ಪರೀಕ್ಷೆಯಲ್ಲಿ ಉತ್ತೀರ್ಣರಾಗಬೇಕೆ ? ಉತ್ತರ ಪ್ರದೇಶಕ್ಕೆ ಹೋಗಿ. ಜೈಶ್ರೀರಾಮ ಬರೆಯಿರಿ..ಯುಪಿಯ ಮಾನಗೆಟ್ಟ ಶಿಕ್ಷಣ ವ್ಯವಸ್ಥೆ ನಮಗೆ ಮಾದರಿಯಾ ?

ಇಡಿ ದೇಶದಲ್ಲಿ ಗುಜರಾತ್ ಮಾದರಿಯ ನಂತರ ಕೇಳಿ ಬರುತ್ತಿರುವುದು ಉತ್ತರ ಪ್ರದೇಶದ ಮಾದರಿ. ಎಲ್ಲ ದೃಷ್ಟಿಯಿಂದ ಉತ್ತರ ಭಾರತಕ್ಕಿಂತ ಮುಂದಿರುವ ನಾವು ಸಹ ಆ ಮಾದರಿಯ ಬಗ್ಗೆ ಮಾತನಾಡಲು ಪ್ರಾರಂಭಿಸಿದ್ದೇವೆ ?ಆಲಿ ಮಾದರಿ ಹೇಗಿದೆ ಗೊತ್ತಾ ? ಇದನ್ನು ಓದಿ ಕೇಳಿಸಿಕೊಳ್ಳಿ. ಉತ್ತರ ಪ್ರದೇಶದ ಜೌನ್ ಪುರ ಸರ್ಕಾರಿ ವಿಶ್ವವಿದ್ಯಾಲಯ. ವಿದ್ಯಾರ್ಥಿಗಳಿಗೆ ಪ್ರಶ್ನೆಗಳಿಗೆ ಉತ್ತರ ಗೊತ್ತಿರಲಿಲ್ಲ.…

ಉಪ್ಪು ತಿಂದವರು ನೀರು ಕುಡಿಬೇಕು, ಪ್ರಜ್ವಲ್ ಮೇಲಿನ ಆರೋಪಕ್ಕೆ ಕುಮಾರಣ್ಣ ತಣ್ಣನೆಯ ಪ್ರತಿಕ್ರಿಯೆ; ಕುಮಾರಸ್ವಾಮಿಗೆ ಇದೆಲ್ಲ ಮೊದಲೇ ಗೊತ್ತಿತ್ತಾ ?

ನಾನಾಗಲಿ ದೇವೇಗೌಡರಾಗಲಿ ಯಾವತ್ತಿಗೂ ಹೆಣ್ಣು ಮಕ್ಕಳ ವಿಚಾರದಲ್ಲಿ ಅತ್ಯಂತ ಗೌರವಯುತವಾಗಿ ನಡೆದುಕೊಂಡಿದ್ದೇವೆ ಎಂದು ಹೆಚ್ ಡಿ ಕುಮಾರಸ್ವಾಮಿ ಹೇಳಿದ್ದಾರೆ.ಯಾರಾದರೂ ಹೆಣ್ಣು ಮಕ್ಕಳು ಯಾವುದೋ ಕೆಲಸಕ್ಕಾಗಿ ನಮ್ಮ ಬಳಿ ಬಂದಾಗ ಸಹಾಯ ಮಾಡಿದ್ದೇವೆ ಎಂದು ಮಹಿಳೆಯರ ಜೊತೆ ತಾವೆಷ್ಟು ಗೌರವದಿಂದ ನಡೆದುಕೊಂಡಿದ್ದೇವೆ ಎಂದು ಅವರು ವಿವರಿಸಿದರು.ಸಂಸದ ಪ್ರಜ್ವಲ್ ರೇವಣ್ಣ ಮೇಲೆ ಬಂದ ಆರೋಪಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ…

ಮುಸ್ಲೀಮ್ ಸಮುದಾಯ ಕುರಿತ ಮೋದಿ ಹೇಳಿಕೆ ಒಪ್ಪದ ಅಪರಾಧ, ಪಕ್ಷದಿಂದಲೇ ಉಚ್ಚಾಟನೆ; ಕ್ಷುಲ್ಲಕ್ಕ ಕಾರಣಕ್ಕಾಗಿ ಜೈಲು ವಾಸ !

ರಾಜಸ್ಥಾನದ ಬಿಕಾನೇರ್ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಮಾಜಿ ಅಧ್ಯಕ್ಷ ಉಸ್ಮಾನ್ ಘನಿ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಮೂರು ದಿನಗಳ ಹಿಂದಷ್ಟೇ ಬಿಜೆಪಿ ಅವರನ್ನು ಪಕ್ಷದಿಂದ ಉಚ್ಚಾಟಿಸಿತ್ತು. ಈ ಬಂಧನಕ್ಕೆ ಕಾರಣ ಶಾಂತಿಭಂಗ ! ಘನಿ ಅವರ ಬಂಧನಕ್ಕೆ ಸಂಬಂಧಿಸಿದಂತೆ ಪೊಲೀಸರು ಹೇಳಿಕೆಯನ್ನು ಬಿಡುಗಡೆ ಮಾಡಿದ್ದು, ಪೊಲೀಸ್ ಠಾಣೆಯಲ್ಲಿ ಅಧಿಕಾರಿಗಳೊಂದಿಗಿನ ವಾಗ್ವಾದವನ್ನು ಉಲ್ಲೇಖಿಸಿ ಶಾಂತಿಗೆ ಭಂಗ ತಂದ…

ದೆಹಲಿ ಕಾಂಗ್ರೆಸ್ ಅಧ್ಯಕ್ಷರ ವಿಕೆಟ್ ಡೌನ್… ಎ ಎ ಪಿ ಜೊತೆ ಮೈತ್ರಿಗೆ ವಿರೋಧ..

ದೆಹಲಿ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಅರವಿಂದರ್ ಸಿಂಗ್ ಲೌಲಿ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಇದಕ್ಕೆ ಅವರು ನೀಡಿದ ಕಾರಣ ಆಮ್ ಆದ್ಮಿ ಪಾರ್ಟಿಯ ಜೊತೆಗಿನ ಮೈತ್ರಿ.ಹಾಗೆ ನೋಡಿದರೆ ದೆಹಲಿಯ ಕಾಂಗ್ರೆಸ್ ಘಟಕ ಮೊದಲಿನಿಂದಲೂ ಆಮ್ ಆದ್ಮಿ ಜೊತೆ ಮೈತ್ರಿಯನ್ನು ವಿರೋಧಿಸುತ್ತ ಬಂದಿತ್ತು. ಆದರೆ ಪಕ್ಷದ ವರಿಷ್ಟರು ಈ ವಿಚಾರದಲ್ಲಿ ರಾಜಕೀಯ ತೀರ್ಮಾನವನ್ನು ಕೈಗೊಂಡಿದ್ದರು.ಈಗ…

ಭಾರತ ಮತ್ತು ಚೀನಾ ನಡುವೆ ಚೀನಾವನ್ನೆ ಆಯ್ಕೆ ಮಾಡಿಕೊಂಡ ಎಲಾನ್ ಮಸ್ಕ್; ಭಾರತಕ್ಕೆ ಹಿನ್ನಡೆ…?

ಇತ್ತೀಚೆಗೆ ಬೇರೆ ಕೆಲಸದ ಕಾರಣ ನೀಡಿ ಭಾರತ ಭೇಟಿಯನ್ನು ರದ್ದು ಪಡಿಸಿದ್ದ ಟೆಸ್ಲಾ ಮಾಲಿಕ ಎಲಾನ್ ಮಸ್ಕ್ ದಿಡೀರ್ ಆಗಿ ಚೀನಾಕ್ಕೆ ಭೇಟಿ ನೀಡಿದ್ದಾರೆ. ಇದು ಭಾರತೀಯರು ಹುಬ್ಬೇರಿಸುವಂತೆ ಮಾಡಿದೆ.ಎಲೆಕ್ಟ್ರಿಕ್ ವಾಹನ ತಯಾರಿಕೆಯಲ್ಲಿ ಎರಡನೆಯ ಅತಿ ದೊಡ್ದ ಮಾರುಕಟ್ಟೆ ಎಂದರೆ ಚೀನಾ, ಹೀಗಾಗಿ ಅಲ್ಲಿಗೆ ಭೇಟಿ ನೀಡಿರುವ ಎಲಾನ್ ಮಸ್ಕ್ ಅಧಿಕಾರಿಗಳ ಜೊತೆ ಸಮಾಲೋಚನೆ ನಡೆಸಲಿದ್ದಾರೆ.ಭಾರತದ…

ಪೆನ್‌ಡ್ರೈವ್‌ ಕೇಸ್: ಎಡಿಜಿಪಿ ಬಿ.ಕೆ ಸಿಂಗ್ ನೇತೃತ್ವದಲ್ಲಿ ಎಸ್ಐಟಿ ರಚನೆ ಆರೋಪಿ ಪರಾರಿ.

ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಕೇಳಿಬರುತ್ತಿರುವ ಲೈಂಗಿಕ ದೌರ್ಜನ್ಯದ ಪೆನ್ ಡ್ರೈವ್ ಸಿಕ್ಕಿರುವ ಪ್ರಕರಣ ಸಂಬಂಧ ರಾಜ್ಯ ಸರ್ಕಾರ ಭಾನುವಾರ ಎಡಿಜಿಪಿ ಬಿ ಕೆ ಸಿಂಗ್ ನೇತೃತ್ವದ ವಿಶೇಷ ತನಿಖಾ ತಂಡವನ್ನು ರಚಿಸಿತು ಸರ್ಕಾರ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡು ಎಸ್ ಐಟಿ ತಂಡ ರಚಿಸಲಾಗಿದೆ. ನಾವು ಅವರ ತನಿಖೆಯಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ ಎಂದು ಗೃಹ…

ಕೇಂದ್ರದ ಬರ ಪರಿಹಾರ ಏನಕ್ಕೂ ಸಾಲದು. ಗೋ ಬ್ಯಾಕ್ ಮೋದಿ, ಗೋ ಬ್ಯಾಕ್….ರಾಜ್ಯ ಕಾಂಗ್ರೆಸ್ ನಾಯಕರಿಂದ ವಿಧಾನಸೌಧದ ಗಾಂಧಿ ಪ್ರತಿಮೆ ಮುಂದೆ ಪ್ರತಿಭಟನೆ

ಕೇಂದ್ರ ಸರ್ಕಾರ 3,454 ಕೋಟಿ ರೂಪಾಯಿ ಬರ ಪರಿಹಾರ ಬಿಡುಗಡೆ ಮಾಡಿದೆ. ಆದರೆ ಇದು ರಾಜ್ಯದ ಬೇಡಿಕೆಯನ್ನು ಪೂರೈಸಲು ಈ ಪರಿಹಾರ ಮೊತ್ತ ಸಾಕಾಗುವುದಿಲ್ಲ. ಆನೆಯ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆಯಂತೆ ಕೇಂದ್ರ ಸರ್ಕಾರ ಅನ್ಯಾಯ ಮಾಡುತ್ತಿದೆಎಂದು ಆರೋಪಿಸಿ ಇಂದು ಭಾನುವಾರ ಮತ್ತೆ ವಿಧಾನಸೌಧದ ಗಾಂಧಿ ಪ್ರತಿಮೆ ಮುಂದೆ ಪ್ರತಿಭಟನೆ ನಡೆಸಿದರು. ಕೇಂದ್ರದಿಂದ ರಾಜ್ಯಕ್ಕೆ ಬರ ಪರಿಹಾರ…

ರಾತ್ರಿ ಬೆಳಗಾವಿಯಲ್ಲಿ ತಂಗಿದ್ದ ಮೋದಿ; ಜೋಳದ ರೊಟ್ಟಿ ಊಟ; ಇಂದು ಭಾಷಣ

ಪ್ರಧಾನಿ ನರೇಂದ್ರ ಮೋದಿ ಅವರು ನಿನ್ನೆ ಸಂಜೆ ಬೆಳಗಾವಿಗೆ ಬಂದು ಇಳಿದರು. ಇಂದು ಹಲವಾರು ಚುನಾವಣಾ ಪ್ರಚಾರ ಸಭೆಗಳಲ್ಲಿ ಅವರು ಪಾಲ್ಗೊಳ್ಳುವರು.ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣಕ್ಕೆ ಬಂದು ಇಳಿದ ಪ್ರಧಾನಿ ಅವರನ್ನು ಬೆಳಗಾವಿಯ ಬಿಜೆಪಿ ಅಭ್ಯರ್ಥಿ ಜಗದೀಶ್ ಶೆಟ್ಟರ್ ಸ್ವಾಗತಿಸಿದರು.ರಾತ್ರಿ ಬೆಳಗಾವಿಯಲ್ಲೇ ತಂಗಿದ್ದ ಮೋದಿ ಇಂದು ಹಲವಾರು ಸಭೆಗಳಲ್ಲಿ ಪಾಲ್ಗೊಳ್ಳುವರು.ನಿನ್ನೆ ರಾತ್ರಿ ಉತ್ತರ ಕರ್ನಾಟಕದ ಜೋಳದ…

ಪೆನ್ ಡ್ರೈವ್ ವೀಡಿಯೋ; ಹಾಸನದ ಲೈಂಗಿಕ ಹಗರಣ ತನಿಖೆಗೆ SIT ರಚನೆ: ಆರೋಪಿ ವಿದೇಶಕ್ಕೆ ಪರಾರಿ ?

ಹಾಸನ ಜಿಲ್ಲೆಯಾದ್ಯಂತ ಕೇಳಿಬಂದಿರುವ ಲೈಂಗಿಕ ದೌರ್ಜನ್ಯ ಆರೋಪದ ವೀಡಿಯೋ ಕುರಿತ ತನಿಖೆಗೆ ವಿಶೇಶ ತನಿಖಾ ತಂಡ ರಚಿಸಲು ಸರ್ಕಾರ ತೀರ್ಮಾನಿಸಿದೆ ಎಂದು ಸಿಎಂ ಸಿದ್ದರಾಮಯ್ಯ ಪ್ರಕಟಿಸಿದ್ದಾರೆ.. ಕಳೆದ ಕೆಲವು ವಾರಗಳಿಂದ ಈ ವೀಡಿಯೋ ಜಿಲ್ಲೆಯಾದ್ಯಂತ ಸದ್ದು ಮಾಡಿತ್ತು. ಮಾನವಂತರು ನೋಡಲು ಸಾಧ್ಯವಿಲ್ಲದ ಈ ವೀಡೀಯೋ ಕುರಿತು ಸಾರ್ವಜನಿಕ ವಲಯದಲ್ಲಿ ಚರ್ಚೆ ನಡೆದಿತ್ತು. ಈ ವೀಡಿಯೋದಲ್ಲಿ ಇರುವವರು…