ಮಾಲೆ (ಮಾಲ್ಡೀವ್ಸ್) : ಭಾರತದ ಜೊತೆಗಿನ ಸಂಬಂಧ ಕೆಟ್ಟ ಮೇಲೆ ಮಾಲ್ದೀವ್ಸ್ ತೀವ್ರ ಸಂಕಷ್ಟಕ್ಕೆ ಸಿಲುಕಿದೆ. ಅಲ್ಲಿನ ಪ್ರವಾಸೋದ್ಯಮದ ಮೇಲೆ ತೀವ್ರ ರೂಪದ ಹೊಡೆತ ಬಿದ್ದಿದೆ. ಹೋಟೆಲ್ ಕೊಠಡಿಗಳು ಖಾಲಿ ಬಿದ್ದಿವೆ. ಟ್ಯಾಕ್ಸಿಗಳನ್ನು ಕೇಳುವವರಿಲ್ಲ.
ಮಾಲ್ದೀವ್ಸ್ ಸರ್ಕಾರ ಚೀನಾ ಸ್ನೇಹ ತನ್ನ ಸಮಸ್ಯೆ ಬಗೆಹರಿಸುತ್ತದೆ ಎಂದು ಕೊಂಡಿತ್ತು. ಈಗಲೂ ಹಾಗೆ ಅಂದುಕೊಂಡಿದೆ. ಆದರೆ ಪರಿಸ್ಥಿತಿ ಕೈ ಮೀರುತ್ತಿದೆ. ಈ ಸಂದರ್ಭದಲ್ಲಿ ಭಾರತೀಯ ಪ್ರವಾಸಿಗರನ್ನು ಮತ್ತೆ ಸೇಳೆಯುವುದಕ್ಕೆ ಅಲ್ಲಿನ ಪ್ರವಾಸಿ ಸಂಸ್ಥೆಗಳು ಯೋಜನೆಗಳನ್ನು ರೂಪಿಸುತ್ತಿವೆ.
ಈ ಯೋಜನೆಯ ಭಾಗವಾಗಿ ಭಾರತದ ಪ್ರಮುಖ ನಗರಗಳಲ್ಲಿ ರೋಡ್ ಶೋ ನಡೆಸುವುದು ಒಂದು. ಮಾಲ್ದೀವ್ಸ್ ನಲ್ಲಿನ ಪ್ರವಾಸಿ ಆಕರ್ಷಣೆಗಳು, ಅಲ್ಲಿ ಇರುವ ಸೌಲಭ್ಯ ಎಲ್ಲವನ್ನೂ ಭಾರತೀಯ ಪ್ರವಾಸ ಪ್ರಿಯರಿಗೆ ತೋರಿಸುವ ಉದ್ದೇಶ ಹೊಂದಲಾಗಿದೆ.
ಈ ಕುರಿತು ಮಾಲೆಯಲ್ಲಿರುವ ಭಾರತದ ಹೈಕಮೀಷನರ್ ಮುನು ಮಹಾವರ್ ಅವರ ಜೊತೆ ಮಾಲ್ದೀವ್ಸ್ ಪ್ರವಾಸಿ ಸಂಸ್ಥೆಗಳ ಪ್ರತಿನಿಧಿಗಳು ಚರ್ಚೆ ನಡೆಸುತ್ತಿದ್ದಾರೆ.
ಮಾಲ್ದೀವ್ಸ್ ಪ್ರವಾಸಿ ಸಂಸ್ಥೆಗಳು ಈ ಸಂಬಂಧದಲ್ಲಿ ತಮ್ಮ ಉದ್ದೇಶವನ್ನು ಬಹಿರಂಗಪಡಿಸಿವೆ. ಭಾರತದ ಪ್ರವಾಸಿಗರನ್ನು ಮತ್ತೆ ಆಕರ್ಷಿಸಲು ನಾವು ಯೋಜನೆಯನು ರೂಪಿಸಿದ್ದೇವೆ. ಈ ಯೋಜನೆಯ ಭಾಗವಾಗಿ ಭಾರತದ ಪ್ರಮುಖ ನಗರಗಳಲ್ಲಿ ರೋಡ್ ಶೋ ವ್ಯವಸ್ಥೆ ಮಾಡಲಾಗುವುದು ಎಂದು ತಿಳಿಸಿವೆ,
ಮಾಲ್ದೀವ್ಸ್ ನ ಈಗಿನ ಸರ್ಕಾರ ಭಾರತ ವಿರೋಧಿ ನೀತಿಯನ್ನು ಅನುಸರಿಸಿದಾಗ ಸಮಸ್ಯೆ ಪ್ರಾರಂಭವಾಗಿತ್ತು. ಹಲವು ಸಚಿವರು ಭಾರತದ ವಿರುದ್ಧ ಅವಮಾನಕರ ಹೇಳಿಕೆಗಳನ್ನು ನೀಡಿದ್ದರು. ಇದರಿಂದಾಗಿ ಭಾರತಿಯ ಪ್ರವಾಸಿಗಳು ಮಾಲ್ದೀವ್ಸ್ ಪ್ರವಾಸವನ್ನು ಬಾಯ್ಕಾಟ್ ಮಾಡಿದ್ದರು. ಇದರಿಂದಾಗಿ ಭಾರತೀಯ ಪ್ರವಾಸಿಗರ ಸಂಖ್ಯೆ ಗಣನೀಯವಾಗಿ ಕುಸಿದಿತ್ತು.
