ಬೆಂಗಳೂರು : ಕರ್ನಾಟಕಕ್ಕೆ ಅನುದಾನ ಹಂಚಿಕೆಯಲ್ಲಿ ಆಗುತ್ತಿರುವ ಅನ್ಯಾಯದ ಬಗ್ಗೆ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಜಾರಿಕೆಯ ಉತ್ತರ ನೀಡಿದ್ದಾರೆ. ಕರ್ನಾಟಕ ಸರ್ಕಾರ ಎತ್ತಿರುವ ತಾತ್ವಿಕ ಪ್ರಶ್ನೆ ಮತ್ತು ತಾರತಮ್ಯ ನೀತಿಯ ಬಗ್ಗೆ ಮಾತನಾಡದೇ ಕರ್ನಾಟಕಕ್ಕೆ ಯಾವುದೇ ಅನುದಾನ ತಡೆ ಹಿಡಿದಿಲ್ಲ ಎಂದು ಹೇಳಿದ್ದಾರೆ.

ನಗರದಲ್ಲಿ ಇಂದು ಮಾತನಾಡುತ್ತಿದ್ದ ಅವರು ಕೆಲವೊಂದು ಅಂಕಿ ಅಂಶಗಳನ್ನು ನೀಡಿದ್ದಾರೆ. ಆದರೆ ತೀವ್ರ ಬರಗಾಲದ ಪರಿಸ್ಥಿತಿಯನ್ನು ಎದುರಿಸುತ್ತಿರುವ ರಾಜ್ಯಕ್ಕೆ ಯಾಕೆ ಹೆಚ್ಚುವರಿ ಅನುದಾನ ನೀಡಿಲ್ಲ ಎಂಬ ಪ್ರಶ್ನೆಗೆ ಅವರ ಬಳಿ ಉತ್ತರ ಇಲ್ಲ.

ಯುಪಿಎ ಆಡಳಿತ ಅವಧಿಗೆ ಹೋಲಿಸಿದರೆ ಬಿಜೆಪಿ ಸರ್ಕಾರ ಕರ್ನಾಟಕಕ್ಕೆ ಹೆಚ್ಚಿನ ಅನುದಾನವನ್ನು ನೀಡಿದೆ. ಯುಪಿಎ ಇದ್ದಾಗ ಸುಮಾರೌ 81 ಸಾವಿರ ಕೋಟಿ ಅನುದಾನ ನೀಡಲಾಗಿತ್ತು. ಈಗ ಅದು ಲಕ್ಷ ಕೋಟಿಯನ್ನು ದಾಟಿದೆ ಎಂಬುದು ಅವರ ವಾದ. ಜೊತೆಗೆ ಬೆಂಗಳೂರಿನ ಅಭಿವೃದ್ಧಿಗೆ ನೀಡಲಾದ ಅನುದಾನದ ವಿವರವನ್ನು ಅವರು ನೀಡಿದ್ದಾರೆ`

ಆದರೆ ಜಿಎಸ್ ಟಿ ಪಾಲಿನಲ್ಲಿ ದಕ್ಷಿಣ ರಾಜ್ಯಗಳಿಗೆ ಆಗುತ್ತಿರುವ ಅನ್ಯಾದ ಬಗ್ಗೆ ಅವರು ಯಾವುದೇ ಪ್ರಸ್ತಾಪ ಮಾಡಿಲ್ಲ. ರಾಜ್ಯದ ಬರಗಾಲ ಪರಿಸ್ಥಿತಿಯ ಬಗ್ಗೆ ಕೇಂದ್ರ ತಂಡ ರಾಜ್ಯಕ್ಕೆ ಭೇಟಿ ನೀಡಿ ಹೋಗಿದೆ. ಆದರೂ ಒಂದು ಪೈಸೆ ರಾಜ್ಯಕ್ಕೆ ಬಂದಿಲ್ಲ ಎಂಬ ಆರೋಪ ಬಗ್ಗೆಯೂ ಅವರು ಉತ್ತರ ನೀಡಿಲ್ಲ.

One thought on “ಕರ್ನಾಟಕಕ್ಕೆ ಯಾವುದೇ ಅನುದಾನ ತಡೆಹಿಡಿದಿಲ್ಲ: ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್”
  1. UPA ಇದ್ದಾಗ GST ಇರಲಿಲ್ಲ ರಾಜ್ಯ ಕೇಂದ್ರ ಹೋಲಿಸಿದರೆ ಕೇಂದ್ರ ಕ್ಕೆ ಖರ್ಚು ಹೆಚ್ಚು ಲಾಭ ಕಡಿಮೆ ಇತ್ತು ಟ್ಯಾಕ್ಸ್ ಗಳು ಈಗಿನ ರೀತಿ ಜನರನ್ನ ಕೊಲ್ಲೋ ರೀತಿ ಇರಲಿಲ್ಲ ರೇಲ್ವೆ ಸ್ಟೇಷನ್ ಗೆ ಹೋಗಲು ಆಗ ಎಂಟು ರುಪಾಯೀ ಈಗ ಇವತ್ತು ರುಪಾಯೀ -೧೪೦ ಡಾಲರ್ ಗೆ ತೈಲ ಖರೀದಿಸಿ ಎಪ್ಪತ್ತು ರುಪಾಯೀ ಗೆ ಜನಕ್ಕೆ ಕೊಡುತ್ತಿದ್ದರು – ಒಟ್ಟಿನಲ್ಲಿ ಜನರಿಂದ ಜನರಿಗಾಗಿ ಇರೋ ಸರಕಾರ ಇತ್ತು ರಸ್ತೆ ಗಳು ಉತ್ತಮ ಅಲ್ಲದಿದ್ದರೂ ಅಧಮ ಆಗಿರಲಿಲ್ಲ -ಈಗ ಎಲ್ಲ ಹಾಯ್ ಫ್ವೈ , ರಾಗಿ ಹಿಟ್ಟಿಗೂ ಹದಿನೆಂಟು % ತೆರಿಗೆ !!! ಕೇಂದ್ರ ಬೊಗ್ಗಸ ದಲ್ಲಿ ಬಿಲಿಯನ್ ಗಟ್ಟಲೆ ಹಣ ಬಿದ್ದಿದೆ ಜನರ ಹಣ ,, ರಸ್ತೆ ಹೆಸರಲಿ ಕಾಮಗಾರಿ ಹೆಸರಲ್ಲಿ ಸಾವಿರ ರುಪಾಯೀ ಕಾಮಗಾರಿ ಲಕ್ಷ ಕ್ಕೆ ಕೊಡುತ್ತಾರೆ ಎಲ್ಲವು ಮಾರಾಟ ವೇ – ಹೀಗೆ ಲೂಟಿ ಮಾಡಿ ಮಾಡಿದ ರಸ್ತೆ ಸಹ ಜನರಿಗೆ ಫ್ರೀ ಇಲ್ಲ ಇವತ್ತು ನೂರು ವರ್ಷ ಕ್ಕೆ ಟೋಲ್ ಗೆ ಮಾರಿಕೊಂಡಿದ್ದಾರೆ – ಜನ ಐವತ್ತು ವರ್ಷ ಟೋಲ್ ಕಟ್ಟಲೇಬೇಕು !!! ಕಾಂಗ್ರೆಸ್ ಕಾಲದ ಫ್ರೀ ರಸ್ತೆ ಅತ್ಯುತ್ತಮ ಅಲ್ಲದೆ ಇರಬಹುದು ಆದರೆ ಈ ಪಾಟಿ ವಸೂಲಿ ಇರಲಿಲ್ಲ – ಭ್ರಷ್ಟಾಚಾರ ಆಗಲು ಇತ್ತು ಈಗಲೂ ಇದೆ ಮುಂದೆಯೂ ಇರುತ್ತೆ – ಜನ ಜಾತಿ ನೋಡದೆ ಪ್ರೀತಿ ಇಂದ ಬದುಕಿದರು ೨೦೧೪ ರ ವರೆಗೆ – ಈಗ ಎಲ್ಲಿ ನೋಡಿದರು ಜಾತಿ ಜಾತಿ ಜಾತಿ ಹೊಡಿ ಬದಿ ಕೊಲ್ಲು

Leave a Reply

Your email address will not be published. Required fields are marked *