ಈಗ ಪಾಕಿಸ್ತಾನದ ಒಳಗೆ ನುಗ್ಗುವ ಮಾತಿಲ್ಲ, ಸಹಕಾರದ ಮಾತು; ಬದಲಾಯಿತೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರ ನಿಲುವು ?

ತುರ್ತು ಪರಿಸ್ಥಿತಿಯ ದಿನಗಳನ್ನು ಅವರು ನೆನಪು ಮಾಡಿಕೊಂಡರು. ಆಗ ಜೈಲಿನಲ್ಲಿದ್ದ ತಮಗೆ ತಾಯಿ ಅಸು ನೀಗಿದಾಗಲೂ ಪೆರೋಲ್ ನೀಡಲಿಲ್ಲ ಎಂದು ರಾಜನಾಥ್ ಸಿಂಗ್ ಹೇಳಿದರು.

ನವದೆಹಲಿ : ಭಯೋತ್ಪಾದನೆಯನ್ನು ತಡೆಯಲು ಪಾಕಿಸ್ತಾನ ಅಸಮರ್ಥವಾಗಿದ್ದರೆ ಅವರ ಜೊತೆ ಸಹಕರಿಸಲು ಭಾರತ ಸಿದ್ಧ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ.

ಈಗ ಎರಡು ದಿನಗಳ ಹಿಂದೆ ಪಾಕಿಸ್ತಾನದ ಒಳಗೆ ನುಗ್ಗಿ ಹೊಡೆಯುವ ಸಚಿವರು ಈಗ ಸಹಕಾರದ ಮಾತನಾಡಿದ್ದಾರೆ.

ನುಗ್ಗಿ ಹೊಡೆಯುವುದು ಮತ್ತು ಸಹಕಾರ ನೀಡುವುದರ ನಡುವಿನ ವ್ಯತ್ಯಾಸವನ್ನು ಅವರು ವಿವರಿಸಿಲ್ಲ. ಸುದ್ದಿ ಸಂಸ್ಥೆಯೊಂದರ ಜೊತೆ ಮಾತನಾಡಿದ ರಾಜನಾಥ್ ಸಿಂಗ್ ಪಾಕಿಸ್ತಾನದ ಮೇಲೆ ಮತ್ತೆ ವಾಗ್ದಾಳಿ ನಡೆಸಿದರು.

ಭಯೋತ್ಪಾದನೆಯನ್ನು ಬಳಸಿಕೊಂಡು ಭಾರತವನ್ನು ಅಸ್ಥಿರಗೊಳುಸುವ ಕೆಲಸವನ್ನು ಪಾಕಿಸ್ತಾನ ಮಾಡಿದರೆ ಅದರ ಪರಿಣಾಮವನ್ನು ಪಾಕಿಸ್ತಾನವೇ ಎದುರಿಸಬೇಕಾಗುತ್ತದೆ ಎಂದು ಅವರು ಎಚ್ಚರಿಕೆ ನೀಡಿದರು.

ತುರ್ತು ಪರಿಸ್ಥಿತಿಯ ದಿನಗಳನ್ನು ಅವರು ನೆನಪು ಮಾಡಿಕೊಂಡರು. ಆಗ ಜೈಲಿನಲ್ಲಿದ್ದ ತಮಗೆ ತಾಯಿ ಅಸು ನೀಗಿದಾಗಲೂ ಪೆರೋಲ್ ನೀಡಲಿಲ್ಲ ಎಂದು ರಾಜನಾಥ್ ಸಿಂಗ್ ಹೇಳಿದರು.

Author

error: