ನವದೆಹಲಿ : ಚುನಾವಣಾ ರ್‍ಯಾಲಿಯಲ್ಲಿ ಧರ್ಮ ಮತ್ತು ಕೋಮು ಆಧಾರದ ಮೇಲೆ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ವಿರುದ್ಧ. ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ-ಮಾರ್ಕ್ಸಿಸ್ಟ್(ಸಿಪಿಎಂ) ಈಗ ಸುಪ್ರೀಂ ಕೋರ್ಟ್ ಮತ್ತು ಕೇಂದ್ರ ಚುನಾವಣಾ ಆಯೋಗ(ಇಸಿಐ) ಪ್ರಧಾನಿ ಮೋದಿ ವಿರುದ್ಧ ‘ಕಠಿಣ ಕ್ರಮ’ ತೆಗೆದುಕೊಳ್ಳಬೇಕೆಂದು ಒತ್ತಾಯಿಸಿದೆ.

ಸಿಪಿಎಂ ಮೂಲಗಳ ಪ್ರಕಾರ, ಚುನಾವಣಾ ನೀತಿ ಸಂಹಿತೆ(ಎಂಸಿಸಿ) ಉಲ್ಲಂಘಿಸಿದ ಪ್ರಧಾನಿ ಮೋದಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಚುನಾವಣಾ ಆಯೋಗಕ್ಕೆ ಒತ್ತಾಯಿಸಿ ‘ಭಾರತದ ಕಾಳಜಿಯುಳ್ಳ ನಾಗರಿಕರು’ ಆನ್‌ಲೈನ್ ಅರ್ಜಿ ಅಭಿಯಾನ ಆರಂಭಿಸಿದ್ದಾರೆ.

ಆಯೋಗದ ಮೌನವನ್ನು ಪ್ರಶ್ನಿಸಿರುವ ಸಿಪಿಎಂ ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚೂರಿ, ಪ್ರಧಾನಿ ಮೋದಿಯ ಈ ಹೇಳಿಕೆ ಅತ್ಯಂತ ಅಮಾನುಷವಾಗಿದೆ ಎಂದು ಸೋಮವಾರ ಕಿಡಿ ಕಾರಿದ್ದಾರೆ.

ಇತ್ತಿಚಿನ ದಿನಗಳಲ್ಲಿ ಪ್ರಧಾನಿ ಮೋದಿ ಅವರ ಧರ್ಮ ಮತ್ತು ಕೋಮನ್ನು ತಮ್ಮ ಭಾಷಣದ ಪ್ರಧಾನ ಅಂಶವನ್ನಾಗಿ ಬಳಸುತ್ತಿದ್ದಾರೆ, ಮುಸ್ಲೀಂ ಸಮುದಾಯವನ್ನು ಟಾರ್ಗೆಟ್ ಮಾಡುತ್ತ ಕಾಂಗ್ರೆಸ್ ಪಕ್ಷವನ್ನು ಹೀಗಳೀಯುತ್ತಿದ್ದಾರೆ. ಆದರೆ ಚುನಾವಣಾ ಅಯೋಗ ಈ ವಿಚಾರದಲ್ಲಿ ಮೌನವಾಗಿದೆ. ಇದರ ವಿರುದ್ದ ಸಮಾಜಿಕ ಜಾಲ ತಾಣಗಳಲ್ಲಿ ಅಭಿಯಾನ ಪ್ರಾರಂಭವಾಗಿದೆ. ಆಯೋಗಕ್ಕೂ ದೂರು ನೀಡಲಾಗಿದೆ.
ಆದರೆ ಪ್ರಧಾನಿಗಳ ವಿರುದ್ಧ ಚುನಾವಣಾ ಆಯೋಗ ಕ್ರಮ ಕೈಗೊಳ್ಳುವ ವಿಶ್ವಾಸ ಯಾರಿಗೂ ಇಲ್ಲ.

Author

Leave a Reply

Your email address will not be published. Required fields are marked *