ಕೆ.ಪಿ. ನಂಜುಂಡಿ ಬಿಜೆಪಿಗೆ ರಾಜೀನಾಮೆ ; ಬುಧವಾರ ಕಾಂಗ್ರೆಸ್ ಸೇರ್ಪಡೆ

MLC KP Nanjundi Resign; ಹುಬ್ಬಳ್ಳಿಗೆ ತೆರಳಿ ಎಂಎಲ್ಸಿ ಕೆಪಿ ನಂಜುಂಡಿ ಅವರು ಸಭಾಪತಿ ಬಸವರಾಜ ಹೊರಟ್ಟಿ ಅವರನ್ನು ಭೇಟಿ ಮಾಡಿ ರಾಜೀನಾಮೆ ಪತ್ರ ಸಲ್ಲಿಸಿದರು

ಬೆಂಗಳೂರು : ವಿಶ್ವಕರ್ಮ ಸಮಾಜದ ನಾಯಕ ಕೆ.ಪಿ. ನಂಜುಂಡಿ ವಿಧಾನ ಪರಿಷತ್ ಸದಸ್ಯತ್ವಕ್ಕೆ ಮತ್ತು ಬಿಜೆಪಿ ಪಕ್ಷಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ.

ಇಂದು ಹುಬ್ಬಳ್ಳಿಗೆ ತೆರಳಿ ಎಂಎಲ್ಸಿ ಕೆಪಿ ನಂಜುಂಡಿ ಅವರು ಸಭಾಪತಿ ಬಸವರಾಜ ಹೊರಟ್ಟಿ ಅವರನ್ನು ಭೇಟಿ ಮಾಡಿ ರಾಜೀನಾಮೆ ಪತ್ರ ಸಲ್ಲಿಸಿದರು.

ಬಿಜೆಪಿ ಪಕ್ಷ ನನ್ನನ್ನು ಸರಿಯಾಗಿ ಬಳಸಿಕೊಳ್ಳಲಿಲ್ಲ. ನನ್ನನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿತು. ಹೀಗಾಗಿ ಪಕ್ಷವನ್ನು ಬಿಡುವ ನಿರ್ಧಾರ ಕೈಗೊಂಡೆ ಎಂದು ಅವರು ಹೇಳಿದರು.

ಕಾಂಗ್ರೆಸ್ ಪಕ್ಷವನ್ನು ಸೇರುವ ನಿರ್ಧಾರವನ್ನು ಕೈಗೊಂಡಿರುವ ಅವರು ಬುಧವಾರ ಕಾಂಗ್ರೆಸ್ ಸೇರಲಿದ್ದಾರೆ,

Author

error: