Karnataka MLC Election-2024 : ಮೇಲ್ಮನೆಯ 11 ಸ್ಥಾನಗಳಿಗೆ ಚುನಾವಣೆ ಘೋಷಣೆ : ಜೂನ್ 13 ರಂದು ಮತದಾನ

Karnataka MLC Election-2024: ವಿಧಾನ ಪರಿಷತ್ತಿನ 11 ಸ್ಥಾನಗಳಿಗೆ ಕೇಂದ್ರ ಚುನಾವಣಾ ಆಯೋಗದಿಂದ ಚುನಾವಣೆ ಘೋಷಣೆ ಮಾಡಲಾಗಿದೆ

ಬೆಂಗಳೂರು  : ಕರ್ನಾಟಕ ವಿಧಾನ ಪರಿಷತ್ತಿನ 11 ಸ್ಥಾನಗಳಿಗೆ ಕೇಂದ್ರ ಚುನಾವಣಾ ಆಯೋಗದಿಂದ ಚುನಾವಣೆ ಘೋಷಣೆ ಮಾಡಲಾಗಿದೆ. ಜೂನ್.13ರಂದು ಮತದಾನ ನಡೆದು, ಅಂದೇ ಮತ ಏಣಿಕೆ ಕಾರ್ಯ ನಡೆಸಿ, ಫಲಿತಾಂಶ ಘೋಷಣೆ ಮಾಡಲಾಗುತ್ತಿದೆ.

ಈ ಕುರಿತು ಕೇಂದ್ರ ಚುನಾವಣಾ ಆಯೋಗದಿಂದ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದು, ಕರ್ನಾಟಕ ವಿಧಾನ ಪರಿಷತ್ತಿನ 11 ಸದಸ್ಯರ ಅಧಿಕಾರಾವಧಿಯು ಜೂನ್ 17 ರಂದು ಕೊನೆಗೊಳ್ಳಲಿದೆ ಎಂದಿದೆ

ಅರವಿಂದ್ ಕುಮಾರ್ ಅರಳಿ, ಎನ್ ಎಸ್ ಬೋಸರಾಜು, ಕೆ ಗೋವಿಂದರಾಜ್, ಡಾ.ತೇಜಸ್ವಿನಿ ಗೌಡ, ಮುನಿರಾಜು ಗೌಡ ಪಿಎಂ, ಕೆ.ಪಿ ನಂಜುಂಡಿ, ಬಿಎಂ ಫಾರೂಕ್, ರಘುನಾಥ್ ಮಲ್ಕಾಪುರೆ, ಎನ್ ರವಿಕುಮಾರ್, ಎಸ್ ರುದ್ರೇಗೌಡ ಹಾಗೂ ಕೆ ಹರೀಶ್ ಕುಮಾರ್ ಅವರ ಅವಧಿ ಮುಗಿಯಲಿದೆ.

ಜೂನ್ 3 ರಂದು ನಾಮಪತ್ರ ಸಲ್ಲಿಸಲು ಕೊನೆಯ ದಿನವಾಗಿದೆ. ಜೂನ್ 4 ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದೆ. ಜೂನ್ 6 ರಂದು ನಾಮಪತ್ರ ಹಿಂಪಡೆಯಲು ಕೊನೆಯ ದಿನವಾಗಿದೆ.

Author

error: