ಕೇಜ್ರಿವಾಲ್ ಬಿಡುಗಡೆಗೆ ಪಿಐಎಲ್ : ಅರ್ಜಿ ವಜಾಗೊಳಿಸಿ ದಂಡ ವಿಧಿಸಿದ ದೆಹಲಿ ಹೈಕೋರ್ಟ್

Delhi CM Arvind Kejriwal : ಜಾರಿ ನಿರ್ದೇಶನಾಲಯದ ಪ್ರಕರಣಗಳಿಂದಲೂ ಅವರನ್ನು ಮುಕ್ತಗೊಳಿಸಬೇಕು ಎಂದು ಅರ್ಜಿ ದಾರರು ಮನವಿ ಮಾಡಿದ್ದರು.

ನವದೆಹಲಿ : ಇದನ್ನು ವಿಶೇಷ ಪ್ರಕರಣ ಎಂದು ಪರಿಗಣಿಸಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರಿಗೆ ಜಾಮೀನು ನೀಡಬೇಕು ಎಂಬ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ದೆಹಲಿ ಹೈಕೋರ್ಟ್ ವಜಾಗೊಳಿಸಿದೆ.

ಈ ಅರ್ಜಿ ಸಲ್ಲಿಸಿದ ನಾಲ್ಕನೆಯ ವರ್ಷದ ಕಾನೂನು ವಿದ್ಯಾರ್ಥಿಗೆ 70 ಸಾವಿರ ರೂಪಾಯಿ ದಂಡವನ್ನು ನ್ಯಾಯಾಲಯ ವಿಧಿಸಿದೆ.

ಮುಖ್ಯಮಂತ್ರಿ ಜೈಲಿನಲ್ಲಿ ಇರುವುದರಿಂದ ದೆಹಲಿ ಸರ್ಕಾರದ ಕೆಲಸ ಕಾರ್ಯಗಳು ನಿಂತು ಹೋಗಿವೆ. ಈಗ ಈ ಪ್ರಕರಣವನ್ನು ವಿಶೇಷ ಪ್ರಕರಣ ಎಂದು ಪರಿಗಣಿಸಿ ಅವರಿಗೆ ಜಾಮೀನು ನೀಡಿ ಬಿಡುಗಡೆ ಮಾಡಬೇಕು ಎಂದು ಈ ಅರ್ಜಿಯಲ್ಲಿ ಮನವಿ ಮಾಡಲಾಗಿತ್ತು.

ಜಾರಿ ನಿರ್ದೇಶನಾಲಯದ ಪ್ರಕರಣಗಳಿಂದಲೂ ಅವರನ್ನು ಮುಕ್ತಗೊಳಿಸಬೇಕು ಎಂದು ಅರ್ಜಿ ದಾರರು ಮನವಿ ಮಾಡಿದ್ದರು.

ಉಸ್ತುವಾರಿ ಮುಖ್ಯ ನ್ಯಾಯಾದೀಶ ಮನವೋಹನ್ ಅವರನ್ನು ಒಳಗೊಂಡ ವಿಭಾಗೀಯ ಪೀಠ ರೀಟ್ ಅರ್ಜಿಯನ್ನು ವಜಾಗೊಳಿಸಿ 70 ಸಾವಿರ ರೂಪಾಯಿ ವೆಚ್ಚವನ್ನು ತುಂಬುವಂತೆ ಅರ್ಜಿದಾರರಿಗೆ ಸೂಚಿಸಿದೆ.

Author

error: