ಹಾಸನ : ಸಂಸದ ಪ್ರಜ್ವಲ್ ರೇವಣ್ಣ ಹಾಗೂ ಮಾಜಿ ಸಚಿವ ಹೆಚ್ ಡಿ ರೇವಣ್ಣ ವಿರುದ್ಧ ಲೈಂಗಿಕ ಕಿರುಕುಳ ಪ್ರಕರಣದ ತನಿಖೆಯನ್ನು ಎಸ್ ಐಟಿ ಚುರುಕುಗೊಳಿಸಿದೆ ಇಂದು ಸಂತ್ರಸ್ತೆಯರ ಜೊತೆಗೆ ಸ್ಥಳ ಮಹಜರು ನಡೆಸುವ ಸಾಧ್ಯತೆಯಿದೆ.

ಹಾಸನದ ಆರ್ ಸಿ ರಸ್ತೆಯಲ್ಲಿರುವ ಪ್ರಜ್ವಲ್ ರೇವಣ್ಣ ಅವರ ನಿವಾಸದಲ್ಲಿ ಅತ್ಯಾಚಾರ ನಡೆದಿದೆ ಎಂದು ಸಂತ್ರಸ್ತೆಯರು ಸೆಕ್ಷನ್ 164 ಅಡಿಯಲ್ಲಿ ನ್ಯಾಯಾಧೀಶರ ಮುಂದೆ ಹೇಳಿಕೆ ದಾಖಲಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ನಿನ್ನೆ ಹಾಸನದ ಮೂರು ಕಡೆಗಳಲ್ಲಿ ಪರಿಶೀಲನೆ ನಡೆಸಿದ್ದ ಎಸ್ ಐಟಿ ತಂಡ ಇಂದು, ರೇವಣ್ಣ ನಿವಾಸದಲ್ಲಿ ಸಂತ್ರಸ್ತೆಯರ ಜೊತೆಗೆ ಮಹಜರು ನಡೆಸಿ, ಸಾಕ್ಷ್ಯ ಕಲೆಹಾಕಬಹುದು ಎಂದು ಹೇಳಲಾಗಿದೆ.
ಎಸ್ ಐಟಿ ತನಿಖೆ ಹಿನ್ನೆಲೆಯಲ್ಲಿ ಪ್ರಜ್ವಲ್ ರೇವಣ್ಣ ನಿವಾಸದ ಆವರಣ ನಿಷೇಧಿಸಿ ಗೇಟ್ ಗೆ ಪೊಲೀಸರು ಬೀಗ ಹಾಕಿದ್ದಾರೆ.

ಎಸ್​ಐಟಿ ಈಗಾಗಲೇ ಈ ಪ್ರಕರಣ ತನಿಖೆಯನ್ನು ಚುರುಕುಗೊಳಿಸಿದ್ದು, ಮಹತ್ವದ ಮಾಹಿತಿ ಕಲೆಹಾಕುತ್ತಿದೆ. ಅಲ್ಲದೇ ವಿಚಾರಣೆಗೆ ಹಾಜರಾಗುವಂತೆ ರೇವಣ್ಣ ಮತ್ತು ಪ್ರಜ್ವಲ್​ಗೆ ನೋಟಿಸ್ ಜಾರಿ ಮಾಡಿದೆ.

Author

Leave a Reply

Your email address will not be published. Required fields are marked *