ಕಲಬುರ್ಗಿ : ಏನೇ ಆಗಲಿ ನಾನು ಬಂಡಾಯ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸುವೆ ಎಂದು ಬಿಜೆಪಿ ಬಂಡಾಯ ಅಭ್ಯರ್ಥಿ ಸುರೇಶ್ ಸಜ್ಜನ ಹೇಳಿದ್ದಾರೆ.

ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಈ‌ ಭಾಗದಲ್ಲಿ ಪದವೀಧರರ ಸಮಸ್ಯೆಗಳು ಬಹಳಷ್ಟು ಇವೆ. ಅವರ ಸಮಸ್ಯೆಗಳನ್ನು ಪರಿಹರಿಸಲು ನಾನು ಬದ್ದನಾಗಿದ್ದೆನೆ. ಈ ಭಾಗದಲ್ಲಿ ಮೊದಲ ಬಾರಿಗೆ ಪದವೀಧರ ಕ್ಷೇಮಾಭಿವೃದ್ಧಿ ಸಂಘ ಮಾಡಿದ್ದೇನೆ. ಅನೇಕ ಪದವೀಧರ ಮತದಾನ ನೊಂದಣಿ ಕಾರ್ಯ ಮಾಡಿದ್ದೇನೆ ಎಂದರು.

ಇನ್ನು ಹೆಚ್ಚಿನ ಕೆಲಸ‌ ಮಾಡುವೆ ಎಂದ ಅವರು, ಯಡಿಯೂರಪ್ಪ, ರಾಜುಗೌಡ ಅವರ ಮೂಲಕ ನನ್ನ ಕೆಲಸಗಳನ್ನ ಮನದಟ್ಟು ಮಾಡಿದ್ದೇನೆ. ಯಾವುದೇ ಕಾರಣಕ್ಕೂ ಬಿಜೆಪಿ ಕಳೆದುಕೊಳ್ಳಬಾರದೆಂದು ಮನವೊಲಿಸಿದ್ದೇನೆ. ಆದರೆ ಅಂತಿಮವಾಗಿ ಬಿಜೆಪಿ ಟಿಕೆಟ್ ಬೇರೊಬ್ಬರಿಗೆ ನೀಡಿದೆ. ಹೀಗಾಗಿ ನಾಮಪತ್ರ ಸಲ್ಲಿಕೆ ಮಾಡುವೆ ಗೆದ್ದರು ಸೋತರು ನಾನು ಪಕ್ಷ ಬಿಟ್ಟು ಹೋಗುವುದಿಲ್ಲ ಎಂದು ಹೇಳಿದ್ದಾರೆ.

Author

Leave a Reply

Your email address will not be published. Required fields are marked *