ಬೆಂಗಳೂರು : ಯಾಕೋ ಗೊತ್ತಿಲ್ಲ. ಅತ್ತುತ್ತಮ ತಂಡ.. ಯಾವ ತಂಡದ ವಿರುದ್ಧವಾದರೂ ಹೆಲ್ಲುವ ಶಕ್ತಿ. ಆದರೆ ಗೆಲುವು ಮಾತ್ರ ಮರೀಚಿಕೆ. ಇದು ಬೆಂಗಳೂರಿನ ಆರ್ ಸಿ ಬಿ ತಂಡದ ಸ್ಥಿತಿ. ನಿನ್ನೆ ಆರ್ ಸಿ ಬಿಗೆ ಇನ್ನೊಂದು ಸೋಲು ಕೊಲ್ಕತ್ತಾ ತಂಡದ ವಿರುದ್ಧ ಅಘಾತಕಾರಿ ಸೋಲು. ಒಂದು ಸಮಾಧಾನಕರ ಅಂಶ ಎಂದರೆ ವಿರಾಟ್ ಕೊಯ್ಲಿ ಅವರ ಅರ್ಧ ಶತಕ ಮಾತ್ರ.

ನಿನ್ನೆ ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂ ನಡೆದ ಪಂದ್ಯದಲ್ಲಿ ಕೆಕೆಅರ್ ೭ ವಿಕೆಟ್ ಗಳ ಭರ್ಜರಿ ಜಯಗಳಿಸಿತು.
ಹಾಗೆ ನೋಡಿದರೆ ಮೊದಲು ಬ್ಯಾಟಿಂಗ್ ಮಾಡಿದ ಆರ್ ಸಿ ಬಿ ಸ್ಪರ್ಧಾತ್ಮಕ ಮೊತ್ತವನ್ನೇ ಕಲೆ ಹಾಕಿತು. ಆದರೆ ಗೆಲುವಿಗೆ ಇದು ಸಾಕಾಗಲಿಲ್ಲ.

ಕೆಕೆಆರ್ ಈ ಮೊತ್ತವನ್ನು ಬೆನ್ನು ಹತ್ತಿತು. ಮೊದಲ ಬಾಲ್ ನಿಂದ ಆಕ್ರಮಣಕಾರಿ ಆಟ ಆಡಿತು. ರನ್ ಹರಿದು ಬಂತು. ಆರ್ ಸಿ ಬಿ ಬೌಲರುಗಳು ಏನೂ ಮಾಡಲು ಸಾಧ್ಯವಾಗಲಿಲ್ಲ.

ಹಾಗೆ ನೋಡಿದರೆ, ಆರ್ ಸಿ ಬಿ ನೀಡಿದ 182 ರನ್ ಗಳ ಗುರಿ ಗೆಲುವಿಗೆ ಸಾಕಾಗಿತ್ತು. ಆದರೆ ಬೌಲರುಗಳಿಗೆ ಕೊಲ್ಕತ್ತಾ ತಂಡವನ್ನು ಕಟ್ಟಿ ಹಾಕಲು ಸಾಕಾಗಲಿಲ್ಲ. ಕೇವಲ 3 ವಿಕೆಟ್ ಕಳೆದುಕೊಂಡ ಕೊಲಕತ್ತಾ ಈ ಗುರಿಯನ್ನು ತಲುಪಿ ಬಿಟ್ಟಿತು.

ಆರ್ ಸಿಬಿ ನೀಡಿದ 183 ರನ್ ಗಳ ಗುರಿಯನ್ನು ಕೋಲ್ಕತಾ ತಂಡ ಕೇವಲ 3 ವಿಕೆಟ್ ನಷ್ಟಕ್ಕೆ 16.5 ಓವರ್ ನಲ್ಲಿ 186 ರನ್ ಗಳಿಸಿ ಗುರಿ ಮುಟ್ಟಿದಾಗ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನೀರವ ಮೌನ. ಅಭಿಮಾನಿಗಳಿಗೆ ನಿರಾಶೆ. . ಕೆಕೆಆರ್ ಗೆ 7 ವಿಕೆಟ್ ಗಳ ಭರ್ಜರಿ ಜಯ. ಕೆಕೆಆರ್ ಪರ ವೆಂಕಟೇಶ್ ಅಯ್ಯರ್ (50) ಅರ್ಧಶತಕ, ಸುನಿಲ್ ನರೇನ್ 47 ರನ್, ಫಿಲಿಪ್ ಸಾಲ್ಟ್ 30ರನ್, ಶ್ರೇಯಸ್ ಅಯ್ಯರ್ ಅಜೇಯ 39 ರನ್ ಗಳಿಸಿ ತಂಡದ ಗೆಲುವಿನಲ್ಲಿ ಮಹತ್ತರ ಪಾತ್ರವಹಿಸಿದರು.

ಆರ್ ಸಿ ಬಿ ಒಂದು ತಂಡವಾಗಿ ಆಡಲಿಲ್ಲ. ಸಂಘಟಿತ ಹೋರಾಟ ಕಂಡು ಬರಲಿಲ್ಲ. ಫೀಲ್ಡಿಂಗ್ ನಲ್ಲು ಹಲ್ವು ತಪ್ಪುಗಳಾದವು. ಗೆಲ್ಲ ಬೇಕು ಎಂಬ ಛಲ ಮರೆಯಾಗಿತ್ತು.

Leave a Reply

Your email address will not be published. Required fields are marked *