ನವದೆಹಲಿ : ಪಾಕಿಸ್ಥಾನದಲ್ಲಿ ನಡೆಯುತ್ತಿರುವ ಹತ್ಯಾ ಪ್ರಕರಣಗಳಲ್ಲಿ ಭಾರತದ ಕೈವಾಡವಿದೆ ಎಂಬ ಆರೋಪವನ್ನು ಭಾರತ ತಳ್ಳಿ ಹಾಕಿದೆ. ಈ ಕುರಿತು ಇಂಗ್ಲಂಡಿನ ಗಾರ್ಡಿಯನ್ ಪತ್ರಿಕೆಯಲ್ಲಿ ಬಂದ ವರದಿಯನ್ನು ವಿದೇಶಾಂಗ ಇಲಾಖೆ ತಳ್ಳಿ ಹಾಕಿದೆ.
ಗಾರ್ಡಿಯನ್ ಪತ್ರಿಕೆಯಲ್ಲಿ ಬಂದ ವರದಿಯಲ್ಲಿ 2019 ರ ಪುಲ್ವಾಮಾ ಘಟನೆಯ ನಂತರ ಪಾಕಿಸ್ಥಾನದಲ್ಲಿ ಟಾರ್ಗೆಟ್ ಕಿಲ್ಲಿಂಗ್ ನಡೆಯತೊಡಗಿತು. ಇದರಲ್ಲಿ ಭಾರತದ ಕೈವಾಡವಿತ್ತು ಎಂದು ಆರೋಪಿಸಲಾಗಿತ್ತು.
ಈ ವರದಿಯ ಪ್ರಕಾರ 2020 ರಿಂದ ಇಲ್ಲಿಯವರೆಗೆ ಸುಮಾರು 20 ಪಾಕಿಸ್ತಾನಿಯರನ್ನು ಹತ್ಯೆ ಮಾಡಲಾಗಿದೆ. ಇವರಲ್ಲಿ ಬಹಳಷ್ಟು ಜನ ಕಾಶ್ಮೀರದಲ್ಲಿ ನಡೆಯುತ್ತಿರುವ ಭಯೋತ್ಪಾದಕ ಚಟುವಟಿಕೆಗೆ ಸಂಬಂಧ ಪಟ್ಟವರಾಗಿದ್ದಾರೆ ಎಂದು ಈ ವರದಿ ಹೇಳಿದೆ.
ಮೂವರು ಪತ್ರಕರ್ತರು ಮಾಡಿರುವ ತನಿಖಾ ವರದಿಯಲ್ಲಿ ಭಾರತದ ಗುಪ್ತಚರ ಇಲಾಖೆಯ ಮೂಲಗಳನ್ನು ಉದ್ದರಿಸಲಾಗಿದೆ.
ವಿಶ್ವದ ಹಲವು ರಾಷ್ಟ್ರಗಳ ಗುಪ್ತಚಾರರು ಇನ್ನೊಂದು ದೇಶಕ್ಕೆ ನುಗ್ಗಿ ಅಲ್ಲಿ ತಮ್ಮ ದೇಶದ ವಿರೋಧಿಗಳನ್ನು ಹತ್ಯೆ ಮಾಡಿರುವ ಉದಾಹರಣೆಗಳಿವೆ. ಆದರೆ ಭಾರತದ ಮೇಲೆ ಇಂಥಹ ಆರೋಪ ಇರಲಿಲ್ಲ.
ಮೊದಲ ಬಾರಿಗೆ ಕೆನಡಾ ಇಂತಹ ಆರೋಪ ಮಾಡಿತ್ತು. ಇದಾದ ಮೇಲೆ ಆಮೇರಿಕ ಗುಪ್ತಚಾರ ಇಲಾಖೆ ಕೂಡ ಖಲಿಸ್ಥಾನಿ ಉಗ್ರಗಾಮಿ ಪನ್ನು ಹತ್ಯೆಗೆ ಷಡ್ಯಂತ್ರ ರೂಪಿಸಲಾಗಿತ್ತು ಎಂದು ಭಾರತದ ಮೇಲೆ ಆರೋಪ ಮಾಡಿತ್ತು.
