ನವದೆಹಲಿ : ಮೋದಿಜಿ ನೀವು ಹೆದರಿದ್ದೀರಾ ? ಯಾಕೆ ? ಹೆದರಬೇಡಿ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಟೀಕಿಸಿದ ರೀತಿ ಇದು. ಅದಾನಿ ಮತ್ತು ಅಂಬಾನಿಯವರ ಬಗ್ಗೆಕೊಠಡಿಯ ಒಳಗೆ ಮಾತನಾಡುತ್ತಿದ್ದ ನೀವು ಈಗ ಸಾರ್ವಜನಿಕವಾಗಿ ಮಾತನಾಡುತ್ತಿದ್ದೀರಿ ಯಾಕೆ ? ಸ್ನೇಹಿತರನ್ನು ಕೈಬಿಟ್ಟಿರಾ ಎಂದು ಅವರು ವ್ಯಂಗ್ಯವಾಗಿ ಪ್ರಶ್ನಿಸಿದ್ದಾರೆ.

ಉದ್ಯಮಿಗಳಾದ ಅದಾನಿ ಮತ್ತು ಅಂಬಾನಿ ನಮ್ಮ ಪಕ್ಷಕ್ಕೆ ಕಪ್ಪುಹಣ ಕಳುಹಿಸಿದ್ದಾರೆಯೇ ಎಂದು ಸಾರ್ವಜನಿಕವಾಗಿ ಪ್ರಶ್ನಿಸಿದ್ದೀರಿ. ಈ ಬಗ್ಗೆ ಸಿಬಿಐ ಅಥವಾ ಇಡಿ ತನಿಖೆ ನಡೆಸಿಬಿಡಿ ಎಂದು ಪ್ರಧಾನಿ ನರೇಂದ್ರ ಮೋದಿ ಅವರಿಗೆ ರಾಹುಲ್ ಗಾಂಧಿ ಸವಾಲು ಹಾಕಿದ್ದಾರೆ.

ಕಳೆದ ಐದು ವರ್ಷಗಳಿಂದ ಅದಾನಿ- ಅಂಬಾನಿ ವಿಷಯ ಪ್ರಸ್ತಾಪಿಸುತ್ತಿದ್ದ ಶಹಜಾದೆ ಲೋಕಸಭೆ ಚುನಾವಣೆ ಘೋಷಣೆಯಾದ ನಂತರ ಅವರ ಹೆಸರನ್ನು ಪ್ರಸ್ತಾಪಿಸುವುದನ್ನು ಏಕೆ ನಿಲ್ಲಿಸಿದ್ದಾರೆ ಎಂದು ನನಗೆ ಆಶ್ಚರ್ಯವಾಗುತ್ತಿದೆ. ಟೆಂಪೋಗಳಲ್ಲಿ ಕಪ್ಪು ಹಣದ ಎಷ್ಟು ಮೂಟೆಗಳನ್ನು ನೀವು ಪಡೆದಿದ್ದೀರಿ ಎಂದು ದೇಶಕ್ಕೆ ಉತ್ತರಿಸಬೇಕಿದೆ ಎಂದು ಚುನಾವಣಾ ಭಾಷಣದ ವೇಳೆ ಪ್ರಧಾನಿ ಮೋದಿ ಹೇಳಿದ್ದರು.

ಇಂದು ಮೋದಿ ಹೇಳಿಕೆಗೆ ವಿಡಿಯೋ ಮೂಲಕ ತಿರುಗೇಟು ನೀಡಿರುವ ರಾಹುಲ್ ಗಾಂಧಿ, ಮೋದಿ ಅವರು “ಮನಿ ಇನ್ ಎ ಟೆಂಪೋ” “ವೈಯಕ್ತಿಕ ಅನುಭವ” ದಿಂದ ಮಾತನಾಡುತ್ತಿದ್ದರೆ ವ್ಯಂಗ್ಯವಾಡಿದ್ದಾರೆ.

Author

Leave a Reply

Your email address will not be published. Required fields are marked *