ಬೆಂಗಳೂರು : ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಹೃದಯದ ಶಸ್ತ್ರ ಚಿಕಿತ್ಸೆಗೆ ಚೆನ್ನೈಗೆ ತೆಳದಿದ್ದಾರೆ. ಗುರುವಾರ ಶಸ್ತ್ರ ಚಿಕಿತ್ಸೆ ನಡೆಯಲಿದೆ. ನಂತರ ಸುಮಾರು ಒಂದು ವಾರ ಅವರು ಅಲ್ಲಿಯೇ ವಿಶ್ರಾಂತಿ ಪಡೆಯಲಿದ್ದಾರೆ.
ಅವರಿಗೆ ಮೊದಲಿನಿಂದಲೂ ಹೃದಯದ ಸಮಸ್ಯೆ ಇತ್ತು. ಈಗಾಗಲೇ ಎರಡು ಬಾರಿ ಅವರಿಗೆ ಶಸ್ತ್ರ ಚಿಕಿತ್ಸೆ ಆಗಿದೆ. ಈಗ ಅವರಿಗೆ ಸ್ಟಂಟ್ ಅಳವಡಿಕೆ ಮಾಡಲಾಗುವುದು.
ಶಸ್ತ್ರ ಚಿಕಿತ್ಸೆಯ ನಂತರ ವಿಶ್ರಾಂತಿ ಪಡೆದು ರಾಜ್ಯಕ್ಕೆ ಹಿಂತಿರುಗಿ ಬರುವುದಾಗಿ ಅವರು ಹೇಳಿದ್ದಾರೆ.
ಗುಣವಾಗಿ ವಾಪಸ್ ಬನ್ನಿ ಸಾರ್…
