ಅಯೋಧ್ಯಯ ರಾಮಮಂದಿರ ವಿಚಾರ ಚುನಾವಣೆಯ ಮೇಲೆ ಯಾವ ಪರಿಣಾಮವನ್ನು ಬೀರದು: ಶರದ್ ಪವಾರ್

Sharad Pawar : ರಾಮ ಮಂದಿರದಲ್ಲಿ ಶ್ರೀರಾಮನ ವಿಗ್ರಹನ ಪ್ರತಿಮೆಯನ್ನು ಸ್ಥಾಪಿಸಲಾಗಿದೆ. ಆದರೆ ಸೀತಾಮಾತೆಯ ವಿಗ್ರಹ ಇಲ್ಲ. ಈ ಬಗ್ಗೆ ಮಹಿಳೆಯರು ಪ್ರಶ್ನಿಸುತ್ತಿದ್ದಾರೆ

ಮುಂಬೈ : ಅಯೋಧ್ಯಯ ರಾಮ ಮಂದಿರದ ವಿಚಾರ ಈಗ ಮುಗಿದ ಅಧ್ಯಾಯ. ಇನ್ನು ಮುಂದೆ ಈ ಬಗ್ಗೆ ಯಾರೂ ಮಾತನಾಡುವುದಿಲ್ಲ. ಇದು ಪ್ರಸಕ್ತ ಲೋಕಸಭಾ ಚುನಾವಣೆಯಲ್ಲಿ ಯಾವ ಪರಿಣಾಮವನ್ನು ಬೀರುವುದಿಲ್ಲ.

ಎನ್ ಸಿ ಪಿ ನಾಯಕ ಹಿರಿಯ ರಾಜಕೀಯ ಮುತ್ಸದ್ದಿ ಶರದ್ ಪವಾರ್ ಅವರ ಅಭಿಪ್ರಾಯ ಇದು. ಪುಣೆ ಸಮೀಪದ ಪುರಂದರದಲ್ಲಿ ಸುದ್ದಿ ಗಾರರ ಜೊತೆ ಮಾತನಾಡಿದ ಅವರು ಅಯೋಧೆಯಲ್ಲಿ ರಾಮ ಮಂದಿರ ಆಗಿದೆ. ಈಗ ಯಾರೂ ಈ ಬಗ್ಗೆ ಚರ್ಚೆ ಮಾಡುವುದಿಲ್ಲ ಎಂದರು.

ರಾಮ ಮಂದಿರದಲ್ಲಿ ಶ್ರೀರಾಮನ ವಿಗ್ರಹನ ಪ್ರತಿಮೆಯನ್ನು ಸ್ಥಾಪಿಸಲಾಗಿದೆ. ಆದರೆ ಸೀತಾಮಾತೆಯ ವಿಗ್ರಹ ಇಲ್ಲ. ಈ ಬಗ್ಗೆ ಕೆಲವು ಮಹಿಳೆಯರು ಪ್ರಶ್ನಿಸುತ್ತಿದ್ದಾರೆ ಎಂದೂ ಸಹ ಪವಾರ್ ಹೇಳಿದರು

Author

error: