ಅಹಮದಾಬಾದ್ : ಈ ಬಾರಿ ಅಹಮದಬಾದ್ ನ ನರೇಂದ್ರ ಮೋದಿ ಕ್ರೀಡಾಂಗಣ ಗುಜರಾತ್ ಗೆ ಲಕ್ಕಿ ಅಲ್ಲ. ಇಲ್ಲಿ ಯಾಕೋ ಜಯಲಕ್ಷ್ಮಿ ಒಲಿಯುತ್ತಿಲ್ಲ. ನಿನ್ನೆ ಡೆಲ್ಲಿ ಕ್ಯಾಪಿಟಲ್ಸ್ ಆರು ವಿಕೆಟ್ ಗಳಿಂದ ಗುಜರಾತ್ ಟೈಟನ್ಸ್ ವಿರುದ್ಧ ಗೆಲುವು ಸಾಧಿಸಿತು. ಗುಜರಾತ್ ಮತ್ತೆ ಸೋಲು ಅನುಭವಿಸಿತು.

ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಗುಜರಾತ್ ಟೈಟನ್ಸ್ 17. 3 ಓವರ್ ಗಳಲ್ಲಿ ಗಳಿಸಿದ್ದು 89 ರನ್ ಮಾತ್ರ. ಇದು ಈ ಬಾರಿಯ ಐಪಿಎಲ್ ನಲ್ಲಿ ದಾಖಲಾದ ಕನಿಷ್ಠ ರನ್ ಗಳಿಕೆ. ಗುಜರಾತ್ ಪರ ರಶೀದ್ ಖಾನ್ 31, ಸಾಯಿ ಸುದರ್ಶನ್ 12 ರನ್ ಗಳಿಸಿದದ್ದು ಹೊರತುಪಡಿಸಿದರೆ ಉಳಿದ ಯಾವುದೇ ಆಟಗಾರರು ಎರಡಂಕಿ ದಾಟಲಿಲ್ಲ. ಡೆಲ್ಲಿ ಪರ ಮುಕೇಶ್ 14ಕ್ಕೆ 3 ಮತ್ತು ಇಶಾಂತ್ 8ಕ್ಕೆ 2 ವಿಕೆಟ್ ಪಡೆದರು.

ಗುಜರಾತ್ ಟೈಟನ್ಸ್ ನೀಡಿದ 89 ರನ್ ಗಳ ಗೆಲುವಿನ ಗುರಿಯನ್ನು ಬೆನ್ನಟ್ಟಿದ್ದ ಡೆಲ್ಲಿ ಕ್ಯಾಪಿಟಲ್ಸ್ ಪರ ಪೃಥ್ವಿ ಶಾ 7, ಜಾಕ್ ಫ್ರಾಸರ್ ಮ್ಯಾಕ್ ಗುರ್ಕ್ 20, ಅಭಿಷೇಕ್ ಪೊರೆಲ್ 15, ಸಾಯಿ ಹೊಪ್ 19, ನಾಯಕ ರಿಷಭ್ ಪಂತ್ ಔಟಾಗದೇ 16, ಸುಮಿತ್ ಕುಮಾರ್ ಔಟಾಗದೇ 9 ರನ್ ಗಳಿಸಿದರು. ಇದರಿಂದಾಗಿ 4 ವಿಕೆಟ್ ನಷ್ಟಕ್ಕೆ 92 ರನ್ ಗಳಿಸುವ ಮೂಲಕ ಗೆಲುವು ಸಾಧಿಸಿತು. ರಿಷಭ್ ಪಂತ್ ಫ್ಲೇಯರ್ ಆಫ್ ದಿ ಮ್ಯಾಚ್ ಪ್ರಶಸ್ತಿಗೆ ಭಾಜನರಾದರು.

Leave a Reply

Your email address will not be published. Required fields are marked *