ಧಾರವಾಡ : ಭಾರತದಲ್ಲಿ ಇರುವಂತಹ ಅದ್ಭುತ ಯುವಶಕ್ತಿ ಜಗತ್ತಿನಲ್ಲೇ ಇಲ್ಲ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೆಮ್ಮೆಯಿಂದ ಹೇಳಿದರು.
ಧಾರವಾಡದಲ್ಲಿ ಇಂದು ನಡೆದ “ಐಐಟಿ ಧಾರವಾಡ ಕಾಂಕ್ಲೇವ್ 2024” ಕಾರ್ಯಕ್ರಮದಲ್ಲಿ ಮಾತನಾಡಿದರು.
ಭಾರತದಂತಹ ಅಪಾರ ಸಂಖ್ಯೆಯುಳ್ಳ ಯುವಶಕ್ತಿ ಜಗತ್ತಿನ ಯಾವ ರಾಷ್ಟ್ರದಲ್ಲೂ ಇಲ್ಲ. ಭಾರತದ ಯುವ ಜನತೆ ಹೊಸ ಹೊಸ ಆವಿಷ್ಕಾರಗಳ ಮೂಲಕ ಪ್ರಪಂಚಕ್ಕೆ ಮಾದರಿಯಾಗಬೇಕು ಎಂದು ಹೇಳಿದರು.
ಯುವಶಕ್ತಿಗೆ ಪೂರಕ ಯೋಜನೆ :
ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಕೇಂದ್ರ ಸರ್ಕಾರ ಯುವಶಕ್ತಿಗೆ ಪೂರಕವಾಗುವಂತಹ ಅನೇಕ ಯೋಜನೆಗಳನ್ನು ರೂಪಿಸಿದೆ. ಯುವ ಸಮೂಹ ಇದರ ಉಪಯೋಗ ಪಡೆದು ದೇಶದ ಅಭಿವೃದ್ಧಿಗೆ ಶ್ರಮಿಸಬೇಕು ಎಂದು ಕರೆ ಕೊಟ್ಟರು.
ಧಾರವಾಡ ಐಐಟಿ ಉತ್ತಮ ಮಾರ್ಗದರ್ಶನ :
ಧಾರವಾಡ ಐಐಟಿ ವಿದ್ಯಾರ್ಥಿಗಳನ್ನು ಹೊಸ ಆವಿಷ್ಕಾರಗಳಲ್ಲಿ ತೊಡಗಿಸಿದೆ. ವಿದ್ಯಾರ್ಥಿಗಳಲ್ಲಿನ ಸಾಮರ್ಥ್ಯವನ್ನು ಹೆಚ್ಚಿಸುವಲ್ಲಿ ಉತ್ತಮ ಮಾರ್ಗದರ್ಶನ ನೀಡುವ ಮೂಲಕ ತನ್ನ ಕರ್ತವ್ಯವನ್ನು ಸಮರ್ಥವಾಗಿ ನಿಭಾಯಿಸುತ್ತಿದೆ ಎಂದು ಶ್ಲಾಘಿಸಿದರು.
ಕಾರ್ಯಕ್ರಮದಲ್ಲಿ ಶಾಸಕ ಅರವಿಂದ್ ಬೆಲ್ಲದ, ವಿಧಾನ ಪರಿಷತ್ ಸದಸ್ಯ ಎಸ್.ವಿ. ಸಂಕನೂರು, ಧಾರವಾಡದ ಐಐಟಿ ನಿರ್ದೇಶಕ ಮಹದೇವ್ ಪ್ರಸನ್ನ ಹಾಗೂ ಪ್ರಮುಖರು ಉಪಸ್ಥಿತರಿದ್ದರು.
