ಲಖ್ನೋ : ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಉತ್ತರ ಪ್ರದೇಶದ ಕೆಲವು ಪ್ರದೇಶಗಳಲ್ಲಿ ಬಿಜೆಪಿಗೆ ಕಗ್ಗಂಟಾಗಿದೆ. ಈ ಸಮಸ್ಯೆ ಬಗೆಹರಿಯದಿದ್ದರೆ ಕಳೆದ ಬಾರಿ ಪಡೆದಷ್ಟು ಸ್ಥಾನವನ್ನು ಬಿಜೆಪಿ ಪಡೆಯಲಾರದು. ಆದರೆ ಈ ವಿಚಾರಕ್ಕೆ ಹೆಚ್ಚಿನ ಪ್ರಚಾರ ಸಿಗದಂತೆ ನೋಡಿಕೊಳ್ಳಲಾಗುತ್ತಿದೆ. ಹೀಗಾಗಿ ಉತ್ತರ ಪ್ರದೇಶದ ಸತ್ಯ ದೇಶದ ಉಳಿದ ಭಾಗಗಳಿಗೆ ತಿಳಿಯುತ್ತಿಲ್ಲ.

ಉತ್ತರ ಪ್ರದೇಶದ ದೇಶದ ಅತಿ ದೊಡ್ದ ರಾಜ್ಯಗಳಲ್ಲಿ ಒಂದು. 80 ಲೋಕಸಭಾ ಸ್ಥಾನಗಳೆಂದರೆ ಕಡಿಮೆ ಅಲ್ಲ. ಹೀಗಾಗಿ ಉತ್ತರ ಪ್ರದೇಶ ಗೆದ್ದವರು ದೇಶವನ್ನೇ ಗೆಲ್ಲುತ್ತಾರೆ ಎಂಬುದು ನಂಬಿಕೆ. ಈಗ ಉತ್ತರ ಪ್ರದೇಶದ ಚುನಾವಣಾ ಚಿತ್ರ ಬದಲಾಗುತ್ತಿದೆ. ಯೋಗಿ ಆದಿತ್ಯ ನಾಥರ ಉತ್ತರ ಪ್ರದೇಶವೋ ಅಥವಾ ಮೋದಿ, ಅಮಿತ್ ಶಾ ಅವರ ಉತ್ತರ ಪ್ರದೇಶವೋ ಎನ್ನುವುದು ಬಹುಮುಖ್ಯವಾದ ಪ್ರಶ್ನೆ. ಬಿಜೆಪಿಯ ಭವಿಷ್ಯ ಕೂಡ ಈ ಪ್ರಶ್ನೆಯ ಉತ್ತರದ ಮೇಲೆ ನಿಂತಿದೆ.

ಯೋಗಿ ಆದಿತ್ಯನಾಥ ಅವರ ರಾಜಕೀಯ ಭವಿಷ್ಯವನ್ನು ಮೊಟಕುಗೊಳಿಸುವ ಯತ್ನವನ್ನು ಅಮಿತ್ ಶಾ ಮಾಡುತ್ತಲೇ ಬಂದಿದ್ದಾರೆ. ಯೋಗಿ ಗೂ ಶಾ ಗೂ ಸರಿಯಿಲ್ಲ.ಇಬ್ಬರಿಗೂ ನಂಬರ್ 2 ಮೇಲೆ ಕಣ್ಣು.
ಈ ಬಾರಿ ಲೋಕಸಭಾ ಟಿಕೆಟ್ ಹಂಚಿಕೆಯಲ್ಲೂ ಯೋಗಿ ಆದಿತ್ಯನಾಥರ ಬಾಲ ತುಂಡರಿಸಲು ಅಮಿತ್ ಶಾ ಯತ್ನ ಮಾಡಿದ್ದಾರೆ. ಠಾಕೂರ್ ಮತ್ತು ರಜಪೂತ ರಾಜಕಾರಣವನ್ನು ತಮ್ಮ ರಾಜಕೀಯ ಲಾಭಕ್ಕೆ ಬಳಸಿಕೊಂಡಿದ್ದಾರೆ ಅಮಿತ್ ಶಾ. ಆದರೆ ಇದು ಬಿಜೆಪಿ ಒಳ ರಾಜಕಾರಣದ ಮೇಲೆ ಪರಿಣಾಮ ಬೀರಿದೆ. ಈ ಎರಡೂ ಸಮುದಾಯಗಳು ಬಿಜೆಪಿಯನ್ನು ಬೆಂಬಲಿಸುತ್ತ ಬಂದ ಜಾತಿ ಸಮುದಾಯಗಳು. ಈಗ ಬೇರೆ ಬೇರೆ ಕಾರಣಗಳಿಂದಾಗಿ ಬಿಎಜೆಪಿಯ ಬಗ್ಗೆ ಸಿಟ್ಟು ಉಲ್ಬಣಗೊಂಡಿದೆ.

ರಜಪೂತರಂತೂ ಬಿಜೆಪಿ ಅಭ್ಯರ್ಥಿಗಳಿಗೆ ಬೆಂಬಲ ನೀಡಬಾರದು ಎಂಬ ತೀರ್ಮನವನ್ನೇ ಕೈಗೊಂಡಿದ್ದಾರೆ. ಅವರ ಮಹಾ ಪಂಚಾಯತ್ ತೀರ್ಮಾನ ಕೂಡ ಇದೇ ಆಗಿದೆ. ಇದಕ್ಕೆ ಕಾರಣ ರಜಪೂತ ಸಮುದಾಯದ ನಿರ್ಲಕ್ಷ್ಯ. ಹಾಗೆ ನೋಡಿದರೆ ರಜಪೂತ ಸಮುದಾಯದಲ್ಲಿರುವ ಈ ಭಾವ ಉತ್ತರ ಪ್ರದೇಶಕ್ಕೆ ಮಾತ್ರ ಸೀಮಿತವಾಗಿಲ್ಲ. ರಾಜಸ್ಥಾನದಲ್ಲೂ ಇದೇ ಭಾವನೆ ಇದೆ. ಗುಜರಾತ್ ಪರಿಸ್ಥಿತಿ ಬೇರೆಯಾಗಿಲ್ಲ.

ಈಗ ಪಶ್ಚಿಮ ಉತ್ತರ ಪ್ರದೇಶದಲ್ಲಿ ಬಿಜೆಪಿಗೆ ತೀವ್ರ ರೂಪದ ಸಮಸ್ಯೆಗೆ ಸಿಲುಕಿಕೊಂಡಿದೆ. ಪಕ್ಷದ ಒಳಗಿನ ತಿಕ್ಕಾಟ ಸರಿಪಡಿಸಲಾಗದ ಹಂತವನ್ನು ತಲುಪಿದೆ. ರಜಪೂತ್ ಸಮುದಾಯಕ್ಕೆ ಸೇರಿರುವ ಸಂಗೀತ್ ಸೋಂ ಮತ್ತು ಜಾಟ್ ಸಮುದಾಯದ ಸಂಜೀವ್ ಬಲ್ಯಾನ್ ನಡುವಿನ ಜಗಳ ಎಲ್ಲ ಗಡಿಗಳನ್ನು ದಾಟಿದೆ.

ಈ ಬಾರಿಯ ಲೋಕಸಭಾ ಚುನಾವಣೆಯ ಮೊದಲ ಹಂತದ ಮತದಾನ ನಾಳೆ ನಡೆಯಲಿದೆ. ಈಗಾಗಲೇ ಪಶ್ಚಿಮ ಉತ್ತರ ಪ್ರದೇಶದಲ್ಲಿ ಚುನಾವಣೆಯ ಕಾವು ಏರಿದೆ. ಇಬ್ಬರು ಪ್ರಭಾವಿ ನಾಯಕರಾದ ಸಂಗೀತ್ ಸೋಮ್ ಮತ್ತು ಸಂಜೀವ್ ಬಲ್ಯಾನ್ ಜಗಳ ಬೀದಿಗೆ ಬಿದ್ದಿದೆ. ಇದು ಬಿಜೆಪಿಯ ಚುನಾವಣಾ ಭವಿಷ್ಯದ ಮೇಲೆ ದುಷ್ಪರಿಣಾಮ ಬೀರುವುದು ನಿಶ್ಚಿತ. ಇದರ ಲಾಭವನ್ನು ಪಡೆಯಲು ಸಮಾಜವಾದಿ ಪಕ್ಷ ಕಾದು ಕುಳಿತಿದೆ.

Author

Leave a Reply

Your email address will not be published. Required fields are marked *