ಶಿವಮೊಗ್ಗ : ಗೀತಾ ಶಿವರಾಜ್ ಕುಮಾರ್ ಅವರಿಗೆ ಶಿವಮೊಗ್ಗದಲ್ಲಿ ಒಂದು ಸನ್ಮಾನ. ಆ ಬಡಾವಣೆಯ ಜನರಿಗೆ ಸದಾ ಬಂಗಾರಪ್ಪನವರ ನೆನಪು. ಅದಕ್ಕೆ ಕಾರಣ ಅವರು ಅಲ್ಲಿ ಮಾಡಿದ ಕೆಲಸ.

ಮಾಜಿ ಮುಖ್ಯಮಂತ್ರಿ ಎಸ್. ಬಂಗಾರಪ್ಪ ಸಮಾಜವಾದಿ ಚಳವಳಿಯ ಮೂಲಕ ತನ್ನ ರಾಜಕೀಯ ಬದುಕು ಕಟ್ಟಿಕೊಂಡವರು. ಸದಾ ಬಡವರ ಪರವಾಗಿ ಚಿಂತಿಸಿದವರು. ಬಡವರ ಪರವಾಗಿ ಹಲವಾರು ಕಾರ್ಯಕ್ರಮಗಳನ್ನು ಅನುಷ್ಟಾನಕ್ಕೆ ತಂದವರು. ಆದರೆ ಅವರಿಗೆ ಸಿಗಬೇಕಾದಷ್ಟು ಅವಕಾಶ ಸಿಗಲಿಲ್ಲ. ರಾಜಕೀಯ ಪಿತೂರಿಯಿಂದ ಅವರ ರಾಜಕೀಯ ಬದುಕು ಕೊನೆಯಾಯಿತು.

ಅವರ ಜಾರಿಗೆ ತಂದ ಆರಾಧನಾ, ವಿಶ್ವ ಮೊದಲಾದ ಕಾರ್ಯಕ್ರಮಗಳು ಬಡವರ ಪರವಾದ ಕಾರ್ಯಕ್ರಮಗಳಾಗಿದ್ದವು. ಅವರ ಇಬ್ಬರು ಮಕ್ಕಳು ರಾಜಕೀಯದಲ್ಲಿದ್ದಾರೆ. ಮಧು ಬಂಗಾರಪ್ಪ ಈಗ ಸಚಿವರು, ಕುಮಾರ ಬಂಗಾರಪ್ಪ ಬಿಜೆಪಿಯಲ್ಲಿದ್ದಾರೆ.

ಗೀತಾ ಶಿವರಾಜ್ ಕುಮಾರ ರಾಜಕೀಯದಲ್ಲಿ ತಮ್ಮ ಅದೃಷ್ಟ ಪರೀಕ್ಷೆ ನಡೆಸುತ್ತಿದ್ದಾರೆ. ಈ ಹಿಂದೆ ಒಮ್ಮೆ ಚುನಾವಣೆಗೆ ನಿಂತು ಸೋತಿದ್ದ ಅವರು ಈ ಬಾರಿ ಮತ್ತೊಮ್ಮೆ ಶಿವಮೊಗ್ಗದಿಂದಲೇ ಚುನಾವಣಾ ಕಣಕ್ಕೆ ಇಳಿದಿದ್ದಾರೆ.

ಇಲ್ಲಿನ ವಿನೋಬ ನಗರದ ಶ್ರೀರಾಮನಗರದಲ್ಲಿ ಇಲ್ಲಿನ ನಿವಾಸಿಗಳೇ ಈ ಸನ್ಮಾನ ಕಾರ್ಯಕ್ರಮವನ್ನು ವ್ಯವಸ್ಥೆ ಮಾಡಿದ್ದರು. ಶಿವಣ್ಣ ಗೀತಕ್ಕೆ ನಮ್ಮ ಜೊತೆಗೆ ಎಂಬ ಈ ಕಾರ್ಯಕ್ರಮದಲ್ಲಿ ಸ್ಯಾಂಡಲ್​​​ವುಡ್ ನಟ ಶಿವರಾಜ್ ಕುಮಾರ್ ಕೂಡ ಪಾಲ್ಗೊಂಡಿದ್ದರು.

Author

Leave a Reply

Your email address will not be published. Required fields are marked *