ಕೇಂದ್ರದಲ್ಲಿ ಇರುವುದು ಮೋದಿ ಸರ್ಕಾರವಲ್ಲ, ಇದು ಅದಾನಿ ಸರ್ಕಾರ; ರಾಹುಲ್ ಗಾಂಧಿ, ಸಹೋದರ ಸ್ಟಾಲಿನ್ ಗೆ ಮೈಸೂರು ಪಾಕ್ ಉಡುಗೊರೆ

Rahul Gandhi : ಸ್ಟಾಲಿನ್ ಅವರನ್ನು ತಮ್ಮ ಹಿರಿಯ ಸಹೋದರ ಎಂದು ಕರೆದ ರಾಹುಲ್ ಅವರಿಗಾಗಿ ವಿಶೇಷ ಮೈಸೂರು ಪಾಕ್ ಖರೀದಿಸಿ ಅವರಿಗೆ ನೀಡಿದರು

ಚೆನೈ : ಕೇಂದ್ರದಲ್ಲಿ ಇರುವುದು ನರೇಂದ್ರ ಮೋದಿ ಅವರ ಸರ್ಕಾರವಲ್ಲ. ಅದು ಅದಾನಿ ಅವರ ಸರ್ಕಾರ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ. ತಮಿಳುನಾಡಿನಲ್ಲಿ ಅಲ್ಲಿನ ಮುಖ್ಯಮಂತ್ರಿ ಸ್ಟಾಲಿನ್ ಅವರ ಜೊತೆ ಚುನಾವಣಾ ಪ್ರಚಾರ ಸಭೆಗಳಲ್ಲಿ ಪಾಲ್ಗೊಂಡು ಮಾತನಾಡುತ್ತಿದ್ದರು.

ಸ್ಟಾಲಿನ್ ಅವರನ್ನು ತಮ್ಮ ಹಿರಿಯ ಸಹೋದರ ಎಂದು ಕರೆದ ರಾಹುಲ್ ಅವರಿಗಾಗಿ ವಿಶೇಷ ಮೈಸೂರು ಪಾಕ್ ಖರೀದಿಸಿ ಅವರಿಗೆ ನೀಡಿದರು. ಇಬ್ಬರೂ ಭಾವನಾತ್ಮಕ ಕ್ಷಣಗಳನ್ನು ಹಂಚಿಕೊಂಡರು.

ಮೋದಿ ಮತ್ತು ಅದಾನಿಯವರ ನೀತಿಯಿಂದಾಗಿ ಭಾರತ ಕೊಟ್ಯಾಧಿಪತಿಗಳ ಭಾರತ ಮತ್ತು ಬಡವರ ಭಾರತ ಎಂಬ ಎರಡು ಭಾರತದ ನಿರ್ಮಾಣವಾಗಿದೆ ಎಂದು ಅವರು ಹೇಳಿದರು.

ಈಗ ಕೇಂದ್ರದಲ್ಲಿ ಇರುವುದು ಮೋದಿ ಅವರ ಸರ್ಕಾರ ಅಲ್ಲವೇ ಅಲ್ಲ. ಅದು ಅದಾನಿಯವರ ಸರ್ಕಾರ. ಆದ್ದರಿಂದ ಎಲ್ಲರೂ ಈ ಸರ್ಕಾರವನ್ನು ಅದಾನಿ ಸರ್ಕಾರ ಎಂದು ಕರೆಯಬೇಕು ಎಂದು ರಾಹುಲ್ ಹೇಳಿದರು.

ಈ ಚುನಾವಣೆಯ ನಂತರ ಕೇಂದ್ರದಲ್ಲಿ ಇಂಡಿಯಾ ಮೈತ್ರಿಕೂಟದ ಸರ್ಕಾರ ಬರುತ್ತದೆ ಎಂಬ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದರು.

Author

error: