ನೇಹಾ ಹಿರೇಮಠ ಕೊಲೆ ಪ್ರಕರಣ – ರಾಜಕೀಯಕ್ಕೆ ಬಳಕೆ : ಮುಖ್ಯಮಂತ್ರಿ ಸಿದ್ದರಾಮಯ್ಯ

CM Siddaramaiah : ಆರೋಪಿಯನ್ನು ಈಗಾಗಾಲೇ ಬಂಧಿಸಿದ್ದೇವೆ. ಕಾನೂನು ಕ್ರಮ ಕೈಗೊಂಡಿದ್ದೇವೆ. ಇದನ್ನು ರಾಜಕೀಯಕ್ಕೆ ಬಳಸಿಕೊಳ್ಳಬಾರದು

ಮೈಸೂರು : ಹುಬ್ಬಳ್ಳಿಯ ವಿದ್ಯಾರ್ಥಿನಿ ನೇಹಾ ಹಿರೇಮಠ ಹತ್ಯೆಯನ್ನು ಬಿಜೆಪಿ ರಾಜಕೀಯಕ್ಕೆ ಬಳಸಿಕೊಳ್ಳುತ್ತಿದೆ. ಇದು ಸರಿಯಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಟೀಕಿಸಿದ್ದಾರೆ.

ಇಂದು ಮೈಸೂರಿನಲ್ಲಿ ಸುದ್ದಿಗಾರರ ಜೊತೆ ಮಾತನಾಡುತ್ತಿದ್ದ ಅವರು ಈ ಹತ್ಯೆಯನ್ನು ನಾನು ಖಂಡಿಸುತ್ತೇನೆ. ಆದರೆ ಈ ಹತ್ಯೆ ನಡೆದಿದ್ದು ವೈಯಕ್ತಿಕ ಕಾರಣದಿಂದ ಎಂದರು.

ಈ ಹತ್ಯೆ ಮಾಡಿದ ಆರೋಪಿಯನ್ನು ಈಗಾಗಾಲೇ ಬಂಧಿಸಿದ್ದೇವೆ. ಕಾನೂನು ಕ್ರಮ ಕೈಗೊಂಡಿದ್ದೇವೆ. ಎಲ್ಲ ಕಾಲದಲ್ಲೂ ವೈಯಕ್ತಿಕ ಹತ್ಯೆ ನಡೆಯುತ್ತದೆ. ಇದನ್ನು ರಾಜಕೀಯಕ್ಕೆ ಬಳಸಿಕೊಳ್ಳಬಾರದು. ಜೊತೆಗೆ ಹತ್ಯೆ ನಡೆದ ತಕ್ಷಣ ಕಾನೂನು ವ್ಯವಸ್ಥೆ ಕೆಟ್ಟಿದೆ ಎಂದಲ್ಲ ಎಂದು ಮುಖ್ಯಮಂತ್ರಿ ಹೇಳಿದರು.

ಈ ನಡುವೆ ಅರೋಪಿಯ ತಂದೆ ತಾಯಿ ಕೂಡ ಘಟನೆಗಾಗಿ ಕ್ಷಮಾಯಾಚನೆ ಮಾಡಿದ್ದಾರೆ. ಇವರ ಕ್ಷಮೆಯನ್ನು ತೆಗೆದುಕೊಂಡು ನಾನೇನು ಮಾಡಲಿ ಎಂದು ನೇಹಾ ತಾಯಿ ಗೀತಾ ಹಿರೇಮಠ ಪ್ರಶ್ನಿಸಿದ್ದಾರೆ. ಹತ್ಯೆಯ ಆರೋಪಿಯನ್ನು ಜನರಿಗೆ ಒಹಿಸಬೇಕು ಎಂದು ಅವರು ಭಾವುಕರಾಗಿ ಹೇಳಿದರು.

ನನ್ನ ಮಗಳು. ಒಳ್ಳೆಯವಳು. ಅವಳು ತಪ್ಪು ಕೆಲಸ ಮಾಡುವವಳಲ್ಲ. ಫೋಟೋ ಯಾರು ಬೇಕಾದರೂ ಹಾಕಬಹುದು ಎಂದು ಅವರು ಹೇಳಿದರು.

Author

error: