ಬಿಜೆಪಿ ಪ್ರಣಾಳಿಕೆ ಸುಳ್ಳಿನ ಪತ್ರ; ಮಲ್ಲಿಕಾರ್ಜುನ ಖರ್ಗೆ ಟೀಕೆ

Mallikarjun Kharge; ಮೋದಿ ಅವರು ಉದ್ಯೋಗ ಭರವಸೆ, ರೈತರು ಮತ್ತು ಮಹಿಳೆಯರ ಕಲ್ಯಾಣ ಮೊದಲಾದ ವಿಚಾರಗಳ ಬಗ್ಗೆ ಈ ಹಿಂದೆ ನೀಡಿದ್ದ ಗ್ಯಾರಂಟಿಗಳನ್ನು ಈಡೇರಿಸಿಲ್ಲ

ಬೆಂಗಳೂರು : ಪ್ರಧಾನಿ ನರೇಂದ್ರ ಮೋದಿಯವರು ಬಿಡುಗಡೆ ಮಾಡಿರುವ ಬಿಜೆಪಿ ಪ್ರಣಾಳಿಕೆ ಸುಳ್ಲಿನ ಪತ್ರ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಟೀಕಿಸಿದ್ದಾರೆ. ಪ್ರಧಾನ ಮಂತ್ರಿಗಳು ನೀಡುತ್ತಿರುವ ಗ್ಯಾರಂಟಿ ಸುಳ್ಳಿನ ಗ್ಯಾರಂಟಿ ಎಂದು ಖರ್ಗೆ ಹೇಳಿದ್ದಾರೆ.

ನರೇಂದ್ರ ಮೋದಿ ಅವರು ಉದ್ಯೋಗ ಭರವಸೆ, ರೈತರು ಮತ್ತು ಮಹಿಳೆಯರ ಕಲ್ಯಾಣ ಮೊದಲಾದ ವಿಚಾರಗಳ ಬಗ್ಗೆ ಈ ಹಿಂದೆ ನೀಡಿದ್ದ ಗ್ಯಾರಂಟಿಗಳನ್ನು ಈಡೇರಿಸಿಲ್ಲ ಎಂದೂ ಕಾಂಗ್ರೆಸ್ ಅಧ್ಯಕ್ಷರು ನೆನಪು ಮಾಡಿಕೊಟ್ಟರು.

ದೇಶದ ಬಡವರು ರೈತರು ಮೊದಲಾದ ವರ್ಗಗಳಿಗೆ ಸಹಾಯವಾಗುವ ಯಾವೊಂದು ಕೆಲಸವನ್ನು 10 ವರ್ಷಗಳ ಅವಧಿಯಲ್ಲಿ ಮೋದಿ ಮಾಡಿಲ್ಲ ಎಂದು ಅವರು ಟೀಕಿಸಿದ್ದಾರೆ.

Author

error: