ವಯನಾಡ್ ನಿಂದ ರಾಹುಲ್ ಓಡಿ ಹೋಗುತ್ತಾರೆ ಎಂದು ಹೇಳಿದ ಮೋದಿ; ವಾರಣಾಸಿ ಕೂಡ ತಮಗೆ ಎರವಲು ಕ್ಷೇತ್ರ ಎಂಬುದನ್ನು ಮರೆತೇ ಬಿಟ್ಟರು !

PM Modi Dig At Rahul Gandhi : ಕೇರಳದ ವಯಾನಾಡ್ ನಿಂದ ಅವರು ಆಯ್ಕೆ ಆಗುವುದಿಲ್ಲ. ಚುನಾವಣೆ ಮುಗಿದ ಮೇಲೆ ಅವರು ಒಡಿ ಹೋಗುತ್ತಾರೆ

ಮುಂಬೈ : ಅಮೇಥಿಯಂತೆ ಕೇರಳದ ವಯನಾಡ್ ನಿಂದಲೂ ರಾಹುಲ್ ಗಾಂಧಿ ಓಡಿ ಹೋಗುತ್ತಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಟೀಕಿಸಿದ್ದಾರೆ.

ಮಹಾರಾಷ್ಟ್ರದ ನಾಂದೇಡ್ ನಲ್ಲಿ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಅವರು, ಕೇರಳದ ವಯಾನಾಡ್ ನಿಂದ ಅವರು ಆಯ್ಕೆ ಆಗುವುದಿಲ್ಲ. ಚುನಾವಣೆ ಮುಗಿದ ಮೇಲೆ ಅವರು ಒಡಿ ಹೋಗುತ್ತಾರೆ ಎಂದು ಹೇಳಿದರು.

ಆದರೆ ತಾವು ಸ್ಪರ್ಧಿಸುತ್ತಿರುವ ವಾರಣಾಸಿ ತಮ್ಮ ಕ್ಷೇತ್ರವಲ್ಲ ಎಂಬುದನ್ನು ಅವರು ಮರೆತಿದ್ದರು. ಗುಜರಾತ್ ನಿಂದ ಬಂದ ತಮ್ಮದೂ ವಾರಣಾಸಿ ಎರವಲು ಕ್ಷೇತ್ರ ಎಂಬುದನ್ನು ಮರೆತು ರಾಹುಲ್ ಓಡಿ ಹೋಗುತ್ತಾರೆ ಎಂಬ ಮಾತನ್ನು ಅವರು ಆಡಿದರು. ಆದರೆ ತಮ್ಮ ವಿಚಾರದಲ್ಲಿ ಮಾತ್ರ ಮೌನವಾಗಿಯೇ ಉಳಿದರು.

2019 ರಲ್ಲಿ ಅಮೇಥಿಯಲ್ಲಿ ಸೋತ ನಂತರ ರಾಹುಲ್ ಗಾಂಧಿ ಅಲ್ಲಿಂದ ಓಡಿ ಹೋದರು. ಈಗ ವಯನಾಡ್ ನಿಂದ ಅವರು ಗೆಲ್ಲುವುದಿಲ್ಲ ಎಂದು ಅವರ ಪಕ್ಷದವರೇ ಹೇಳುತ್ತಾರೆ. ಅವರಿಗೆ ಅಲ್ಲಿ ಬೆಂಬಲ ಸಿಗುತ್ತಿಲ್ಲ ಎಂದು ಪ್ರಧಾನಿ ಹೇಳಿದರು.

Author

error: