ಗುಜರಾತ್ ಮಾದರಿ; ಬೌದ್ಧ ಧರ್ಮಕ್ಕೆ ಮತಾಂತರ ಆಗುವ ಹಿಂದೂಗಳೂ ಸರ್ಕಾರದ ಪೂರ್ವಾನುಮತಿ ಪಡೆಯಬೇಕು- ಗುಜರಾತ್ ಗೃಹ ಇಲಾಖೆ

ಬೌದ್ಧ ಧರ್ಮಕ್ಕೆ ಮತಾಂತರಗೊಳ್ಳಲು ಸಲ್ಲಿಸುತ್ತಿರುವ ಅರ್ಜಿಗಳು ನಿಯಮಗಳಿಗೆ ಅನುಸಾರವಾಗಿ ಇಲ್ಲ. ದಸರಾ ಮತ್ತು ಇತರ ಹಬ್ಬಗಳ ಸಂದರ್ಭದಲ್ಲಿ ಬೌದ್ಧ ಧರ್ಮಕ್ಕೆ ಮತಾಂತರಗೊಂಡವರು ನಿಯಮಗಳನ್ನು ಸರಿಯಾಗಿ ಪಾಲಿಸಿಲ್ಲ

ನವದೆಹಲಿ : 2014 ರ ನಂತರ ಈ ದೇಶದಲ್ಲಿ ಅತಿಯಾಗಿ ಚರ್ಚೆ ಆಗಿದ್ದು ಗುಜರಾತ್ ಮಾದರಿ. ಈ ಬಾರಿ ಲೋಕಸಭೆ ಚುನಾವಣೆಯಲ್ಲಿ ಮಾತ್ರ ಗುಜರಾತ್ ಮಾದರಿಯ ಬಗ್ಗೆ ಪ್ರಧಾನಿ ಮೋದಿ ಗೃಹ ಸಚಿವ ಅಮಿತ್ ಶಾ ಮಾತನಾಡುತ್ತಿಲ್ಲ ಯಾಕೋ ಗೊತ್ತಿಲ್ಲ. ಈಗ ಗುಜರಾತ್ ನಿಂದ ಇನ್ನೊಂದು ಸುದ್ದಿ ಬಂದಿದೆ.

ಬೌದ್ಧ ಮತವೇ ಬೇರೆ. ಹೀಗಾಗಿ ಹಿಂದೂಗಳು ಆ ಧರ್ಮಕ್ಕೆ ಮತಾಂತರ ಗೊಳ್ಳುವುದಿದ್ದರೆ ಪರವಾನಿಗೆ ಪಡೆಯುವುದು ಅತ್ಯಗತ್ಯ. ಜೊತೆಗೆ ಸಿಖ್ ಮತ್ತು ಜೈನ ಧರ್ಮಗಳೂ ಬೇರೆ ಆ ಧರ್ಮಕ್ಕೆ ಮತಾಂತರ ವಾಗುವುದಿದ್ದರೂ ಅನುಮತಿ ಅತ್ಯಗತ್ಯ ಎಂದು ಗುಜರಾತ್ ಸರ್ಕಾರ ಹೇಳುತ್ತಿದೆ.

ಗುಜರಾತ್ ನಲ್ಲಿ 2003 ರ ಧಾರ್ಮಿಕ ಸ್ವಾತಂತ್ರ್ಯ ಕಾನೂನು ಎಂಬ ಕಾನೂನಿದೆ. ಈ ಕಾನೂನಿನ ಅಡಿಯಲ್ಲಿ ಬೌದ್ಧ ಧರ್ಮ ವನ್ನು ಸೇರ ಬಯಸುವ ಹಿಂದೂಗಳು ಜಿಲ್ಲಾ ಮಾಜಿಸ್ಟ್ರ‍ೇಟ್ ಅವರ ಪರವಾನಿಗೆ ಪಡೆಯುವುದು ಅತ್ಯಗತ್ಯ. ಯಾಕೆಂದರೆ ಈ ಕಾನೂನಿನ ಪ್ರಕಾರ ಬೌದ್ಧ ಧರ್ಮ ಹಿಂದೂ ಧರ್ಮ ಅಲ್ಲ ಎಂದು ಗುಜರಾತ್ ಸರ್ಕಾರ ಹೇಳುತ್ತಿದೆ.
ಏಪ್ರಿಲ್ 8 ರಂದು ಈ ಸಂಬಂಧ ಸರ್ಕಾರಿ ಸುತ್ತೋಲೆಯನ್ನು ಹೊರಡಿಸಲಾಗಿದೆ.

ಗೃಹ ಇಲಾಖೆ ಹೊರಡಿಸಿರುವ ಈ ಸುತ್ತೋಲೆ ಕುತೂಹಲಕರವಾಗಿದೆ. ಬೌದ್ಧ ಧರ್ಮಕ್ಕೆ ಮತಾಂತರಗೊಳ್ಳಲು ಸಲ್ಲಿಸುತ್ತಿರುವ ಅರ್ಜಿಗಳು ನಿಯಮಗಳಿಗೆ ಅನುಸಾರವಾಗಿ ಇಲ್ಲ. ದಸರಾ ಮತ್ತು ಇತರ ಹಬ್ಬಗಳ ಸಂದರ್ಭದಲ್ಲಿ ಬೌದ್ಧ ಧರ್ಮಕ್ಕೆ ಮತಾಂತರಗೊಂಡವರು ನಿಯಮಗಳನ್ನು ಸರಿಯಾಗಿ ಪಾಲಿಸಿಲ್ಲ ಎಂದು ಈ ಸುತ್ತೋಲೆ ತಿಳಿಸಿದೆ.

ಬಹಳಷ್ಟು ಸಂದರ್ಭಗಳಲ್ಲಿ ಬೌದ್ಧ ಧರ್ಮ ಮತಾಂತರಕ್ಕೆ ಅನುಮತಿ ಅಗತ್ಯ ಇಲ್ಲ ಎಂದು ತಪ್ಪು ತಿಳುವಳಿಕೆ ಇದೆ ಎಂದೂ ಸುತ್ತೋಲೆಯಲ್ಲಿ ವಿವರಿಸಲಾಗಿದೆ. ‘ಬಹಳಷ್ಟು ಸಂದರ್ಬಗಳಲ್ಲಿ ಬೌದ್ಧ ಧರ್ಮ ಮತಾಂತರಕ್ಕೆ ಅನುಮತಿ ಅಗತ್ಯ ಇಲ್ಲ ಎಂದು ತಪ್ಪು ತಿಳುವಳಿಕೆ ಇದೆ ಎಂದೂ ಸುತ್ತೋಲೆಯಲ್ಲಿ ವಿವರಿಸಲಾಗಿದೆ.

Author

Leave a Reply

Your email address will not be published. Required fields are marked *