ನವದೆಹಲಿ : ದೇಶದ ಪ್ರತಿ ಮೂಲೆಯಲ್ಲೂ ಪ್ರೀತಿಯ ಅಂಗಡಿ ತೆರೆಯಿರಿ ದ್ವೇಷವನ್ನು ಒದ್ದೋಡಿಸಿ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ದೇಶದ ಜನತೆಗೆ ಕರೆ ನೀಡಿದ್ದಾರೆ.
ದೇಶದ ಲೋಕಸಭಾ ಚುನಾವಣೆಯ ಮೊದಲ ಹಂತದ ಮತದಾನ ಪ್ರಾರಂಭವಾಗುತ್ತಿದ್ದಂತೆ ಅವರು ಈ ಕರೆ ನೀಡಿದ್ದಾರೆ.
ಕಳೆದ ವರ್ಷ ಭಾರತ್ ಜೋಡೊ ಯಾತ್ರೆಯ ಸಂದರ್ಭದಲ್ಲೂ ಅವರು ಪ್ರೀತಿಯ ಅಂಗಡಿ ತೆರೆಯುವಂತೆ ಕರೆ ನೀಡಿದ್ದರು. ಅದು ದೇಶದ ಜನರನ್ನು ತಟ್ಟಿತ್ತು. ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಶ ಜಯಬೇರಿ ಬಾರಿಸಿತ್ತು.
ಪ್ರೀತಿಯ ಅಂಗಡಿಯನ್ನು ತೆರೆಯುವ ಮೂಲಕ ಮಾತ್ರ ಪ್ರಜಾಪ್ರಭುತ್ವವನ್ನು ಉಳಿಸಲು ಸಾಧ್ಯ ಎಂದೂ ರಾಹುಲ್ ಹೇಳಿದ್ದಾರೆ.
