ಬೆಂಗಳೂರು : ಪ್ರಣಾಳಿಕೆಗಳು ದೇಶ ಎದುರಿಸುತ್ತಿರುವ ಸವಾಲುಗಳಿಗೆ ಪರಿಹಾರ ನೀಡುವಂತಿರಬೇಕೇ ಹೊರತು, ಮತ್ತಷ್ಟು ದಿವಾಳಿ ಮಾಡುವಂತಿರಬಾರದು ಎಂಬ ಕನಿಷ್ಟ ತಿಳುವಳಿಕೆಯೂ ಬಿಜೆಪಿ ಪಕ್ಷಕ್ಕೆ ಇದ್ದಂತಿಲ್ಲ ಬಿಜೆಪಿ ಪ್ರಣಾಳಿಕೆ ಬಗ್ಗೆ ಕಾಂಗ್ರೆಸ್ ಎಂಎಲ್ಸಿ ಬಿ.ಕೆ. ಹರಿಪ್ರಸಾದ್ ನೀಡಿದ ಪ್ರತಿಕ್ರಿಯೆ ಇದು.
ಬಿಜೆಪಿ ಪಕ್ಷ ಬಿಡುಗಡೆ ಮಾಡಿರುವುದು ಚುನಾವಣಾ ಪ್ರಣಾಳಿಕೆ ಅಲ್ಲ, ಅದೊಂದು “ಸುಳ್ಳಿನ ಘೋಷಣಾ” ಪತ್ರ ಎಂದು ಅವರು ಟೀಕಿಸಿದ್ದಾರೆ.
ಈ ಸಂಬಂಧ ತಮ್ಮ ಎಕ್ಸ್ (ಟ್ವೀಟರ್) ಖಾತೆಯಲ್ಲಿ ಪ್ರತಿಕ್ರಿಯೆ ನೀಡಿದ ಅವರು, ನಮ್ಮ ಪಕ್ಷ ಇತಿಹಾಸದಲ್ಲೇ ಕ್ರಾಂತಿಕಾರಿ ಪ್ರಣಾಳಿಕೆಯನ್ನು ಘೋಷಿಸಿದೆ. ಕಾಂಗ್ರೆಸ್ ಪ್ರಣಾಳಿಕೆ ಎದುರು ಬಿಜೆಪಿಯ ಪ್ರಣಾಳಿಕೆ ಸರಿಸಾಟಿಯೇ ಇಲ್ಲ ಎಂಬುದನ್ನು ತಜ್ಞರು ಮಾತ್ರವಲ್ಲ, ದೇಶದ ಸಾಮಾನ್ಯ ಜನರೇ ಮಾತಾಡುವಂತಾಗಿದೆ. ಅದಕ್ಕೆ ಈ ಹತ್ತು ಕಾರಣಗಳೇ ಸಾಕು ಎಂದಿದ್ದಾರೆ.
ಕಾಂಗ್ರೆಸ್:- ನಮ್ಮ ನಾಯಕರಾದ ಶ್ರೀ ರಾಹುಲ್ ಗಾಂಧಿ ನೇತೃತ್ವದಲ್ಲಿ ಎರಡು ಐತಿಹಾಸಿಕ ಭಾರತ್ ಜೋಡೋ ಯಾತ್ರೆಯ ನಂತರ, ದೇಶದ ಜನರ ಸಮಸ್ಯೆಗಳ ಅಂಶಗಳನ್ನೇ ಪ್ರಣಾಳಿಕೆಯಲ್ಲಿ ಸೇರಿಸಲಾಗಿದೆ. ಬಿಜೆಪಿ:- ಪ್ರಣಾಳಿಕೆಯನ್ನು ಮೋದಿಯವರ ಹೊಗಳಿಕೆಗೆ ಮೀಸಲಿಟ್ಟಿರುವುದು ದುರಂತ. 69, ಬಾರಿ ಮೋದಿಯ ಜಪ, 53 ಬಾರಿ ಮೋದಿಯ ವರ್ಣನೆ ಮಾಡಲಾಗಿದೆ.
ಬಿಜೆಪಿ:-ಹೊಸ ಯೋಜನೆಗಳಿಗೆ ಒತ್ತು ನೀಡದೆ, ಹಳೆಯ ಯೋಜನೆಗಳನ್ನೇ ಪುನರಾವರ್ತನೆ ಮಾಡಲಾಗಿದೆ.
ದೇಶದ ಜನರು ಕಾಂಗ್ರೆಸ್ ಪ್ರಣಾಳಿಕೆಯನ್ನು ಸ್ವಾಗತಿಸುತ್ತಿದ್ದಾರೆ, ಚರ್ಚೆ ನಡೆಸುತ್ತಿದ್ದಾರೆ. ಆದರೆ ಯಾವುದೇ ಪೂರ್ವಪರ ಇಲ್ಲದ, ದೂರದೃಷ್ಟಿಯೇ ಇಲ್ಲದ ಬಿಜೆಪಿಯ ಪ್ರಣಾಳಿಕೆಗೆ ಯಾವುದೇ ಪ್ರತಿಕ್ರಿಯೆ ಬರದೆ ಇರುವುದು ಬಿಜೆಪಿಯ ಮೇಲೆ ಜನರು ನಂಬಿಕೆ ಕಳೆದುಕೊಂಡಿರುವುದಕ್ಕೆ ಸಾಕ್ಷಿ ಎಂದು ಹರಿಪ್ರಸಾದ್ ಟೀಕಿಸಿದ್ದಾರೆ.
