ನವದೆಹಲಿ : ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಸಂಪತ್ತನ್ನು ಮುಸ್ಲೀಂ ರಿಗೆ ಹಂಚುತ್ತದೆ ಎಂಬ ಹೇಟ್ ಸ್ಪೀಚ್ ಮಾಡಿರುವ ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಲಾಗಿದೆ.

ಪ್ರಧಾನಿ ಮೋದಿ ಅವರು ರಾಜಸ್ಥಾನದ ಚುನಾವಣಾ ಪ್ರಚಾರ ಸಭೆಯಲ್ಲಿ ಈ ಆರೋಪ ಮಾಡಿದ್ದರು.
ಇದು ಜನ ಪ್ರತಿನಿಧಿ ಕಾಯಿದೆ ಮತ್ತು ಚುನಾವಣಾ ನೀತಿ ಸಂಹಿತೆಯ ಉಲ್ಲಂಭನೆಯಾಗಿದೆ ಎಂದು ಕಾಂಗ್ರೆಸ್ ಆರೋಪ ಮಾಡಿದೆ,

ಇಂದು ಏಪ್ರಿಲ್ 22 ರಂದು ಕಾಂಗ್ರೆಸ್ ನಾಯಕರಾದ ಅಭೀಷೇಕ್ ಮನು ಸಿಂಗ್ವಿ. ಗುರುದೀಪ್ ಸಿಂಗ್ ಸಪ್ಪಲ್, ಮತ್ತು ಇತರ ನಾಯಕರು ಚುನಾವಣಾ ಆಯೋಗದ ಅಧಿಕಾರಿಗಳನ್ನು ಭೇಟಿ ಮಾಡಿ ದೂರನ್ನು ಸಲ್ಲಿಸಿದರು.

ಈ ದೂರಿನಲ್ಲಿ ಬಿಜೆಪಿಯ ವಿರುದ್ಧ ೧೬ ಅಂಶಗಳನ್ನು ಪಟ್ಟಿ ಮಾಡಿ ನೀಡಲಾಗಿದೆ. ಈ ಎಲ್ಲ ದೂರುಗಳಲ್ಲಿ ೧೯೫೧ ರ ಪ್ರಜಾಪ್ರತಿನಿಧಿ ಕಾನೂನನ್ನು ಹೇಗೆ ಉಲ್ಲಂಘಿಸಲಾಗಿದೆ ಎಂಬುದನ್ನು ವಿವರಿಸಲಾಗಿದೆ.

Author

Leave a Reply

Your email address will not be published. Required fields are marked *