Lok Sabha elections 2024: ತಮಿಳುನಾಡಿನಲ್ಲಿ ಇಂದು ಚುನಾವಣೆ ನಡೆಯುತ್ತಿದೆ. ಚೆನ್ನೈನ ತಮ್ಮ ಮತಗಟ್ಟೆಗಳಿಗೆ ಇಂದು ಬೆಳಗ್ಗೆ ಬೇಗನೇ ಬಂದ ನಟರಾದ ರಜನಿಕಾಂತ್, ಧನುಷ್ ಆಗಮಿಸಿ ಮತದಾನ ಮಾಡಿದರು.
#WATCH | Actor Rajnikanth casts his vote at a polling booth in Chennai, Tamil Nadu.
— ANI (@ANI) April 19, 2024
#LokSabhaElections2024 pic.twitter.com/6Ukwayi5sv
ಮೊದಲ ಹಂತದ ಮತದಾನ ಇಂದು (ಏಪ್ರಿಲ್ 19) ನಡೆಯುತ್ತಿದೆ. 21 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿನ 102 ಸ್ಥಾನಗಳಿಗೆ ಮತದಾನ ನಡೆಯುತ್ತಿದ್ದು, 1625 ಅಭ್ಯರ್ಥಿಗಳು ಕಣದಲ್ಲಿದ್ದಾರೆ.
ನಿತಿನ್ ಗಡ್ಕರಿ ಸೇರಿದಂತೆ ಎಂಟು ಮಂದಿ ಕೇಂದ್ರ ಸಚಿವರ ಭವಿಷ್ಯವನ್ನು ಮತದಾರರು ನಿರ್ಧರಿಸಲಿದ್ದಾರೆ. ಬೆಳಗ್ಗೆ 8 ಗಂಟೆಯಿಂದ ಸಂಜೆ 5ರವರೆಗೆ ಮತದಾನಕ್ಕೆ ಅವಕಾಶ ಇದೆ.






