ರಾಮನಗರ: ಕ್ಷೇತ್ರದ ಉಪ ಚುನಾವಣೆಯ ಎನ್ ಡಿಎ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಅವರ ಪರವಾಗಿ ಸತತ ಮೂರನೇ ದಿನವೂ ಪ್ರಚಾರ ನಡೆಸಿದ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು, ಡಿಕೆಶಿ ಸಹೋದರರ ವಿರುದ್ಧ ಟೀಕಾ ಪ್ರಹಾರ ನಡೆಸಿದರು.

ಸೇರಿ ವಿವಿಧ ಪ್ರದೇಶಗಳಲ್ಲಿ ಪ್ರಚಾರ ನಡೆಸಿದ ಅವರು, ಕನಕಪುರವನ್ನು ಲೂಟಿ ಮಾಡುವ ಕೆಲಸ ನಡೆಯುತ್ತಿದೆ. ಜನರ ರಕ್ತ ಹಿರಲಾಗುತ್ತಿದೆ ಎಂದು ಮಾಜಿ ಪ್ರಧಾನಿಗಳು ಆಕ್ರೋಶ ವ್ಯಕ್ತಪಡಿಸಿದರು.

ಕನಕಪುರಕ್ಕೆ ಹೋಗಿ ನೋಡಿಕೊಂಡು ಬನ್ನಿ. ಬೇರೆಯವರ ಜಮೀನನ್ನು ಹೇಗೆ ಲೂಟಿ ಮಾಡಿದ್ದಾರೆ ಅಂತ ನೋಡಿಕೊಂಡು ಬನ್ನಿ ಎಂದು ಆರೋಪ ಮಾಡಿದ ಮಾಜಿ ಪ್ರಧಾನಿಗಳು, ನಾನು ಇನ್ನೊಂದು ಚುನಾವಣೆಗೆ ರಾಮಪುರಕ್ಕೆ ಬರುತ್ತೇನೆ. ಅವರು ನಿಮ್ಮ ರಕ್ತ ಹೀರುತ್ತಿದ್ದಾರೆ. ಇಂತಹ ಸರ್ಕಾರವನ್ನು ಕಿತ್ತು ಒಗೆಯಬೇಕು ಎಂದು ದೇವೆಗೌಡರು ಗುಡುಗಿದರು.

ನಾನು ಸಾಮಾನ್ಯ ರೈತನ ಮಗ. ರೈತರ ಕಷ್ಟ ನನಗೆ ಗೊತ್ತು.ನಾನು‌ ನನ್ನ ಮೊಮ್ಮಗನ ಗೆಲ್ಲಿಸಲು ಬಂದಿದ್ದೇನೆ ಎನ್ನುತ್ತಾರೆ ಕಾಂಗ್ರೆಸ್ ನವರು. ನಾನು ನಿಮ್ಮ ಆಶೀರ್ವಾದದ ಬಲದಿಂದ ಇನ್ನೂ ನಾಲ್ಕಾರು ವರ್ಷ ಬದುಕಿರುತ್ತೇನೆ. ಹೋರಾಟ ಮಾಡ್ತೇನೆ. ಈ ಸರ್ಕಾರ ಲೂಟಿ‌ ಮಾಡುತ್ತಿದೆ. ಇಂತಹ ಸರ್ಕಾರವನ್ನು ತೆಗೆಯುವ ತನಕ ರಾಜ್ಯಕ್ಕೆ ನೆಮ್ಮದಿ ಇಲ್ಲ. ಬಡವರು ಬದುಕಲ್ಲ, ರೈತರಿಗೆ ನೆಮ್ಮದಿ ಇಲ್ಲ. ನಾನು ಯಾವಾಗಲೂ ಈ ಸರ್ಕಾರದ ಬಗ್ಗೆ ಮಾತಾಡ್ತಾ ಇರಲಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ನಾನು ಚನ್ನಪಟ್ಟಣ ಕ್ಷೇತ್ರಕ್ಕೆ ಏನು ಮಾಡಿದೆ ಅಂತ ಹೇಳಲ್ಲ. ಆದರೆ ಕೆಲಸದ‌ ಪಟ್ಟಿ ಮಾಡಿ. ನಿಖಿಲ್ ಕುಮಾರಸ್ವಾಮಿ ಪರವಾಗಿ ಕೈಚಾಚಲು ಬಂದಿದ್ದೇನೆ. ಹೈನುಗಾರಿಕೆಗೆ ಈ ಕ್ಷೇತ್ರದಲ್ಲಿ ಶಕ್ತಿ ಕೊಟ್ಟವರು ದೇವೆಗೌಡರು. ನಾನು ಅಮುಲ್ ಸಂಸ್ಥೆ ಕಾರ್ಯಕ್ರಮದಲ್ಲಿ, ಕುರಿಯನ್ ಅವರಿಗೆ ಒಂದು ಮಿಲ್ಕ್ ಫೆಡರೇಷನ್ ರಾಜ್ಯದಲ್ಲಿ ಸ್ಥಾಪನೆ ಮಾಡಿ ಅಂತ ಕೇಳಿದೆ. ಆದರೆ ಅವರು ಆಗಲ್ಲ ಎಂದರು. ದೇಶಕ್ಕೊಂದೇ ತಾಜ್ ಮಹಲ್ ಇದೆ. ಹಾಗೆಯೇ ಒಂದು ಸಂಸ್ಥೆ ಮಾತ್ರ ಕಟ್ಟಲು ಸಾಧ್ಯ ಎಂದಿದ್ದರು. ಆದರೆ ಸವಾಲಾಗಿ ರಾಜ್ಯದಲ್ಲಿ ಮಿಲ್ಕ್ ಫೆಡರೇಶನ್ ಆಗಿದೆ. ಇದರ ಹಿಂದೆ ನನ್ನ ಪರಿಶ್ರಮ ಎಷ್ಟಿದೆ ಎಂದು ಹೇಳೋದಿಲ್ಲ ಎಂದರು ಅವರು.

ನಾನು ಇಗ್ಗಲೂರು ಡ್ಯಾಮ್ ನಾನು ಕಟ್ಟಿದೆ. ಆದರೆ ಅವರಾರೋ ಭಗಿರಥ, ನಾನು ನೀರು ತಂದೆ ಎನ್ನುತ್ತಾರೆ. ಇದು ಈ ರೈತನ ಮಗನ ಕೆಲಸ. ನಿಮ್ಮ ಮಣ್ಣಿನ ಮಗ ಮಾಡಿದ ಕೆಲಸ. ನಾನು ಇಂದು ಮುಖ್ಯಮಂತ್ರಿ, ನಾಳೆಯೂ ಮುಖ್ಯಮಂತ್ರಿ ಎಂದು ಅವರು ಹೇಳಿದ್ದಾರೆ. ಅಯ್ಯೋ ರಾಮ.. ಅಂತ ವ್ಯಂಗ್ಯವಾಗಿ ನಕ್ಕರು ದೇವೆಗೌಡರು.

ಮಾಜಿ ಪ್ರಧಾನಿಗಳು ಹೊಂಗನೂರು ವ್ಯಾಪ್ತಿಯ ರಾಂಪುರ, ಮುನಿಯಪ್ಪ ದೊಡ್ಡಿ, ಮೇಳೆದೊಡ್ಡಿ, ಹೋಡಿಕೆ ಹೊಸಹಳ್ಳಿಗಳಲ್ಲಿ ದೇವೇಗೌಡರು ಪ್ರಚಾರ ನಡೆಸಿದರು.

Author

Leave a Reply

Your email address will not be published. Required fields are marked *