ಬೆಂಗಳೂರು : ನಿನ್ನೆ ಸಂಜೆ ಬೆಂಗಳೂರು, ಬೆಂಗಳೂರು ಗ್ರಾಮಾಂತರ ಮತ್ತು ಮೈಸೂರು ಪ್ರದೇಶದಲ್ಲಿ ಮಳೆಯಾಗಿದೆ. ಮೈಸೂರಿನಲ್ಲಿ ಆಲೇಕಲ್ಲು ಮಳೆ ಸುರಿದಿದೆ. ಕೆಲವೆಡೆ ಮರಗಳು ನೆಲಕ್ಕೆ ಉರುಳಿವೆ.

ಮೈಸೂರು ನಗರ ಮತ್ತು ಜಿಲ್ಲೆಯಲ್ಲಿ ಗುಡುಗು ಬಿರುಗಾಳಿ ಸಹಿತ ಮಳೆಯಾಯಿತು. ಬಿಸಿಲಿನ ಝಳಕ್ಕೆ ಕಂಗೆಟ್ಟಿದವರು ಈ ಮಳೆಯಲ್ಲಿ ಕುಣಿದು ಕುಪ್ಪಳಿಸಿ ಸಂತೋಷ ಪಟ್ಟರು.

ಬೆಂಗಳೂರು ನಗರದಲ್ಲಿ ಮಧ್ಯಾಹ್ನ 3.30 ರ ಹೊತ್ತಿಗೆ ಮಳೆ ಪ್ರಾರಂಭವಾಯಿತು. ನಾಯಂಡಹಳ್ಳಿ, ಕೆಂಗೇರಿ, ಚಾಮರಾಜಪೇಟೆ, ಬಿಟಿಎಂ ಲೇಔಟ್ ಮೊದಲಾದ ಕಡೆ ಮಳೆ ಸುರಿಯಿತು.

ರಾಜ್ಯದ ಬೇರೆ ಬೇರೆ ಭಾಗಗಳಲ್ಲಿ ಮಳೆಯಾದ ವರದಿ ಯಾಗಿದೆ. ಬೀಸಿಲಿನಿಂದ ಕಂಗೆಟ್ಟು ಹೋದ ರಾಜ್ಯದ ಜನರಿಗೆ ಈ ಮಳೆ ತಂಪು ನೀಡಿದೆ.

Author

Leave a Reply

Your email address will not be published. Required fields are marked *