ಮುಂಬೈ : ಭಾರತದ ಇಂದಿನ ಯುವಕರು ನಾವು ಯಾರಿಗೂ ಕಡಿಮೆ ಇಲ್ಲ ಎಂಬ ಭಾರತೀಯ ಕ್ರಿಕೆಟರ್ ವಿರಾಟ್ ಕೊಯ್ಲಿ ಮನಸ್ಥಿತಿಯಲ್ಲಿ ಬಳಲುತ್ತಿದ್ದಾರೆ ಎಂದು ಆರ್ ಬಿ ಐ ನ ಮಾಜಿ ಗವರ್ನರ್ ರಘುರಾಮ್ ರಾಜನ್ ಹೇಳಿದ್ದಾರೆ.

ಬಹಳಷ್ಟು ಭಾರತೀಯ ಯುವ ಉದ್ಯಮಿಗಳು ದೇಶದಲ್ಲಿ ಸಂತೋಷವಾಗಿಲ್ಲ. ಹೀಗಾಗಿ ವಿದೇಶಗಳಲ್ಲಿ ಉದ್ಯಮವನ್ನು ಪ್ರಾರಂಭಿಸಲು ಬಯಸುತ್ತಾರೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಭಾರತೀಯ ಹೊಸ ಉದ್ಯಮಿಗಳು ಮತ್ತು ಆಲೋಚಕರು ಸಿಂಗಪುರ ಮತ್ತು ಸಿಲಿಕಾನ್ ವ್ಯಾಲಿಗೆ ಹೋಗುತ್ತಿರುವ ಬಗ್ಗೆ ಅವರು ಪ್ರತಿಕ್ರಿಯೆ ನೀಡಿ ಇದಕ್ಕೆ ಅವರ ಮನಸ್ಥಿತಿ ಕಾರಣ. ಇದನ್ನೇ ನಾವು ವಿರಾಟ್ ಕೊಹ್ಲಿ ಮನಸ್ಥಿತಿ ಎಂದು ಕರೆಯುತ್ತೇನೆ ಎಂದರು.

ಮನುಷ್ಯ ಬಂಡವಾಳವನ್ನು ಸುಧಾರಿಸುವ ಮತ್ತು ಅವಕಾಶವನ್ನು ವೃದ್ಧಿಸುವ ಅಗತ್ಯವಿದೆ ಎಂದು ಅವರು ಅಭಿಪ್ರಾಯ ಪಟ್ಟರು.

ಇವತ್ತಿನ ಯುವ ಉದ್ಯಮಿಗಳು ದೇಶದಿಂದ ಹೊರಕ್ಕೆ ಯಾಕೆ ಹೋಗುತ್ತಿದ್ದಾರೆ ? ಅಲ್ಲಿಯೇ ಉದ್ಯಮ ಸ್ಥಾಪಿಸಲು ಯಾಕೆ ಬಯಸುತ್ತಿದ್ದಾರೆ ? ದೇಶದಲ್ಲೇ ಉದ್ಯಮಗಳ ಸ್ಥಾಪನೆಗೆ ಯಾಕೆ ಮುಂದಾಗುತ್ತಿಲ್ಲ ಎಂಬುದನ್ನು ನಾವು ಕೇಳಬೇಕಾಗಿದೆ ಎಂದು ರಘುರಾಮ್ ರಾಜನ್ ಹೇಳಿದರು.

ಇಂತಹ ಬಹಳಷ್ಟು ಯುವ ಉದ್ಯಮಿಗಳು ಜಗತ್ತನ್ನೇ ಬದಲಿಸುವ ಮಾತನಾಡುತ್ತಾರೆ. ಆದರೆ ಭಾರತದಲ್ಲಿ ಉಳಿದುಕೊಳ್ಳಲು ಬಯಸುವುದಿಲ್ಲ ಎಂದು ಅವರು ಹೇಳಿದರು.

Author

Leave a Reply

Your email address will not be published. Required fields are marked *