ ಇದೆ. ಜನರ ಉತ್ಸಾಹ ನೋಡಿದ್ರೆ ಅಧಿಕ ಅಂತರದಿಂದ ಗೆಲ್ಲುವ ವಿಶ್ವಾಸ ಇದೆ. ಜನ ಕುಮಾರಸ್ವಾಮಿ ಹಾಗೂ ದೇವೇಗೌಡರ ಕೆಲಸಗಳ ಬಗ್ಗೆ ಮಾತನಾಡ್ತಿದ್ದಾರೆ ಎಂದರು.

ಇಂದು ನನ್ನ ಶ್ರೀಮತಿ ಕೂಡ ನನ್ನ ಪರ ಪ್ರಚಾರ ಮಾಡಿದ್ದಾರೆ. ವಿದ್ಯಾರ್ಥಿಗಳ ಬಳಿ ಮತಯಾಚನೆ ಮಾಡಿದ್ದಾರೆ. ಮಹಿಳಾ ಕಾರ್ಯಕರ್ತರು ಒತ್ತಾಯ ಮಾಡಿ ಪ್ರಚಾರಕ್ಕೆ ಕರೆತಂದಿದ್ದಾರೆ.ರೇವತಿ ಅವರ ತಾಯಿ ಕೂಡಾ ಸಾಮಂದಿಪುರು ಗ್ರಾಮದವರು. ಹಾಗಾಗಿ ಅಲ್ಲಿಗೆ ಹೋಗಿದ್ದಾಗ ಅದರ ಬಗ್ಗೆ ಮಾತನಾಡಿದೆ ಅಷ್ಟೇ. ಅದನ್ನೇ ಪ್ರಚಾರಕ್ಕೆ ಬಳಸಿಕೊಳ್ಳುವುದಿಲ್ಲ ಎಂದು ತಿಳಿಸಿದರು.

Author

Leave a Reply

Your email address will not be published. Required fields are marked *