ಕೊಲ್ಕತ್ತಾ : ಬಿಜೆಪಿಯ ನವ ಭಾರತದಲ್ಲಿ ಧರ್ಮವನ್ನು ರಾಜಕೀಯಕ್ಕಾಗಿ ಬಳಸಲಾಗುತ್ತಿದೆ. ಇದರ ಉದ್ದೇಶ ಧರ್ಮವಲ್ಲ. ರಾಜಕೀಯ ಲಾಭಕ್ಕಾಗಿ ಧರ್ಮದ ಬಳಕೆ ಎಂದು ಖ್ಯಾತ ಅರ್ಥಶಾಸ್ತ್ರಜ್ಞ ಪರಕಾಲ ಪ್ರಭಾಕರ್ ಹೇಳಿದ್ದಾರೆ.

ಸುದ್ದಿಗಾರರ ಜೊತೆ ಮಾತನಾಡುತ್ತಿದ್ದ ಅವರು, ಈ ದೇಶದಲ್ಲಿ ಒಕ್ಕೂಟ ವ್ಯವಸ್ಥೆಯನ್ನು ಹೇಗೆ ನಾಶ ಮಾಡಲಾಗುತ್ತಿದೆ ಎಂಬುದನ್ನು ವಿವರಿಸಿದರು. ಅಸಂವಿಧಾನಿಕ ಮಾರ್ಗದ ಮೂಲಕ ಒಕ್ಕೂಟ ವ್ಯವಸ್ಥೆಯನ್ನು ನಾಶ ಮಾಡಲಾಗುತ್ತಿದೆ ಎಂದು ಅವರು ಆರೋಪಿಸಿದರು.

ಧರ್ಮ ಯಾವತ್ತೂ ಇರುತ್ತದೆ. ಅದು ಬಂದು ಹೋಗುವುದಲ್ಲ. ಆದರೆ ಬಿಜೆಪಿ ಆಡಳಿತದಲ್ಲಿ ಧರ್ಮದ ಬಳಕೆಯಾಗುತ್ತಿದೆ. ಅದು ಪಕ್ಷ ಮತ್ತು ರಾಜಕೀಯ ಹಿತಾಸಕ್ತಿಗಾಗಿ ಎಂದು ಅವರು ವಿವರಿಸಿದರು.

ಈ ದೇಶದ ಪ್ರತಿಶತ 10 ರಷ್ಟು ಜನ, ಪ್ರತಿಶತ 90 ರಷ್ಟು ಸಂಪತ್ತು ನಿಯಂತ್ರಿಸುತ್ತಿದ್ದಾರೆ. ಈ ದೇಶದ ಮೂಲಭೂತ ಸಮಸ್ಯೆಗಳು ನಿರ್ಲಕ್ಷಕ್ಕೆ ಒಳಗಾಗಿವೆ ಎಂದು ಅವರು ಹೇಳಿದರು.

Author

Leave a Reply

Your email address will not be published. Required fields are marked *