ಬೆಂಗಳೂರು : ವಿದ್ಯುನ್ಮಾನ ಮತ ಯಂತ್ರದ ವಿಚಾರ ಈಗ ಮತ್ತೆ ಮುನ್ನೆಲೆಗೆ ಬಂದಿದೆ. ಸರ್ವೋಚ್ಚ ನ್ಯಾಯಾಲಯದಲ್ಲಿ ಈ ಬಗ್ಗೆ ವಿಚಾರಣೆ ನಡೆಯುತ್ತಿರುವಾಗಲೇ ಕೇರಳದಿಂದ ಕೆಲವೊಂದು ಘಟನೆಗಳು ವರದಿಯಾಗಿವೆ. ಇದು ಆತಂಕಕ್ಕೂ ಕಾರಣವಾಗಿದೆ.
ಕೇರಳದ ಕೆಲವು ಮತ ಯಂತ್ರಗಳಲ್ಲಿ ಯಾವುದೇ ಬಟನ್ ಒತ್ತಿದರೂ ಮತ ಬಿಜೆಪಿಗೆ ಬೀಳುತ್ತಿರುವ ಆರೋಪ ಕೇಳಿ ಬಂದಿದೆ. ಈ ವಿಚಾರ ಸರ್ವೋಚ್ಚ ನ್ಯಾಯಾಲಯದ ಗಮನಕ್ಕೂ ಬಂದಿದೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ರಾಜ್ಯ ಗೃಹ ಸಚಿವ ಡಾ. ಪರಮೇಶ್ವರ್ ಈ ಬಗ್ಗೆ ಮೊದಲಿನಿಂದಲೂ ನಮಗೆ ಅನುಮಾನವಿದೆ ಎಂದರು.
ಬಿಜೆಪಿಯವರು ಬುದ್ದಿವಂತರು ಎಲ್ಲ ಮತ ಯಂತ್ರಗಳನ್ನು ಒಂದೇ ರೀತಿ ಮಾಡುವುದಿಲ್ಲ. ತಮಗೆ ಬೇಕಾದ ಕಡೆ ಮಾತ್ರ ಮತ ಯಂತ್ರಗಳನ್ನು ತಮ್ಮ ಉದ್ದೇಶಕ್ಕೆ ಬಳಸಿಕೊಳ್ಳುತ್ತಾರೆ ಎಂಡು ದೂರಿದರು.
