ಕಳೆದ 62 ವರ್ಷಗಳ ದಾಖಲೆ ; ಬೆಂಗಳೂರಿನಲ್ಲಿ ಇದೇ ಮೊದಲ ಬಾರಿಗೆ ಅತಿ ಸುದೀರ್ಘ ಒಣಹವೆ

Bengaluru Temperature: 'ಕಳೆದ ಡಿಸೆಂಬರ್‌ನಲ್ಲಿನ 1 ಮಿಮೀಗಿಂತಲೂ ಕಡಿಮೆ ಮಳೆಯಾಗಿತ್ತು. 1962 ರಿಂದೀಚೆಗೆ ನಗರವು ದೀರ್ಘಕಾಲದ ಒಣಹವೆಯನ್ನು ಅನುಭವಿಸಿದೆ.

ಬೆಂಗಳೂರು : ಏರ್ ಕಂಡಿಷನ್ ಸಿಟಿ ಎಂದು ಹೆಸರು ವಾಸಿಯಾಗಿದ್ದ ಬೆಂಗಳೂರು ಈಗ ಕಾದ ಕಾವಲಿಯ ನಗರ. .ಕಳೆದ 62 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಅತಿ ದೀರ್ಘವಾದ ಒಣ ಹವೆ. ಮಳೆ ಇಲ್ಲವೇ ಇಲ್ಲ.

ಭಾರತೀಯ ಹವಾಮಾನ ಇಲಾಖೆಯ ಅಂಕಿ ಅಂಶಗಳ ಪ್ರಕಾರ, ನಗರವು ಕಳೆದ 146 ದಿನಗಳಿಂದ ದೀರ್ಘಕಾಲದ ಶುಷ್ಕತೆಯನ್ನು ಅನುಭವಿಸಿದೆ. ಬೆಂಗಳೂರಿನಲ್ಲಿ ಕೊನೆಯ ಬಾರಿಗೆ ನವೆಂಬರ್ 7 ಮತ್ತು 8 ರಂದು ಕ್ರಮವಾಗಿ 71.2 ಮಿಮೀ ಮತ್ತು 29.3 ಮಿ ಮೀ ಮಳೆಯಾಗಿತ್ತು. ನವೆಂಬರ್ 23 ರಂದು ನಗರದಲ್ಲಿ 1.6 ಮಿಮೀ ಮಳೆಯಾಗಿತ್ತು. ಅದಾದ ನಂತರ ಡಿಸೆಂಬರ್ 3 ಮತ್ತು 4 ರಂದು ನಗರದಲ್ಲಿ ಕ್ರಮವಾಗಿ 0.3 ಮಿಮೀ ಮತ್ತು 0.4 ಮಿಮೀ ಮಳೆಯಾಗಿದೆ.

‘ಕಳೆದ ಡಿಸೆಂಬರ್‌ನಲ್ಲಿನ 1 ಮಿಮೀಗಿಂತಲೂ ಕಡಿಮೆ ಮಳೆಯಾಗಿತ್ತು. 1962 ರಿಂದೀಚೆಗೆ ನಗರವು ದೀರ್ಘಕಾಲದ ಒಣಹವೆಯನ್ನು ಅನುಭವಿಸಿದೆ. 1962 ರಿಂದ 2024ರ ನಡುವೆ ಜನವರಿಯಿಂದ ಮಾರ್ಚ್ ತಿಂಗಳ ಅವಧಿಯಲ್ಲಿ ನಗರದಲ್ಲಿ ಒಂಬತ್ತು ವರ್ಷ ಮಳೆಯಾಗಿಲ್ಲ. ನಿರ್ದಿಷ್ಟವಾಗಿ 1964, 1965, 1973, 1975, 1976, 1983, 1992, 1996 ಮತ್ತು 2007ರಲ್ಲಿ ನಗರದಲ್ಲಿ ಜನವರಿ-ಮಾರ್ಚ್ ತಿಂಗಳಲ್ಲಿ ಮಳೆಯಾಗಿಲ್ಲ ಎಂದು ಬೆಂಗಳೂರು ಹವಾಮಾನ ಇಲಾಖೆಯ ನಿರ್ದೇಶಕರು ಹೇಳಿದ್ದಾರೆ.

ಡಿಸೆಂಬರ್ 4 ರಿಂದ ಏಪ್ರಿಲ್ 17, 2024 ರ ಸುದೀರ್ಘ ಅವಧಿಗೆ ಬೆಂಗಳೂರು ನಗರದಲ್ಲಿ ಮಳೆಯಾಗಿಲ್ಲ. ಈ ಸಮಯದಲ್ಲಿ ಕರ್ನಾಟಕದ ಇತರ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆಯಾಗುತ್ತಿದ್ದರೆ, ಬೆಂಗಳೂರಿನಲ್ಲಿ ಮೋಡ ಕವಿದ ವಾತಾವರಣವಿಲ್ಲ. ಇದಕ್ಕೆ ಕಾರಣ ಎಲ್ ನಿನೋ ಪರಿಣಾಮ. ಇದು ಸರಾಸರಿ ಸಮುದ್ರ ಮಟ್ಟಕ್ಕಿಂತ 3.2 ಕಿಮೀ ಎತ್ತರದ ವ್ಯವಸ್ಥೆಯ ರಚನೆಯಿಂದಾಗಿ, ಇದು ಮೋಡಗಳು ರೂಪುಗೊಳ್ಳಲು ಅವಕಾಶ ನೀಡುತ್ತಿಲ್ಲ ಎಂದು ತಿಳಿಸಿದ್ದಾರೆ.

Author

error: