ಮುಂಬೈ : ಪ್ರಾಯಶಃ ಈ ಬಾರಿಯ ಐಪಿಎಲ್ ನ ಅತಿ ಮಹತ್ವದ ಬೆಳವಣಿಗೆ ಎಂದರೆ ಮುಂಬೈ ಇಂಡಿಯನ್ ತಂಡದ ಕಳಪೆ ಪ್ರದರ್ಶನ. ಐದು ಬಾರಿಯ ಚಾಂಪಿಯನ್ ತಂಡ ಸತತ ಮೂರನೆಯ ಸೋಲನ್ನು ನಿನ್ನೆ ಅನುಭವಿಸಿತು.

ರಾಜಸ್ಥಾನ್ ರಾಯಲ್ಸ್ ತಂಡದಿಂದ ಮುಖ ಮುಸಡಿ ನೋಡದೇ ಹೊಡೆಸಿಕೊಂಡಿತು. ಮುಂಬೈನ ವಾಂಖಡೆ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯದಲ್ಲಿ ಮುಂಬೈ ತಂಡದ ಅಭಿಮಾನಿಗಳು ರೊಚ್ಚಿಗೆದ್ದಿದ್ದರು. ತಂಡದ ಹೊಸ ನಾಯಕ ಹಾರ್ದಿಕ್ ಪಾಂಡ್ಯ ವಿರುದ್ಧ ತಿರುಗಿ ಬಿದ್ದಿದ್ದರು.

ಕೊನೆಗೆ ರೋಹಿತ್ ಶರ್ಮ ಮಧ್ಯ ಪ್ರವೇಶಿಸಿ ಅಭಿಮಾನಿಗಳನ್ನು ಸಮಾಧಾನ ಪಡಿಸಬೇಕಾಯಿತು.
ಹಾಗಿದ್ದರೆ ಮುಂಬೈ ಇಂಡಿಯನ್ಸ್ ತಂಡದ ಕಳಪೆ ಪ್ರದರ್ಶನಕ್ಕೆ ಕಾರಣಗಳೇನು ? ಯಾಕೆ ತಂಡ ಜಯದ ಲಯವನ್ನು ಕಳೆದುಕೊಂಡಿದೆ ?

ಈ ಪ್ರಶ್ನೆಗೆ ಉತ್ತರ ಒಂದೇ ಮುಂಬೈ ಇಂಡಿಯನ್ ತಂಡದ ಆಡಳಿತ ವರ್ಗ.. ಅವರಿಗೆ ಒಂದು ತಂಡವನ್ನು ಕಟ್ಟುವುದು ಹೇಗೆ ? ಯಾರು ಕಟ್ಟಬಲ್ಲರು ಎಂಬ ಸಾಮಾನ್ಯ ಜ್ಞಾನವೂ ಇದ್ದಂತಿಲ್ಲ. ಕ್ರಿಕೆಟ್ ತಂಡವನ್ನು ಕಟ್ಟುವುದೆಂದರೆ ಯಾವುದೋ ಒಂದು ಉದ್ಯಮವನ್ನು ಕಟ್ಟಿದಂತಲ್ಲ. ಮುಂಬೈ ಇಂಡಿಯನ್ ತಂಡದ ಮಾಲಿಕರಾಗಿರುವ ಅಂಬಾನಿಗಳಿಗೆ ಇದರ ಅರಿವು ಇದ್ದಂತೆ ಇಲ್ಲ.

5 ಬಾರಿ ಚಾಂಪಿಯನ್ ಆದ ತಂಡದ ನಾಯಕತ್ವದ ಬದಲಾವಣೆ ಅವರು ಮಾಡಿದ ಮೊದಲ ತಪ್ಪು. ರೋಹಿತ್ ಶರ್ಮ ಈ ತಂಡವನ್ನು ಕಟ್ಟಿದ್ದರು. ಬೆಳಸಿದ್ದರು. ಆದರೆ ಇದು ಅಂಬಾನಿಗಳಿಗೆ ಅರ್ಥವಾಗದೇ ರೋಹಿತ್ ಅವರನ್ನೇ ಬದಲಿಸಿದರು. ರೋಹಿತ್ ಬದಲಿಗೆ ಹಾರ್ದಿಕ ಪಾಂಡ್ಯರನ್ನು ತಂದು ಕೂಡ್ರಿಸಿದರು. ಇದು ತಂಡದ ಒಗ್ಗಟ್ಟನ್ನು ನಾಶಪಡಿಸಿತು. ಹೋರಾಟದ ಕೆಚ್ಚು ಮಾಯವಾಯಿತು. ತಂಡಾ ಎರಡಾಗಿ ಒಡೆದು ಹೋಯಿತು.
ತಂಡ ಸತತ ಸೋಲು ಅನುಭವಿಸಲು ಇಷ್ಟೇ ಸಾಕಾಯಿತು.

ತಂಡ ಕಟ್ಟಿ ಬೆಳೆಸಿದ ರೋಹಿತ್ ಶರ್ಮಾ ಅವರನ್ನು ಕಳುಹಿಸಬೇಕು ಎಂದಿದ್ದರೆ ಅದಕ್ಕೆ ದಾರಿಗಳಿದ್ದವು. ಅವರನ್ನು ಗೌರವದಿಂದ ಕಳುಹಿಸಬಹುದಿತ್ತು. ಅದರ ಬದಲಿಗೆ ಏಕಾಏಕಿ ಅವರನ್ನು ಅಗೌರವದಿಂದ ನಡೆಸಿಕೊಳ್ಳಲಾಯಿತು..ಅದರ ಪರಿಣಾಮ ಈಗ ಕಾಣುತ್ತಿದೆ.

Leave a Reply

Your email address will not be published. Required fields are marked *